ನವದೆಹಲಿ, ಸೆ.26: ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರು ಅಗ್ರ 10 ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕಕ್ಕೆ ಮರು-ಪ್ರವೇಶಿಸಿದ್ದಾರೆ. ಸುದೀರ್ಘ ಅಂತರದ ನಂತರ ಫಾರ್ಮ್‌ಗೆ ಮರಳಿದ ಪಂತ್, ಚೆನ್ನೈನಲ್ಲಿ ಬಾಂಗ್ಲಾದೇಶದ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ಪರಿಣಾಮ ಅವರಿಗೆ 731 ರೇಟಿಂಗ್ ಅಂಕಗಳು ಲಭ್ಯವಾಗುವ ಮೂಲಕ ಆರನೇ ಸ್ಥಾನ ಪಡೆಯುವಂತಾಯಿತು. ಏತನ್ಮಧ್ಯೆ, ನಾಯಕ ರೋಹಿತ್ ಶರ್ಮಾ ಐದು ಸ್ಥಾನಗಳ ಕುಸಿತದ ಹೊರತಾಗಿಯೂ ಅಗ್ರ 10 ರಲ್ಲಿ ಉಳಿದುಕೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡೂ ಇನ್ನಿಂಗ್ಸ್‌ಗಳಲ್ಲಿ 10 ಕ್ಕಿಂತ ಕಡಿಮೆ ರನ್ ಗಳಿಸಿ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ 716 ಅಂಕಗಳೊಂದಿಗೆ ಹತ್ತನೇ ಸ್ಥಾನದಲ್ಲಿದ್ದಾರೆ.
ಟಾಪ್ 10 ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್: 6ನೇ ಸ್ಥಾನಕ್ಕೆ ಜಿಗಿದ ರಿಷಬ್ ಪಂತ್

ಟಾಪ್ 10 ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್: 6ನೇ ಸ್ಥಾನಕ್ಕೆ ಜಿಗಿದ ರಿಷಬ್ ಪಂತ್
Date: