Sunday, January 19, 2025
Sunday, January 19, 2025

ಜಗತ್ತಿನ ಮೋಸ್ಟ್ ಇನಕ್ರೆಡಿಬಲ್ 50 ಸಂಗತಿಗಳು ಇಲ್ಲಿವೆ!

ಜಗತ್ತಿನ ಮೋಸ್ಟ್ ಇನಕ್ರೆಡಿಬಲ್ 50 ಸಂಗತಿಗಳು ಇಲ್ಲಿವೆ!

Date:

ರೋಮಾಂಚನ ಉಂಟುಮಾಡುವ ಜಗತ್ತಿನ ವಿಸ್ಮಯಗಳು

1) ಹೆಣ್ಣು ಕೋಳಿಗಳು ಕಾಮನಬಿಲ್ಲಿನ ಏಳು ಬಣ್ಣಗಳನ್ನು ಗುರುತಿಸಬಲ್ಲವು.

2) ನಕ್ಷತ್ರ ಮೀನುಗಳು ಎಂಟು ಕಣ್ಣು ಹೊಂದಿವೆ. ಅದಕ್ಕೆ ಪ್ರತೀ ಕಾಲಿನಲ್ಲಿ ಒಂದೊಂದು ಕಣ್ಣು ಇರುತ್ತದೆ!

3) ಇಡೀ ಜಗತ್ತಿನಲ್ಲಿ ಅತೀ ದೊಡ್ಡ ಬೀಜವೆಂದರೆ ಅದು ತೆಂಗಿನಕಾಯಿ!

4) ಒಂದು ವಜ್ರವನ್ನು ಕತ್ತರಿಸಬೇಕಾದರೆ ಇನ್ನೊಂದು ವಜ್ರವೇ ಬೇಕು!

5) ಒಂದು ಇರುವೆಯು ತನ್ನ ದೇಹ ತೂಕದ ಐವತ್ತು ಪಟ್ಟು ತೂಕದ ವಸ್ತುಗಳನ್ನು ಎತ್ತಬಲ್ಲದು!

6) ಇರುವೆಗಳು ಇಡೀ ಜೀವಮಾನದಲ್ಲಿ ಮಲಗುವುದೇ ಇಲ್ಲ!

7) ಬಿಳಿ ಬಣ್ಣದ ನೀಲಿ ಕಣ್ಣಿನ ಬೆಕ್ಕುಗಳು ಸಾಮಾನ್ಯವಾಗಿ ಕಿವುಡು ಆಗಿರುತ್ತವೆ!

8) ಆಸ್ಟ್ರಿಚ್ ಪಕ್ಷಿಯ ಕಣ್ಣು ಅದರ ಮೆದುಳಿಗಿಂತ ತುಂಬಾ ದೊಡ್ಡದಾಗಿರುತ್ತದೆ!

9) ಆಲೀವ್ ಮರಗಳು ಸರಾಸರಿ 1500 ವರ್ಷಗಳ ಕಾಲ ಬದುಕುತ್ತವೆ!

10) ಶಿಶುಗಳು ಹಿರಿಯರಿಗಿಂತ ಹೆಚ್ಚು ಕನಸು ಕಾಣುತ್ತಾರೆ.

11) ಚಿಟ್ಟೆಗಳು ರುಚಿ ನೋಡುವುದು ಅವುಗಳ ನಾಲಿಗೆಯ ಮೂಲಕ ಅಲ್ಲ. ಅವುಗಳ ಕಾಲುಗಳಿಂದ!

12)ಚಂದ್ರನ ಮೇಲಿಂದ ಆಕಾಶ ನೋಡಿದಾಗ ಅದು ಕಪ್ಪು ಕಾಣುತ್ತದೆ, ಏಕೆಂದರೆ ಚಂದ್ರನ ಮೇಲೆ ವಾತಾವರಣವು ಇರುವುದಿಲ್ಲ!

13) ಸರಿಯಾಗಿ ಬೆಳವಣಿಗೆ ಆದ ಕರಡಿಯು ಕುದುರೆಯಷ್ಟೇ ವೇಗವಾಗಿ ಓಡುತ್ತದೆ!

14) ಮಾನವನ ಮೆದುಳು ತನ್ನ ಬೆಳವಣಿಗೆ ನಿಲ್ಲಿಸುವುದು ನಮಗೆ 15 ವರ್ಷ ಆದಾಗ!

15) ಆಸ್ಟ್ರಿಚ್ ಹಕ್ಕಿಯ ಮೊಟ್ಟೆಯನ್ನು ಪೂರ್ಣವಾಗಿ ನೀವು ಬೇಯಿಸಲು ಕನಿಷ್ಠ ನಾಲ್ಕು ಗಂಟೆ ಬೇಕು!

16) ಚಿಟ್ಟೆಗಳು ಹಾರುವ ಮೊದಲು ತಮ್ಮ ದೇಹದ ಉಷ್ಣತೆಯನ್ನು ವಾರ್ಮ್ ಆಪ್ ಮಾಡುವುದರ ಮೂಲಕ 81 ಡಿಗ್ರೀ ಫಾರನಹೈಟ್ ಮಾಡಿಕೊಳ್ಳುತ್ತದೆ!

17) ಮನುಷ್ಯನ ತೊಡೆಯ ಎಲುಬುಗಳು ಕಾಂಕ್ರೀಟಿಗಿಂತ ಹೆಚ್ಚು ಗಟ್ಟಿ ಆಗಿರುತ್ತವೆ!

18) 1660ರ ಮೊದಲು ತಯಾರಾದ ಗಡಿಯಾರಗಳು ಒಂದೇ ಮುಳ್ಳು ಹೊಂದಿದ್ದವು!

19) ಮಕ್ಕಳು ಅಳುವಾಗ ಕಣ್ಣೀರು ಬರುವುದು ಆರರಿಂದ ಎಂಟು ವಾರಗಳು ಆದನಂತರ!

20) ನಾಗರಹಾವಿನ ಒಂದು ಗ್ರಾಮ್ ವಿಷವು ಕನಿಷ್ಠ 150 ಜನರನ್ನು ಕೊಲ್ಲಬಹುದು!

21) ಜಿರಾಫೆಗಳಿಗೆ ಏನೇ ಮಾಡಿದರೂ ಕೆಮ್ಮಲು ಸಾಧ್ಯವೇ ಇಲ್ಲ!

22) ಸ್ಪಾನಿಷ್ ಭಾಷೆಯಲ್ಲಿ ಕಾಲ್ಗೆಟ್ ಅಂದರೆ ಹೋಗಿ ನೇಣು ಹಾಕಿಕೋ ಎಂದರ್ಥ!

23) ಮನುಷ್ಯ ಹುಟ್ಟುವಾಗ ಬಣ್ಣ ಕುರುಡು ಆಗಿರುತ್ತಾನೆ!

24) ನಾವು ತುಂಬಾ ತಿಂದಾಗ ನಮ್ಮ ಆಲಿಸುವ ಸಾಮರ್ಥ್ಯ ಕಡಿಮೆ ಆಗುತ್ತದೆ!

25) ಹಂದಿಗಳು ಮತ್ತು ನಾಯಿಗಳು ನೀರಿನ ನಿಜವಾದ ರುಚಿಯನ್ನು ಗ್ರಹಿಸುತ್ತವೆ!

26) ಬೆಕ್ಕುಗಳು ಮೂರು ಜೋಡಿ ಕಣ್ಣು ರೆಪ್ಪೆಗಳನ್ನು ಹೊಂದಿರುತ್ತವೆ!

27) ಡೊನಾಲ್ಡ್ ಡಕ್ ಕಾಮಿಕ್ಸನ್ನು ಫಿನ್ಲ್ಯಾಂಡನಲ್ಲಿ ಬಹಿಷ್ಕಾರ ಮಾಡಲಾಯಿತು. ಕಾರಣ ಏನೆಂದರೆ ಡೊನಾಲ್ಡ್ ಡಕ್ ಪ್ಯಾಂಟ್ ಹಾಕುವುದಿಲ್ಲ!

