Sunday, January 19, 2025
Sunday, January 19, 2025

ಕನ್ನಡದ ಮೊದಲ ಮಹಿಳಾ ಮೋಟರ್ ವ್ಲಾಗರ್ ಸ್ವಾತಿ

ಕನ್ನಡದ ಮೊದಲ ಮಹಿಳಾ ಮೋಟರ್ ವ್ಲಾಗರ್ ಸ್ವಾತಿ

Date:

ಬೆಂಗಳೂರು: ತಂತ್ರಜ್ಞಾನದಲ್ಲಿ ಬದಲಾವಣೆ ಆದ ಹಾಗೆ ಸಮಾಜದಲ್ಲೂ ಕೆಲವು ಬದಲಾವಣೆಗಳಾಗುತ್ತಿವೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಎಂಟ್ರಿ ನೀಡಿದ್ದಾರೆ. ಮಹಿಳೆಯರು ಬೈಕ್ ಓಡಿಸುತ್ತಾರೆ ಎಂದು ಇತ್ತೀಚಿನ ದಿನಗಳಲ್ಲಿ ಹಲವಾರು ಬಾರಿ ಗಮನಕ್ಕೆ ಬಂದಿರಬಹುದು. ಆದರೆ ಒಂಟಿಯಾಗಿ ಓರ್ವ ಮಹಿಳೆ ಬೈಕ್ ರೈಡ್ ಮಾಡಿ ಸುಮಾರು 64,567 ಕಿಮೀ ದೂರವನ್ನು ವಿಶಿಷ್ಟ ರೀತಿಯಲ್ಲಿ ಕ್ರಮಿಸಿ ಪ್ರವಾಸಿಗರಿಗೆ ಹೊಸ ಹೊಸ ಸ್ಥಳಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ಕನ್ನಡ ಭಾಷೆಯಲ್ಲಿ ನೀಡುತ್ತಿರುವ ಸ್ವಾತಿ ಇವರ ಜೊತೆಗೆ ಉಡುಪಿ ಬುಲೆಟಿನ್ ನಡೆಸಿದ ವಿಶೇಷ ಸಂದರ್ಶನದ ವಿವರ ಇಲ್ಲಿದೆ.

ಪ್ರ. ಬೈಕಿಂಗ್ ಬಗ್ಗೆ ನಿಮಗೆ ಆಸಕ್ತಿ ಹೇಗೆ ಉಂಟಾಯಿತು?

ಉ. ಸರಕಾರಿ ಉದ್ಯೋಗದಲ್ಲಿ ಇದ್ದಾಗ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ನಿರಂತರ ಕೆಲಸಕ್ಕೆ ಅಂಟಿಕೊಂಡಿದ್ದ ನನಗೆ ನನ್ನ ಹುಟ್ಟುಹಬ್ಬದಂದು ಅಮ್ಮ ನೀಡಿದ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ನನ್ನ ಜೀವನದಲ್ಲಿ ನೂತನ ಅಧ್ಯಾಯ ತೆರೆಯಿತು. ಅಂದು ಹುಟ್ಟಿದ ಪ್ರವಾಸದ ಕಿಡಿ ಅಂದಿನಿಂದ ನನ್ನ ಜೀವನದಲ್ಲಿ ದಾರಿದೀಪ ಆಗಿದೆ. ನನ್ನ ಹುದ್ದೆಗೆ ರಾಜೀನಾಮೆ ನೀಡಿ ಉಳಿತಾಯದ ಹಣದಿಂದ ಪ್ರವಾಸ ಕೈಗೊಳ್ಳಲು ಆರಂಭಿಸಿದೆ. ನಾನು ಇಡೀ ಜಗತ್ತು ಸುತ್ತಬೇಕು ಎಂಬ ಮಹತ್ವಾಕಾಂಕ್ಷೆ ನನ್ನ ಹೆತ್ತವರಲ್ಲಿತ್ತು. ನಾನು ಅದನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.

ಪ್ರ- ನಿಮ್ಮ ಟ್ರಾವಲ್ ವ್ಲಾಗಿಂಗ್ ಆರಂಭ ಯಾವ ರೀತಿ ಆಯಿತು?
ಉ- 2019 ರಲ್ಲಿ ನನ್ನ ಬೈಕ್ ಪ್ರಯಾಣ ಆರಂಭವಾಗಿ, 2020 ರಲ್ಲಿ ಯೂಟ್ಯೂಬ್ ಪಯಣ ಆರಂಭಿಸಿದೆ.

ಪ್ರ- ಇಲ್ಲಿಯವರೆಗೆ ಎಷ್ಟು ಕಿಮೀ ಸಂಚರಿಸಿದ್ದೀರಿ?
ಉ- 64,567 ಕಿಮೀ ಬೈಕ್ ರೈಡ್ ಮಾಡಿದ್ದೇನೆ.

