Saturday, January 18, 2025
Saturday, January 18, 2025

‘ಗ್ಯಾರಂಟಿ’ಗೆ ಸುಸ್ತಾದ ಸಿದ್ಧು ಬಜೆಟ್

‘ಗ್ಯಾರಂಟಿ’ಗೆ ಸುಸ್ತಾದ ಸಿದ್ಧು ಬಜೆಟ್

Date:

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡಿಸುವುದರಲ್ಲಿ ಹೊಸ ದಾಖಲೆ ಏನೇೂ ಮಾಡಿದರು. ಆದರೆ ಚುನಾವಣಾ ಕಾಲದಲ್ಲಿ ಕೊಟ್ಟ ಗ್ಯಾರಂಟಿಗೆ ಹಣ ತುಂಬಿಸುವುದರಲ್ಲಿ ಸುಸ್ತಾಗಿ ಹೇೂಗಿದ್ದಾರೆ ಅನ್ನುವುದು ಈ ಬಾರಿಯ ಬಜೆಟ್ ಮಂಡನೆಯಲ್ಲಿ ಸ್ವಷ್ಟವಾಗಿ ಕಾಣುತ್ತದೆ. ತೆರಿಗೆಯ ಹೆಚ್ಚಳ ಇದು ಜನ ಸಾಮಾನ್ಯರ ದಿನನಿತ್ಯದ ಬದುಕಿನ ಮೇಲೆ ನೇರ ಪರಿಣಾಮ ಬೀರುವುದಂತು ಸತ್ಯ. ಹಾಗಾಗಿ ಉಚಿತವಾಗಿ ನೀಡಿದ ಗ್ಯಾರಂಟಿಯ ಫಲವಾಗಿ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ತಟ್ಟಿದರೂ ಆಶ್ಚರ್ಯ ಪಡಬೇಕಾಗಿಲ್ಲ.

ಈ ಗ್ಯಾರಂಟಿಯ ಹೊಂಡವನ್ನು ತುಂಬಿಸಲು ಶೇ.26 ರಷ್ಟು ಸಾಲಕ್ಕೆ ಕೈ ಹಾಕಬೇಕಾದದ್ದು ಅಭಿವೃದ್ಧಿಯ ದೃಷ್ಟಿಯಿಂದ ಪೂರಕವಲ್ಲ. ಬದಲಾಗಿ ಉದ್ಯೋಗ, ಶಿಕ್ಷಣ, ಆರೇೂಗ್ಯ ರಂಗಕ್ಕೆ ಹೆಚ್ಚಿನ ಒತ್ತು ಕೊಡಬಹುದಿತ್ತು. ಇನ್ನೊಂದು ಅರ್ಥದಲ್ಲಿ ಸಿದ್ದರಾಮಯ್ಯನವರ ಹೊಸ ದಾಖಲೆಯ ಬಜೆಟ್ ‘ಅಹಿಂದ’ ಬಜೆಟ್ ಅಂದರೂ ತಪ್ಪಾಗಲಾರದು. ಬಹುಮುಖ್ಯವಾಗಿ ತಾವು ನಂಬಿಕೊಂಡ ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳನ್ನು ತೃಪ್ತಿಪಡಿಸುವ ಕೆಲಸ ಈ ಬಜೆಟ್ ನಲ್ಲಿ ಸ್ವಷ್ಟವಾಗಿ ಕಾಣುತ್ತದೆ. ಕೇವಲ ಒಂದು ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ತಂದ ಹೊಸ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಕೈ ಬಿಡುವ ನಿರ್ಧಾರ ಸರಿಯಲ್ಲ. ಅಲ್ಪ ಸ್ವಲ್ಪ ಲೇೂಪ ದೇೂಷಗಳನ್ನು ಸರಿಪಡಸಿ ಮುಂದುವರಿಸಬೇಕಿತ್ತು. ಸರ್ಕಾರ ಬದಲಾದ ಹಾಗೆ ಶಿಕ್ಷಣ ಕ್ರಮ ಬದಲಾಯಿಸುವುದರಿಂದ ಇದರ ತೊಂದರೆ ಅನುಭವಿಸುವುದು ಶಿಕ್ಷಣ ಕ್ಷೇತ್ರದಲ್ಲಿ ನೇರವಾಗಿ ತೊಡಗಿಸಿಕೊಂಡ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಹೆತ್ತವರು.

ಕಾಂಗ್ರೆಸ್, ಚುನಾವಣಾ ಸಂದರ್ಭದಲ್ಲಿ ಗ್ಯಾರಂಟಿ ಹೊರತಾಗಿ ನೀಡಿದ ಭರವಸೆಗಳಾದ ಆಶಾ ಕಾರ್ಯಕರ್ತರ ಸಮಸ್ಯೆಯಾಗಲಿ, ಸರ್ಕಾರಿ ನೌಕರರ ಹಳೆ ಪಿಂಚಣಿ ಬೇಡಿಕೆಗಳಾಗಲಿ, ಸರಕಾರಿ ನೌಕರರ ಏಳನೇ ವೇತನದ ಕುರಿತಾಗಿ ಯಾವುದೇ ವಿಚಾರ ಬಜೆಟ್ ನಲ್ಲಿ ಪ್ರಸ್ತಾವನೆ ಮಾಡದೇ ಇರುವುದು ಅವರ ಮಾತು ಕೇಳಿ ಓಟು ನೀಡಿದ ಮತದಾರರಿಗೆ ತುಂಬಾ ಬೇಸರ ತಂದಿರುವುದಂತು ಸತ್ಯ. ಅಭಿವೃದ್ಧಿ ಕೆಲಸಗಳಿಗೆ ಈ ಬಜೆಟ್ ನಲ್ಲಿ ಯಾವುದೇ ಆದ್ಯತೆ ಇಲ್ಲ. ಬರೇ ಗೇೂಡೆಗಳಿಗೆ ಬಣ್ಣ ಬಳಿಯುವ ಕೆಲಸದಂತಿದೆ. ಪ್ರವಾಸೋದ್ಯಮ ಮೀನುಗಾರಿಕೆ ಮುಂತಾದ ವಲಯಗಳಿಗೆ ಯಾವುದೇ ಆದ್ಯತೆ ಇಲ್ಲ. ಇಷ್ಟೆಲ್ಲಾ ಹಣಕಾಸು ಆಡಚಣೆಯ ನಡುವೆ ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡುವ ಭರವಸೆ ಉಪ ಮುಖ್ಯಮಂತ್ರಿಗಳನ್ನು ತೃಪ್ತಿಪಡಿಸುವುದು ಸ್ವಷ್ಟವಾಗಿ ಕಾಣಿಸುತ್ತದೆ. ಅಂತೂ ಸಿದ್ದರಾಮಯ್ಯನವರ ಹದಿನಾಲ್ಕನೇ ಬಜೆಟ್ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದವರಿಗೆ ನೀಡಿದ ಅನು’ದಾನ’ವೆಂದೇ ವ್ಯಾಖ್ಯಾನಿಸಬೇಕಾಗಿದೆ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!