ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಹಾಗೂ ಎಸ್.ಡಿಎಂ. ಪದವಿ ಕಾಲೇಜು ಜಂಟಿ ಆಶ್ರಯದಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಯಿತು. ಪ್ರವೀಣ್ ದಿಂಗೋಡಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಮಹಾಬಲೇಶ್ ಶೆಟ್ಟಿ ಹಾಗೂ ಸಮಾಜ ಸೇವಕ ಗಣೇಶ್ ಮೂಲ್ಕಿ ತಮ್ಮ ಮಾತುಗಳಲ್ಲಿ ಜಾಗೃತಿ ಮೂಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಅರುಣಾ ಕಾಮತ್, ಎಬಿವಿಪಿ ಮಂಗಳೂರು ಮಹಾನಗರ ಕಾರ್ಯದರ್ಶಿ ಶ್ರೀಪಾದ ತಂತ್ರಿ ಉಪಸ್ಥಿತರಿದ್ದರು. ಪವನ ಕಾರ್ಯಕ್ರಮ ನಿರೂಪಿಸಿದರು. ಮನೀಶ್ ಶೆಟ್ಟಿ, ಪಲ್ಲವಿ, ಪಂಚಮಿ, ಜಾನ್ವಿ ಮುಂತಾದವರಿದ್ದರು.