ಪ್ರ- ಈ ಸಾಹಸಮಯ ಯಾತ್ರೆಗೆ ಪ್ರೇರಣೆ?
ಉ- ಪ್ರತಿ ಬಾರಿ ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡಿದಾಗ, ನಾನು ಬಹಳಷ್ಟು ಜ್ಞಾನ ಸಂಪಾದಿಸುತ್ತೇನೆ. ಅಲ್ಲಿಯ ಜನರ ಸಂಸ್ಕೃತಿಗಳ ಸಮಗ್ರ ಪರಿಚಯ ಪ್ರವಾಸದ ಸಂದರ್ಭದಲ್ಲಿ ಆಗುತ್ತದೆ. ಇದೇ ನನಗೆ ಮುಂದಿನ ಪ್ರವಾಸಕ್ಕೆ ಪ್ರೇರಣೆ.

ಪ್ರ- ಬೈಕ್ ರೈಡಿಂಗ್ ಸಂದರ್ಭದಲ್ಲಿ ಯಾವ ರೀತಿ ಜಾಗೃತಿ ಮೂಡಿಸುತ್ತಿದ್ದೀರಿ?
ಉ- ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ನಿರಂತರವಾಗಿ ಅರಿವು ಮೂಡಿಸುವುದರ ಜೊತೆಗೆ ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುತ್ತಿದ್ದೇನೆ. ನನ್ನ ಪ್ರವಾಸ ಕಥನವನ್ನು ಯೂಟ್ಯೂಬ್ ನಲ್ಲಿ ಕನ್ನಡ ಭಾಷೆಯಲ್ಲಿ ಪ್ರಕಟಿಸುತ್ತಿದ್ದೇನೆ. ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಕಡಿಮೆ ಇಲ್ಲ. ನಾವು ಸದೃಢರು ಎಂಬ ಸಂದೇಶವನ್ನು ಸಾರಿ ವಿದೇಶ ಸುತ್ತಿ ಬರುವುದೇ ನನ್ನ ಉದ್ದೇಶ.

ಪ್ರ- ಸರಕಾರ ಅಥವಾ ಇನ್ನಿತರ ಸಂಸ್ಥೆಗಳು ಜೊತೆಗೆ ಸಹಯೋಗ ನೀಡಿದ್ದೀರಾ?
ಉ- ಬೈಕ್ ರೈಡ್ ಸಂಬಂಧಿಸಿದಂತೆ ಕರ್ನಾಟಕ ಸರಕಾರದ ಜೊತೆಗೆ ಮತ್ತು ಇತರ ಸಂಘ ಸಂಸ್ಥೆಗಳು ಜೊತೆ ಸಹಭಾಗಿತ್ವದಲ್ಲಿ ಅಭಿಯಾನ ಕೈಗೊಂಡಿದೆ. ರಾಯಲ್ ಎನ್ಫೀಲ್ಡ್ ಸಂಸ್ಥೆಯ ಇನ್ಫ್ಲುಯೆನ್ಸರ್ ಆಗಿಯೂ ಜಾಗೃತಿ ಮೂಡಿಸುತ್ತಿದ್ದೇನೆ.

ಪ್ರ- ನೀವು ಕನ್ನಡದ ಮೊದಲ ಮೋಟಾರ್ ವ್ಲಾಗರ್. ಇದರ ಬಗ್ಗೆ ನಿಮಗೆ ಹೇಗೆ ಅನಿಸುತ್ತಿದೆ?
ಉ- ಹೋದ ಕಡೆಯಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುವ ಬಗ್ಗೆ ಹೆಮ್ಮೆ ಇದೆ. ನಮ್ಮ ಭಾಷೆಯ ಬಗ್ಗೆ ನಮ್ಮ ಹೆಮ್ಮೆ ಇದೆ.

ಪ್ರ- ಸೋಲೋ ರೈಡಿಂಗ್ ಬಗ್ಗೆ ನಿಮ್ಮ ಅಭಿಪ್ರಾಯ?
ಉ- ಸೋಲೋ ರೈಡಿಂಗ್ (ಏಕಾಂಗಿ ಸಂಚಾರ) ಮಾಡುವ ಮೂಲಕ ಹಲವಾರು ವಿಚಾರಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಬರುತ್ತದೆ. ಜೀವನದಲ್ಲಿ ಎಷ್ಟು ಸವಾಲುಗಳಿವೆ ಎಂಬ ಅರಿವು ಬರುವುದು ಸೋಲೋ ರೈಡಿಂಗ್ ಮಾಡಿದರೆ ಮಾತ್ರ. ಇದರಿಂದ ನಮ್ಮ ಆತ್ಮವಿಶ್ವಾಸ ಇಮ್ಮಡಿಯಾಗುತ್ತದೆ.