28) ಬೇಟೆಗಾರರು ಕೊಲ್ಲುವುದಕ್ಕಿಂತ ಹೆಚ್ಚು ಜಿಂಕೆಗಳನ್ನು ವಾಹನ ಚಾಲಕರು ಕೊಲ್ಲುತ್ತಾರೆ!

29) ಕೆಲವು ಜಾತಿಯ ಎರೆಹುಳಗಳು ಹಸಿವಾದಾಗ ತಮ್ಮ ದೇಹವನ್ನೇ ತಾವು ತಿನ್ನುತ್ತವೆ!

30) ಎಡ ಮೂಗಿನ ಹೊಳ್ಳೆಗಿಂತ ನಾವು ಬಲ ಮೂಗಿನ ಹೊಳ್ಳೆಯಿಂದ ಉತ್ತಮ ಸುವಾಸನೆ ಪಡೆಯುತ್ತೇವೆ!

31) ಹೆಣ್ಣು ಇರುವೆಗಳು ಮನೆಯ ಎಲ್ಲ ಕೆಲಸಗಳನ್ನೂ ಮಾಡುತ್ತವೆ. ಗಂಡು ಇರುವೆಗಳು ಶುದ್ಧ ಸೋಮಾರಿಗಳು! ಮನುಷ್ಯರೂ ಹಾಗೆಯಾ?

32) ಕೊಲಂಬಿಯ ದೇಶದಲ್ಲಿ ಗಾಸಿಪ್ ಮಾಡುವವರಿಗೆ 90,000 ಪೌಂಡ್ಸ್ ದಂಡನೆ ವಿಧಿಸುತ್ತಾರೆ! ಭಾರತಕ್ಕೂ ಈ ಕಾನೂನು ಬರಲಿ ಎಂದು ಪ್ರಾರ್ಥನೆ ಮಾಡಿ ಆಯ್ತಾ!

33) ಕೆಲವು ಮೀನುಗಳು ತಮ್ಮ ಹಲ್ಲುಗಳನ್ನು ಮಸೆಯುವ ಶಬ್ದಗಳ ಮೂಲಕ ಸಂವಹನ ಮಾಡುತ್ತವೆ!

34) ಡಾಲ್ಫಿನಗಳು ಒಂದು ಕಣ್ಣು ತೆರೆದು ಮಲಗುತ್ತವೆ!

35) ಹುಡುಗರಿಗಿಂತ ಹುಡುಗಿಯರಿಗೆ ಹೆಚ್ಚು ರುಚಿಗಳನ್ನು ಗ್ರಹಿಸುವ ರಸಗ್ರಂಥಿಗಳು ಇರುತ್ತವೆ!

36) ಜಿರಾಫೆಗಳಿಗೆ 21 ಇಂಚು ಉದ್ದವಾದ ನಾಲಿಗೆ ಇದ್ದು ಅವುಗಳ ಕಿವಿಗಳನ್ನು ಅವುಗಳೇ ಸ್ವಚ್ಛ ಮಾಡುತ್ತವೆ!

37) ಗೋಲ್ಡ್ ಫಿಷ್ ಎಂಬ ಮೀನುಗಳ ಜ್ಞಾಪಕ ಶಕ್ತಿಯು ಕೇವಲ ಮೂರು ಸೆಕೆಂಡಿಗೆ ಸೀಮಿತ ಆಗಿರುತ್ತದೆ!

38) ಜಗತ್ತಿನಲ್ಲಿ ದನದ ಹಾಲಿಗಿಂತ ಹೆಚ್ಚಾಗಿ ಆಡುಗಳ ಹಾಲು ಹೆಚ್ಚು ಬಳಕೆ ಆಗುತ್ತದೆ!

