Sunday, January 19, 2025
Sunday, January 19, 2025

ದೈಹಿಕ ನ್ಯೂನತೆಯಿದ್ದರೂ ಇಚ್ಛಾಶಕ್ತಿಯಿಂದ ಜಗತ್ತನ್ನು ಗೆದ್ದವರು!

ದೈಹಿಕ ನ್ಯೂನತೆಯಿದ್ದರೂ ಇಚ್ಛಾಶಕ್ತಿಯಿಂದ ಜಗತ್ತನ್ನು ಗೆದ್ದವರು!

Date:

ಗತ್ತಿನಾದ್ಯಂತ ಇರುವ ಸಾವಿರ ಸಾವಿರ ವಿಶೇಷ ಚೇತನ ಸಾಧಕರಿಗೆ ಒಂದು ದೊಡ್ಡ ಸಲಾಂ! ಯಾವುದೋ ಕಾರಣಕ್ಕೆ ವಿಶೇಷ ಅಗತ್ಯವುಳ್ಳ ಮಕ್ಕಳಾಗಿ ಹುಟ್ಟಿದ ಲಕ್ಷಾಂತರ ಮಕ್ಕಳಿದ್ದಾರೆ! ಇನ್ನೂ ಕೆಲವರು ತಮ್ಮ ಬಾಲ್ಯದಲ್ಲಿ ಅಥವಾ ಮುಂದೆ ಯಾವತ್ತಾದರೂ ಮಾರಕ ಕಾಯಿಲೆಗೆ ಅಥವಾ ಅಪಘಾತಗಳಿಗೆ ತುತ್ತಾಗಿ ವಿಶೇಷ ಚೇತನರಾಗಿ ಬಳಲುವ ಮಂದಿ ಇದ್ದಾರೆ!

ಅದರಲ್ಲಿ ಕೆಲವರು ಆ ನೋವುಗಳನ್ನು ಒಳಗಿಟ್ಟುಕೊಂಡು ಜೀವನಪೂರ್ತಿ ಕಣ್ಣೀರನ್ನು ಸುರಿಸುತ್ತ ಬದುಕಿದರೆ, ಇನ್ನೂ ಕೆಲವರು ತಮ್ಮ ಇಚ್ಛಾಶಕ್ತಿಯಿಂದ ಎಲ್ಲ ಸಮಸ್ಯೆಗಳನ್ನೂ ಗೆದ್ದು ಜಗತ್ತನ್ನೇ ಮೆಟ್ಟಿ ನಿಲ್ಲುತ್ತಾರೆ!

ಇಂದಿನ ದಿನ ಜಗತ್ತಿನಾದ್ಯಂತ ಇರುವ ಅಂತಹ ಹತ್ತು ವಿಶ್ವ ವಿಜೇತರ ಯಶೋಗಾಥೆಗಳು ಇದೋ ನಿಮಗಾಗಿ!

1) ಸ್ಟೀಫನ್ ಹಾಕಿಂಗ್( 1942-2018) ಈತ ಬ್ರಿಟನ್ನಿನಲ್ಲಿ ಜನಿಸಿದ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು. ಅವರಿಗೆ ಅತೀ ಸಣ್ಣ ಪ್ರಾಯದಲ್ಲಿ Amyotrophic Lateral Scherosis (ALS) ಎಂಬ ತುಂಬಾ ವಿಚಿತ್ರವಾದ ಕಾಯಿಲೆಯು ಅಮರಿತು! ಅಂದರೆ ದೇಹದ ಒಂದೊಂದೇ ಪಾರ್ಟ್ ಸಾಯುತ್ತ ಹೋಗುವ ಕಾಯಿಲೆ. ತನ್ನ ಜೀವನದ ಅತ್ಯಂತ ದೀರ್ಘ ಅವಧಿಯನ್ನು ವೀಲ್ ಚೇರ್ ಮೇಲೆ ಕಳೆದ ಹಾಕಿಂಗ್ ಬಾಹ್ಯಾಕಾಶದ ಬ್ಲಾಕ್ ಹೋಲ್ಸ್ (Black Holes) ಮೇಲಿನ ಸಂಶೋಧನೆಗೆ ಪ್ರಸಿದ್ಧರಾದರು.