ಪ್ರ- ನಿಮ್ಮ ಮಾರ್ಗ ಮಧ್ಯದಲ್ಲಿ ಬಂದಿರುವ ಸವಾಲುಗಳು?
ಉ- ದೂರ ಪ್ರಯಾಣ ಆಗಿರುವುದರಿಂದ ಬೈಕ್ ದುರಸ್ತಿ ಮಾಡಲು ಗೊತ್ತಿದ್ದರೆ ಉತ್ತಮ. ನನಗೆ ಇದರ ಬಗ್ಗೆ ಸಂಪೂರ್ಣ ಜ್ಞಾನ ಇದೆ. ಎತ್ತರದ ಪ್ರದೇಶಗಳಲ್ಲಿ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಪೆಟ್ರೋಲ್ ಬಂಕ್ ಗಳಲ್ಲಿ ರಾತ್ರಿ ಸಮಯ ಉಳಿಯುವ ಸಂದರ್ಭದಲ್ಲಿ ಕೆಲವು ಸವಾಲುಗಳನ್ನು ಎದುರಿಸಿದ್ದೇನೆ. ನನ್ನ ಬಳಿ ಯಾವಾಗಲೂ ಪೆಪ್ಪರ್ ಸ್ಪ್ರೇ ಇದೆ. ಆತ್ಮರಕ್ಷಣೆಯ ಬಗ್ಗೆ ತರಬೇತಿ ಪಡೆದಿದ್ದೇನೆ. ಯಾವ ಸಂದರ್ಭದಲ್ಲಿಯೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಧೈರ್ಯದಿಂದ ಮತ್ತು ಮನೋಬಲವನ್ನು ಹೆಚ್ಚಿಸಿ ಬೈಕ್ ರೈಡ್ ಮಾಡಿದರೆ ಎದುರಾಗುವ ಎಲ್ಲಾ ರೀತಿಯ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬಹುದು. ತುರ್ತು ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ, ಪೊಲೀಸ್ ನೆರವನ್ನು ಪಡೆದುಕೊಳ್ಳಬಹುದು.

ಪ್ರ- ಪ್ರವಾಸಕ್ಕೆ ನಿಮ್ಮ ತಯಾರಿ ಹೇಗಿರುತ್ತದೆ?
ಉ- ಹೊರಡುವ ಮುನ್ನ ನೀಲಿನಕ್ಷೆ ತಯಾರಿಸುತ್ತೇನೆ. ಬೈಕ್ ಸುಸ್ಥಿತಿಯಲ್ಲಿದೆಯೇ ಎಂದು ಖಾತ್ರಿಪಡಿಸಿ ಸ್ಥಳದ ಬಗ್ಗೆ ಮಾಹಿತಿ ಕಲೆಹಾಕಿ ಪ್ರವಾಸ ಆರಂಭಿಸುತ್ತೇನೆ.

ಪ್ರ- ಪ್ರವಾಸಪ್ರಿಯರಿಗೆ, ಟ್ರಾವೆಲ್ ವ್ಲಾಗರ್ಸ್ ಗಳಿಗೆ ನಿಮ್ಮ ಸಂದೇಶ?
ಉ- ಪ್ರವಾಸಿ ತಾಣಗಳ ಸ್ವಚ್ಚತೆಗೆ, ಅಲ್ಲಿನ ಜನರ ಸಂಸ್ಕೃತಿಗೆ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು. ಸ್ಪಷ್ಟವಾದ ಮಾಹಿತಿಗಳನ್ನು ನೀಡುವ ಮೂಲಕ ಒಳ್ಳೆಯ ವಿಡಿಯೋಗಳನ್ನು ಮಾಡಿ. ನೀವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ. ಕನ್ನಡದಲ್ಲೇ ವ್ಲಾಗ್ ಗಳನ್ನು ಮಾಡಿ. ನಮ್ಮ ಭಾಷೆ ನಮ್ಮ ಹೆಮ್ಮೆ. ನನ್ನ ಇಡೀ ಪಯಣ ಕನ್ನಡ ಮತ್ತು ಕನ್ನಡಿಗರಿಗೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ.

ಸ್ವಾತಿ ಅವರ ಯೂಟ್ಯೂಬ್ ಚ್ಯಾನಲ್‌ Swathi R. ಇನ್ಸ್ತಗ್ರಮ್- Payana_with_Swathi. ಫೇಸ್‌ಬುಕ್‌- Swathi R.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!