ಉಡುಪಿ: ಶ್ರೀ ಭುವನೇಂದ್ರ ತೀರ್ಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ಕೋಟೇಶ್ವರ ಇದರ ಆಶ್ರಯದಲ್ಲಿ ನಡೆಯುವ ಶ್ರೀ ಯಾದವೇಂದ್ರ ತೀರ್ಥ ಆಯುರ್ವೇದ ವೈದ್ಯಶಾಲಾ ಹಾಗೂ ಶ್ರೀ ಭುವನೇಂದ್ರ ತೀರ್ಥ ಪಂಚಕರ್ಮ ಸೆಂಟರ್ ಇದರ ವತಿಯಿಂದ ಮತ್ತು ಜಿಎಸ್‌ಬಿ ಯುವಕ ಮಂಡಳಿ ಇವರ ಸಹ ಪ್ರಾಯೋಜಕತ್ವದಲ್ಲಿ 39 ನೇ ಉಚಿತ ಆರ್ಯುವೇದ ತಪಾಸಣಾ ಶಿಬಿರ ಮತ್ತು ಉಚಿತ ಔಷಧ ವಿತರಣಾ ಕಾರ್ಯಕ್ರಮ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಭುವನೇಂದ್ರ ತೀರ್ಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ದಿನೇಶ ಕಾಮತ್, ಕಾಶೀ ಮಠದ ಯತಿವರ್ಯರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದದಿಂದ ಈ ಆಯುರ್ವೇದ ವೈದ್ಯಶಾಲೆಯನ್ನು ನಿರ್ಮಿಸಲಾಗಿದ್ದು ಸಂಸ್ಥೆಯ ವತಿಯಿಂದ ನಡೆಯುವ ಉಚಿತ ಆಯುರ್ವೇದ ಶಿಬಿರದ ಮತ್ತು ಕೋಟೇಶ್ವರದ ಕೇಂದ್ರದಲ್ಲಿ ಲಭಿಸುವ ಆಯುರ್ವೇದ ತಪಾಸಣೆಯ ಕುರಿತು ಮಾಹಿತಿ ನೀಡಿದರು.
ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲೆಯ ಆರ್ಯುವೈದ್ಯ ಡಾ. ಎಮ್.ಎಸ್ ಕಾಮತ್ ಮಾತನಾಡುತ್ತಾ, ಕಾಶೀ ಮಠದ ಸರ್ವ ಯತಿವರ್ಯರು ಆಯುರ್ವೇದದ ಪಂಡಿತರಾಗಿದ್ದು ಸಮಾಜದ ಸರ್ವ ವರ್ಗದ ಜನರಿಗೆ ಆಯುರ್ವೇದದ ಚಿಕಿತ್ಸೆಯನ್ನು ನೀಡುತ್ತಿದ್ದರು. ಮುಂದಿನ ದಿನಗಳಲ್ಲಿ ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ ಹಾಗೂ ಶ್ರೀ ಭುವನೇಂದ್ರ ತೀರ್ಥ ಪಂಚಕರ್ಮ ಸೆಂಟರ್ ಆಯುರ್ವೇದದ ಬೃಹತ್ ಕೇಂದ್ರವಾಗಲಿದೆ ಎಂದರು.
ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ ವಿಠ್ಠಲದಾಸ ಶೆಣೈ, ಜಿ.ಎಸ್.ಬಿ ಯುವಕ ವೃಂದದ ಅಧ್ಯಕ್ಷ ಸುಬ್ರಹ್ಮಣ್ಯ ಪೈ, ಶ್ರೀ ಭುವನೇಂದ್ರ ತೀರ್ಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ಕೋಟೇಶ್ವರ ಇದರ ಉಪಾಧ್ಯಕ್ಷ ಶ್ರೀಧರ ಕಾಮತ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಡಾ.ಎಮ್.ಎಸ್ ಕಾಮತ್, ಡಾ. ಗಾಯತ್ರಿ ಪಡಿಯಾರ್, ಡಾ. ಸದಾನಂದ ಭಟ್, ಡಾ. ಸುಷ್ಮಾ ಭಟ್, ಡಾ. ಅಶ್ವಿನಿ ನಾಯಕ್ ಸಾರ್ವಜನಿಕರಿಗೆ ತಪಾಸಣೆ ನಡೆಸಿದರು. ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಜಿಎಸ್‌ಬಿ ಯುವಕ ಮಂಡಳಿ, ನೆಟ್ ಜಿಎಸ್‌ಬಿ ಕೋಟೇಶ್ವರದ ಸ್ವಯಂಸೇವಕರು, ಆಯುರ್ವೇದ ವಿದ್ಯಾರ್ಥಿಗಳಾದ ಪ್ರೀತಿ ಹೆಗ್ಡೆ, ಧನ್ಯಾ ಶೆಣೈ, ಭಾರ್ಗವಿ ಬಾಳಿಗಾ, ಅನುಷಾ ಭಟ್, ಶ್ರಾವ್ಯಾ ಪೈ, ರಮ್ಯಾ ರಾವ್, ಅಧಿತಿ ಆಚಾರ್ಯ ಸಹಕರಿಸಿದರು.
ವಿವೇಕ ಟ್ರೇಡರ್ ಮಂಗಳೂರು ಇವರು ಔಷಧಿಗಳನ್ನು ಪ್ರಾಯೋಜಿಸಿದ್ದರು. ದೇವಾನಂದ ಪ್ರಭು ಸ್ವಾಗತಿಸಿ, ಮುರಳೀಧರ ಪೈ ವಂದಿಸಿದರು. ಪಲ್ಲವಿ ಭಟ್ ಕಾರ್ಯಕ್ರಮ ನಿರೂಪಿಸಿದರು.