ಆ ಕಾಯಿಲೆಯ ಪ್ರಖರತೆಯಿಂದ ಜೀವನವಿಡೀ ನರಳಿದ ಹಾಕಿಂಗ್ ಕೊನೆಗೆ ತನ್ನ ಮಾತಾಡುವ ಸಾಮರ್ಥ್ಯವನ್ನು ಕೂಡ ಕಳೆದುಕೊಂಡರು. ಆದರೆ ಆತನ ಸಂಶೋಧನೆಗಳು ಮತ್ತು ಬರೆದ ಪುಸ್ತಕಗಳು ಭಾರೀ ಪ್ರಸಿದ್ದಿ ಪಡೆದವು.

2) ಹೆಲೆನ್ ಕೆಲ್ಲರ್ ( 1880-1968) ಅಮೇರಿಕನ್ ಆಗಿದ್ದ ಹೆಲೆನ್ ಕೆಲ್ಲರ್ ತನ್ನ ಕಿವುಡುತನ ಮತ್ತು ಕುರುಡುತನಗಳನ್ನು ಮೆಟ್ಟಿ ನಿಂತರು. ಈ ದೈಹಿಕ ನ್ಯೂನತೆ ಹೊಂದಿದ್ದ ಜಗತ್ತಿನ ಮೊತ್ತಮೊದಲ ಪದವೀಧರೆ ಆಗಿ ಆಕೆ ಸಾಧನೆ ಮಾಡುತ್ತಾರೆ. ಶಿಕ್ಷಣರಂಗದ ಆಕೆಯ ಸಾಧನೆಗಳನ್ನು ಪ್ರಪಂಚವು ಮುಕ್ತಕಂಠದಿಂದ ಶ್ಲಾಘನೆ ಮಾಡಿತ್ತು.

3) ಫ್ರಾಂಕ್ಲಿನ್ ರೂಸವೆಲ್ಟ್ (1882-1945) ಎರಡು ಕಾಲುಗಳ ಶಕ್ತಿಯನ್ನು ಪೋಲಿಯೋ ಕಾರಣಕ್ಕೆ ಕಳೆದುಕೊಂಡ ರೂಸವೆಲ್ಟ್ 1935-45ರ ದೀರ್ಘ ಅವಧಿಗೆ ಅಮೆರಿಕಾದ ಅಧ್ಯಕ್ಷರಾಗಿ ಆಧುನಿಕ ಅಮೆರಿಕಾದ ಓರ್ವ ನಿರ್ಮಾಪಕರಾಗಿ ಪ್ರಸಿದ್ದಿ ಪಡೆದರು. ಅವರ ಬದುಕಿನ ಬಹು ಭಾಗವನ್ನು ವೀಲ್ ಚೇರ್ ಮೇಲೆ ಅವರು ಕಳೆದರು!

4) ಕ್ರಿಸ್ಟೋಫರ್ ರೀವ್ (1952- 2004) ಕುದುರೆ ಸವಾರಿ ಮಾಡುವಾಗ ಕೆಳಗೆ ಬಿದ್ದ ಈತ ಕುತ್ತಿಗೆಯ ಕೆಳಗಿನ ಭಾಗ ಪೂರ್ತಿಯಾಗಿ ಪಾರಾಲೈಸ್ ಆದರು. ಆದರೆ ಬಾಲಿವುಡಿನ ಬಹು ಪ್ರಸಿದ್ಧ ನಟರಾಗಿ ಅವರು ಅತ್ಯುತ್ತಮ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಜನರು ಅವರನ್ನು ಈಗಲೂ ‘ಸೂಪರ್ ಮ್ಯಾನ್’ ಸರಣಿಯ ಸಿನೆಮಾಗಳ ಶ್ರೇಷ್ಟ ಅಭಿನಯಕ್ಕಾಗಿ ನೆನಪಿಟ್ಟುಕೊಂಡಿದ್ದಾರೆ.

5) ನಿಕ್ ವುಜಿಸಿಕ್ (ಆಸ್ಟ್ರೇಲಿಯ) 1982ರಲ್ಲಿ ಜನ್ಮತಾಳಿದ ನಿಕ್ ಎರಡು ಕೈ, ಎರಡು ಕಾಲು ಇಲ್ಲದ ವಿಶೇಷ ದೇಹದ ಮಾಲೀಕ! ಇಂದಿಗೂ ಸ್ವಾವಲಂಬಿ ಆಗಿ ಬದುಕುತ್ತಿದ್ದಾನೆ. ಆತನ ಪ್ರೇರಣಾತ್ಮಕ ಮಾತುಗಳು ನೂರಾರು ಬಾರಿ ನನ್ನ ತರಬೇತಿಯ ಕಾರ್ಯಕ್ರಮದ ಭಾಗ ಆಗಿವೆ. Attitude is Attitude ಅತನ ಭಾರೀ ಫೇಮಸ್ ವಿಡಿಯೋ. ಒಮ್ಮೆ ನೋಡಿ ಬನ್ನಿ.

6) ಎಸ್ತರ್ ವರ್ಗೀರ್ ( ಹಾಲೆಂಡ್) ಬಾಲ್ಯದಿಂದ ಪಾರಾಲಿಸಿಸ್ ಆಗಿರುವ ಈಕೆಯು ತನ್ನ ಇಡೀ ಜೀವನವನ್ನು ವೀಲ್ ಚೇರ್ ಮೇಲೆ ಕಳೆಯಬೇಕಾದ ಅನಿವಾರ್ಯತೆ ಹೊಂದಿದ್ದಾರೆ. ಆದರೆ ಆಕೆಯ ಸಾಧನೆಗೆ ಮಿತಿಯೇ ಇಲ್ಲ. ಜಗತ್ತಿನ ನಂಬರ್ ಒನ್ ‘ವೀಲ್ ಚೇರ್ ಟೆನ್ನಿಸ್ ಆಟಗಾರ್ತಿ’ ಆಗಿರುವ ಈಕೆಯು ಈವರೆಗೆ 470 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದ್ದಾರೆ!

ಆಕೆ 23 ವರ್ಷಗಳಲ್ಲಿ ಒಂದೇ ಒಂದು ಪಂದ್ಯವನ್ನು ಸೋತ ಉದಾಹರಣೆ ಇಲ್ಲ. ಏಳು ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಚಿನ್ನದ ಪದಕ ಕೂಡ ಗೆದ್ದಿದ್ದಾರೆ. ಇಂತವರ ಸಾಧನೆಗಳನ್ನು ಗಮನಿಸಿದಾಗ ಆಕಾಶವೇ ಮಿತಿ ಎಂದು ನನಗೆ ಅನ್ನಿಸುತ್ತದೆ.

7) ಜಾನ್ ನಾಶ್ (1928-2015) Acute Paranoid Schizophrenia (APS) ಎಂಬ ವಿಚಿತ್ರ ಕಾಯಿಲೆಯಿಂದ ಜೀವನಪೂರ್ತಿ ಬಳಲಿದ ಜಾನ್ ನಾಶ್ ಗಣಿತದ ಮೇರು ಪ್ರತಿಭೆ ಎಂದು ಕರೆಸಿಕೊಳ್ಳುತ್ತಾರೆ. ಅರ್ಥಶಾಸ್ತ್ರದಲ್ಲಿ 1994ರ ನೊಬೆಲ್ ಪ್ರಶಸ್ತಿಯನ್ನು ಕೂಡ ಆತ ಗೆದ್ದಿದ್ದಾರೆ. ಆತನ ಬದುಕಿನ ಹೋರಾಟಗಳ ಬಗ್ಗೆ A Beautiful Mind ಎಂಬ ಒಂದು ಹಾಲಿವುಡ್ ಸಿನೆಮಾ ಕೂಡ ಬಂದಿದೆ.

