ವಾಂಡರರ್ಸ್: ಭಾರತ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿ ತನ್ಮೂಲಕ ಸರಣಿ ಸಮಬಲಗೊಂಡಿದೆ.

ನಾಲ್ಕನೇ ದಿನವಾದ ಇಂದು ಡೀನ್ ಎಲ್ಗರ್ ಅಜೇಯ 96 ರನ್ ಗಳಿಸಿ ಜವಾಬ್ದಾರಿಯುತವಾಗಿ ’ನಾಯಕನ’ ಪಾತ್ರ ಸರಿಯಾಗಿ ನಿರ್ವಹಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಗೆಲ್ಲಲು 240 ರನ್ ಗುರಿಯನ್ನು ಬೆನ್ನಟ್ಟಿದ ಆಫ್ರಿಕಾ ಕೇವಲ 3 ವಿಕೆಟ್ ನಷ್ಟಕ್ಕೆ ಗುರಿಯನ್ನು ಸುಲಭವಾಗಿ ಸಾಧಿಸಿ ಸರಣಿಯ ಕೊನೆಯ ಪಂದ್ಯದ ಮಹತ್ವವನ್ನು ಹೆಚ್ಚಿಸಿದೆ.
ಸಂಕ್ಷಿಪ್ತ ಸ್ಕೋರ್: ಭಾರತ ಮೊದಲ ಇನ್ನಿಂಗ್ಸ್ 202, ಎರಡನೇ ಇನ್ನಿಂಗ್ಸ್ 266. ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 229, ಎರಡನೇ ಇನ್ನಿಂಗ್ಸ್ 243/3