39) ಇರಾನ್ ದೇಶದಲ್ಲಿ ತಲೆಯನ್ನು ಅಡ್ದಡ್ಡ ಸುತ್ತುವುದರ ಅರ್ಥ ಹೌದು ಎಂದು!

40) ದನಗಳು ಏಣಿಯ ಮೆಟ್ಟಿಲು ಹತ್ತುವಂತೆ ನೀವು ಮಾಡಬಹುದು. ಆದರೆ ಇಳಿಯುವಂತೆ ಮಾಡಲು ನಿಮಗೆ ಸಾಧ್ಯವೇ ಆಗದು!

41) ಪ್ರತೀ ವರ್ಷವೂ ಅಂದಾಜು 7000 ಹೊಸ ಜಾತಿಯ ಕೀಟಗಳು ಸೃಷ್ಟಿ ಆಗುತ್ತವೆ!

42) ಕಾಂಗರೂ ಎಂದಿಗೂ ನಡೆಯಲಾರದು!

43) ಬೆಕ್ಕುಗಳು ತಮ್ಮ ದೇಹದ ಎತ್ತರಕ್ಕಿಂತ ಐದು ಪಟ್ಟು ಎತ್ತರಕ್ಕೆ ಹಾರುತ್ತವೆ!

44) ಥಾಯ್ಲೆಂಡ ದೇಶದಲ್ಲಿ ಗಾಳಿಪಟ ಹಾರಾಟವು ಅಧಿಕೃತ ಕ್ರೀಡೆ ಆಗಿದೆ!

45) ಮನುಷ್ಯನ ಶ್ವಾಸಕೋಶದ ಒಟ್ಟು ವಿಸ್ತೀರ್ಣವು ಒಂದು ಸ್ಟಾಂಡರ್ಡ್ ಟೆನ್ನಿಸ್ ಕೋರ್ಟಿನ ವಿಸ್ತೀರ್ಣಕ್ಕೆ ಹೆಚ್ಚು ಕಡಿಮೆ ಸಮನಾಗಿರುತ್ತದೆ!

46) ದನಗಳು ಒಂದು ವರ್ಷದಲ್ಲಿ 50 ಮಿಲಿಯನ್ ಟನ್ ಮೀಥೇನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಅದು ಅತ್ಯುತ್ತಮ ದಹನಶೀಲ ಇಂಧನ!

47) ಲಿಯಾನಾರ್ಡ ಡಾವಿನ್ಸಿ ಕಾರುಗಳ ಸಂಶೋಧನೆ ಆಗುವ ಮೊದಲೇ ಕಾರುಗಳ ಜಾಕ್ ಕಂಡುಹಿಡಿದಿದ್ದನು!

48) 1611 ಡಿಸೆಂಬರ್ 16ರಂದು ಉಂಟಾದ ಭೂಕಂಪದ ಪರಿಣಾಮವಾಗಿ ಮಿಸ್ಸಿಸಿಪ್ಪಿ ನದಿಯು ರಿವರ್ಸ್ ಹರಿಯಲು ಆರಂಭವಾಯಿತು!

49) ಮನೆಯ ಬೆಕ್ಕು ಯಾವುದೇ ಕಾರಣಕ್ಕೂ ಲಿಂಬೆ ಹಣ್ಣು ಅಥವ ಲಿಂಬೆ ಹಣ್ಣಿನ ಉತ್ಪನ್ನಗಳನ್ನು ಮುಟ್ಟುವುದೇ ಇಲ್ಲ!

50) ಸಾಮಾನ್ಯವಾಗಿ ಗಂಡಸರು ಹೆಂಗಸರಿಗಿಂತ ಸಣ್ಣ ಅಕ್ಷರ ಓದಬಲ್ಲರು!

ಇದೆಲ್ಲವೂ ನಿಮಗೆ ಗೊತ್ತಿತ್ತಾ? ಜಗತ್ತು ಎಷ್ಟೊಂದು ಅದ್ಭುತ ಅಲ್ಲವೇ?

-ರಾಜೇಂದ್ರ ಭಟ್ ಕೆ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!