Sunday, January 19, 2025
Sunday, January 19, 2025

ಮನೆಯಲ್ಲಿಯೇ ಕುಳಿತು ಅಂಚೆ ಇಲಾಖೆಯ ಸೇವೆಗಳನ್ನು ಸದುಪಯೋಗಪಡಿಸಲು ಅಂಚೆ ಮಿತ್ರ ಯೋಜನೆ

ಮನೆಯಲ್ಲಿಯೇ ಕುಳಿತು ಅಂಚೆ ಇಲಾಖೆಯ ಸೇವೆಗಳನ್ನು ಸದುಪಯೋಗಪಡಿಸಲು ಅಂಚೆ ಮಿತ್ರ ಯೋಜನೆ

Date:

ಭಾರತೀಯ ಅಂಚೆ ಇಲಾಖೆ ಕೋವಿಡ್-19 ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮನೆಯೊಳಗೆ ಕುಳಿತು ಅಂಚೆ ಇಲಾಖೆಯ ವ್ಯವಹಾರಗಳನ್ನು ನಡೆಸುವಲ್ಲಿ ಜನಸಾಮನ್ಯರಿಗೆ ಅನುಕೂಲವಾಗುವಂತೆ ‘ಅಂಚೆ ಮಿತ್ರ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಅದರ ಮುಖಾಂತರ ಮನೆಯಲ್ಲೇ ಕುಳಿತು ವೈದ್ಯಕೀಯ ಪಾರ್ಸೆಲ್ ಪಿಕ್ ಅಪ್ ಇತ್ಯಾದಿ ತುರ್ತು ಅಗತ್ಯಗಳಿಗೆ ಮನವಿ ಕಳುಹಿಸಬಹುದು.

ಮನೆಯಲ್ಲೇ ಕುಳಿತು ಭಾರತೀಯ ಅಂಚೆ ಇಲಾಖೆಯ ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆಗಳ ಆನ್ ಲೈನ್ ಪಾವತಿಗೆ ಮನವಿ ಸಲ್ಲಿಸಬಹುದಾಗಿದೆ. ಮನಿಯಾರ್ಡರ್ ಪಡೆಯಲು ಪಿಂಚಣಿದಾರರು ತಮ್ಮ ವಿಳಾಸದಲ್ಲಿ ಸದ್ಯ ಇಲ್ಲದೇ ಇದ್ದಲ್ಲಿ ಆ ಹಣವನ್ನು ಉಳಿತಾಯ ಖಾತೆಗೆ ಜಮಾ ಮಾಡುವಂತೆ ಮನವಿ ಮಾಡಬಹುದು.

ಅಂಚೆ ಮಿತ್ರ ಬಳಸಲು http://karnatakapost.gov.in/anchemitra ಲಾಗಿನ್ ಆದಾಗ ಅದರಲ್ಲಿ ಹಾಗೂ ತಮ್ಮ ತುರ್ತು ಅವಶ್ಯಕತೆಗಳಿಗಾಗಿ ಸೇವಾ ವಿನಂತಿಯನ್ನು ಕಳುಹಿಸಿ ಸೇವೆ ಪಡೆಯಬಹುದಾಗಿದೆ. ಈ ತಂತ್ರಾಂಶದ ಮೂಲಕ ತ್ವರಿತ ಅಂಚೆ, ನೋಮದಾಯಿತ ಅಂಚೆ, ಮನಿ ಆರ್ಡರ್, ಸಂಧ್ಯಾ ಸುರಕ್ಷಾ ಹಣವನ್ನು ಖಾತೆಗೆ ರವಾನೆ, ಉಳಿತಾಯ ಖಾತೆಯಿಂದ ಹಣ ವರ್ಗಾವಣೆ, ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆ ಪಾವತಿ ಬಗ್ಗೆ ವಿಚಾರಣೆ, ಐಪಿಪಿಬಿ ಖಾತೆ ತೆರೆಯುವ ಬಗ್ಗೆ ವಿವರಣೆ ಹೀಗೆ ಇಲಾಖೆಯ ವಿವಿಧ ಸೇವೆಗಳನ್ನು ಪಡೆಯಲು ವಿನಂತಿ ಕಳುಹಿಸಿದಾಗ ಆಯಾಯ ಪ್ರದೇಶಗಳ ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಇದನ್ನು ಪರೀಶೀಲಿಸಿ ಮನವಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ನಂತರ ಗ್ರಾಹಕರು ಅಪೇಕ್ಷಿಸಿದ್ದಲ್ಲಿ ಅದರ ವಿವಿಧ ಮಜಲುಗಳ ಬಗ್ಗೆ ಮಾಹಿತಿ ನೀಡಲಾಗುವುದು. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ.

ಇಂತಹ ಬಹು ಉಪಯುಕ್ತ ಅಂಚೆ ಮಿತ್ರ ತಂತ್ರಾಂಶವು ಕೋವಿಡ್-19 ನ ಈ ಸಂದರ್ಭದಲ್ಲಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಉಪಯೋಗಿಸಬಹುದು ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ಚಂದ್ರ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!