ಢಾಕಾ: ಬಾಂಗ್ಲಾದೇಶದಲ್ಲಿ ಪವರ್ ಗ್ರಿಡ್ ವೈಫಲ್ಯದಿಂದ ಜನರು ಸಮಸ್ಯೆ ಎದುರಿಸಿದರು. ರಾಷ್ಟ್ರೀಯ ಗ್ರಿಡ್ ವೈಫಲ್ಯದಿಂದಾಗಿ ದೇಶದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ.
ಪವರ್ ಗ್ರಿಡ್ನ ಎಂಜಿನಿಯರ್ಗಳು ಮತ್ತು ತಂತ್ರಜ್ಞರು ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಬಾಂಗ್ಲಾ ಸಚಿವ ಜುನೈದ್ ಅಹ್ಮದ್ ಪಾಲಕ್ ಹೇಳಿದ್ದಾರೆ.
ಮಂಗಳವಾರ ಬಾಂಗ್ಲಾ ಸ್ಥಳೀಯ ಸಮಯ 2 ಗಂಟೆಗೆ ಗ್ರಿಡ್ ನಲ್ಲಿ ತಾಂತ್ರಿಕ ದೋಷದಿಂದ ಅದು ಕಾರ್ಯನಿರ್ವಹಣೆಯನ್ನು ನಿಲ್ಲಿಸಿದ ಪರಿಣಾಮ ಬಾಂಗ್ಲಾದಲ್ಲಿ ಮಿಲಿಯಗಟ್ಟಲೆ ಜನರು ಆತಂಕಕ್ಕೀಡಾದರು ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಬಾಂಗ್ಲಾದೇಶದ ಪೂರ್ವ ಭಾಗದಲ್ಲಿ ಟ್ರಾನ್ಸ್ಮಿಷನ್ ಲೈನ್ ಟ್ರಿಪ್ ಆದ ಕಾರಣ ಈ ಸಮಸ್ಯೆ ಎದುರಾಗಿದೆ ಎಂದು ಬಾಂಗ್ಲಾದೇಶ ಪವರ್ ಡೆವಲಪ್ಮೆಂಟ್ ಬೋರ್ಡ್ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಇದರಿಂದ ಹಲವೆಡೆ ಮೊಬೈ ನೆಟ್ವರ್ಕ್ ಸಮಸ್ಯೆ ಕೂಡ ಉದ್ಭವಿಸಿದೆ.
ಮೇ, 2017 ರಲ್ಲಿ ಇದೇ ರೀತಿಯ ಗ್ರಿಡ್ ವೈಫಲ್ಯ ಸಮಸ್ಯೆಯಿಂದ ಬಾಂಗ್ಲಾದೇಶದ 32 ಜಿಲ್ಲೆಗಳಲ್ಲಿ ಭಾರಿ ಸಮಸ್ಯೆ ಎದುರಾಗಿದನ್ನು ಇಲ್ಲಿ ಸ್ಮರಿಸಬಹುದು.