8) ಫ್ರೀಡಾ ಕಹ್ಲೋ (1907- 1954) ಪಾರ್ಕಿನ್ಸನ್ ಕಾಯಿಲೆಯಿಂದ ಜೀವನವಿಡೀ ನರಳಿದ ಈ ಮಹಾನ್ ಚಿತ್ರಕಲಾವಿದೆ ತಮ್ಮ ಜೀವನದ ಬಹುದೀರ್ಘ ಅವಧಿಯನ್ನು ಹಾಸಿಗೆಯ ಮೇಲೆ ಕಳೆದರು. ಮುಂದೆ ರಸ್ತೆಯ ಅಪಘಾತದಲ್ಲಿ ಆಕೆ ಇನ್ನಷ್ಟು ಜರ್ಜರಿತ ಆದರು. ಆದರೆ ಕೊನೆಯವರೆಗೆ ಪೈಂಟಿಂಗ್ ಸಾಧನೆ ನಿಲ್ಲಿಸಲಿಲ್ಲ. ಆಕೆಯ ಪೈಂಟಿಂಗಗಳು ದಾಖಲೆ ಬೆಲೆಗೆ ಮಾರಾಟ ಆಗಿವೆ. ಆಕೆ ಮೆಕ್ಸಿಕೋ ದೇಶದವರು.

9) ಮೊಹಮ್ಮದ್ ಆಲಿ (ಅಮೆರಿಕಾ) ವಿಶ್ವ ಬಾಕ್ಸಿಂಗ್ ಚಾಂಪಿಯನ್ ಕೂಡ ಆಗಿದ್ದ ಮೊಹಮ್ಮದ್ ಆಲಿ ದೀರ್ಘ ಅವಧಿಯಲ್ಲಿ ಬಾಕ್ಸಿಂಗ್ ಸಾಮ್ರಾಟ ಆಗಿ ಮಿಂಚಿದವರು. ಆದರೆ ಡಿಸಲೆಕ್ಸಿಯಾ ಎಂಬ ವಿಚಿತ್ರವಾದ ಕಾಯಿಲೆಯ ಜೊತೆಗೆ ಕೂಡ ಆತನು ಹೋರಾಟವನ್ನು ಮಾಡಬೇಕಾಯಿತು. ಆಲಿ ಅವರ ಅಂತ್ಯವು ಅತ್ಯಂತ ದಾರುಣ ಆಗಿತ್ತು.

10) ಲೂಯಿಸ್ ಬ್ರೈಲ್ (ಫ್ರಾನ್ಸ್) ಕುರುಡನಾಗಿದ್ದ ಆತ ಜಗತ್ತಿನ ಮಹಾ ಸಾಧಕರ ಪಟ್ಟಿಯಲ್ಲಿ ಕಾಣಿಸಿಕೊಂಡರು. ಕುರುಡರು ಓದಲು ಮತ್ತು ಬರೆಯಲು ಸಹಾಯ ಮಾಡುವ ಬ್ರೈಲ್ ಲಿಪಿಯನ್ನು ಆತ ಸಂಶೋಧನೆ ಮಾಡಿ ಕುರುಡರಿಗೆ ಮಹದುಪಕಾರ ಮಾಡಿದ್ದಾರೆ. ಈ ವಿಶೇಷ ಚೇತನ ಸಾಧಕರಿಗೆ ಒಂದು ದೊಡ್ಡದಾದ ಸಲಾಂ ಹೇಳುತ್ತ ಅವರನ್ನು ಅಭಿನಂದನೆ ಮಾಡೋಣ. ಅವರ ಸಾಧನೆಯು ನಮಗೆಲ್ಲ ಪ್ರೇರಣೆ ನೀಡಲಿ.

-ರಾಜೇಂದ್ರ ಭಟ್ ಕೆ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!