Home ಸಂಸ್ಕೃತಿ ಕಥಾ ಪ್ರಪಂಚ -2021 ಇಂದು ಸಮಾರೋಪ

ಕಥಾ ಪ್ರಪಂಚ -2021 ಇಂದು ಸಮಾರೋಪ

2233
0

ಲಾ ಸ್ವಪ್ನ ಯುಟ್ಯೂಬ್ ಚ್ಯಾನಲ್ ನಲ್ಲಿ ನಡೆದ ರಾಜ್ಯಮಟ್ಟದ ಪುಟ್ಟ ಮಕ್ಕಳ ಕಥೆ ಹೇಳುವ ಸ್ಪರ್ಧೆಯ ಸಮಾರೋಪ ಮತ್ತು ಬಹುಮಾನ ಘೋಷಣೆ ಮಾಡುವ ಆನ್ಲೈನ್ ಕಾರ್ಯಕ್ರಮವು ಇಂದು ಸಂಜೆ ಕಲಾ ಸ್ವಪ್ನ ಯುಟ್ಯೂಬ್ ವೇದಿಕೆಯಲ್ಲಿ ಜರಗಲಿದೆ. ಬೆಂಗಳೂರು ದೂರದರ್ಶನದ ನಿವೃತ್ತ ಮಹಾನಿರ್ದೇಶಕರಾದ ನಾಡೋಜ ಕೆ. ಮಹೇಶ್ ಜೋಶಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಶಸ್ತಿ ವಿಜೇತ ಶಿಕ್ಷಕರಾದ ಅಶೋಕ್ ತೆಕ್ಕಟ್ಟೆ ಮತ್ತು ಲಂಡನ್ನಿನ ಯುವ ಮನೋ ಚಿಕಿತ್ಸಕರಾದ ಧೀರೇಂದ್ರ ಜೈನ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಲಿದ್ದಾರೆ.

ಜೇಸಿಐ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಕೆ. ಅವರು ಕಾರ್ಯಕ್ರಮದ ನಿರ್ವಹಣೆ ಮಾಡಲಿದ್ದಾರೆ. ರಾಜ್ಯಮಟ್ಟದ 165 ಪುಟಾಣಿ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಆಸಕ್ತರು ಇಂದು ಸಂಜೆ ಐದರಿಂದ ಕಲಾ ಸ್ವಪ್ನ ಯುಟ್ಯೂಬ್ ಲೈವ್ ಕಾರ್ಯಕ್ರಮವನ್ನು ವೀಕ್ಷಣೆ ಮಾಡಬಹುದು ಎಂದು ವೇದಿಕೆಯ ಪರವಾಗಿ ಶಿಲ್ಪಾ ಶೆಟ್ಟಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.