Monday, November 25, 2024
Monday, November 25, 2024

ಸೇೂಲು ಗೆಲುವಿನ ಆತ್ಮವಿಮರ್ಶೆ

ಸೇೂಲು ಗೆಲುವಿನ ಆತ್ಮವಿಮರ್ಶೆ

Date:

ತ್ಮಪರಾಮರ್ಶೆ ಮಾಡಿಕೊಳ್ಳಬೇಕಾದವರು ನಾವಲ್ಲ, ಸೇೂತ ಗೆದ್ದ ಪಕ್ಷಗಳು.ಮೊದಲಿಗೆ ಆಡಳಿತರೂಢ ಬಿಜೆಪಿ ಅತ್ಯಂತ ಹೀನಾಯವಾದ ಸೇೂಲು ಕಾಣಲು ಕಾರಣವೇನು?

1. ಆಡಳಿತ ವಿರೇೂಧಿ ಅಲೆ: ಇದನ್ನು ಸ್ವತಃ ಬಿಜೆಪಿ ಸಚಿವರೇ ಒಪ್ಪಿಕೊಂಡಿದ್ದಾರೆ. ಇದನ್ನು ಮೊದಲು ಒಪ್ಪಿಕೊಂಡು ಸುಧಾರಣೆ ಮಾಡಿಕೊಳ್ಳಬೇಕಿತ್ತು. ಅದನ್ನು ಅಲ್ಲಗಳೆಯುತ್ತಾ ಬಂದರು. ಉದಾ-ಅಂಗನವಾಡಿ ಕಾರ್ಯಕರ್ತರು ತಮ್ಮ ಕನಿಷ್ಠ ವೇತನಕ್ಕೆ ಇಟ್ಟ ಬೇಡಿಕೆ; ಅದೇ ರೀತಿಯಲ್ಲಿ ಸುಮಾರು ಮೂರು ಲಕ್ಷ ಸರಕಾರಿ ನೌಕರರು ತಮಗೆ ಹಳೆ ಪಿಂಚಣಿ ನೀಡಿ ಅನ್ನುವ ತಿಂಗಳು ಗಟ್ಟಲೆ ಹೇೂರಾಟವನ್ನು ಹೆಂಗಸರು ಮಕ್ಕಳನ್ನು ಕೂಡಿಸಿಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೂತು ರೇೂಧಿಸಿದರೂ ಕೂಡಾ ಸತ್ತಿದ್ದಾರಾ ಇದ್ದರಾ ಅನ್ನುವುದನ್ನು ವಿಚಾರಿಸಲು ಬಾರದ ಸರಕಾರಕ್ಕೆ ಅಂದೇ ಈ ನೌಕರರು ಮನನೊಂದು ಶಾಪ ಕೊಟ್ಟು ಹೇೂಗಿದ್ದು ಮನ ಕಲುಕುವಂತಿತ್ತು. ಇವರ ಸುಮಾರು ಆರು ಏಳು ಲಕ್ಷ ಮತಗಳು ಕಾಂಗ್ರೆಸ್ ಗೆಲುವಿಗೆ ಸಾಕಷ್ಟು ದೇಣಿಗೆ ನೀಡಿದೆ.

2. ಮೀಸಲಾತಿ: ಈ ವಿಷಯ ಬಂದಾಗ ಕೂಡಾ ಯಾವ ಸಮುದಾಯವೇ ಇರಲಿ ಅವರಿಗೆ ಕೊಟ್ಟ ಮೀಸಲಾತಿ ವಾಪಾಸು ತೆಗೆದುಕೊಂಡಿದ್ದು ಅತ್ಯಂತ ಅನ್ಯಾಯ. ಇದು ಕೂಡ ಬಿಜೆಪಿ ಸೇೂಲಿಗೆ ಬ್ರಹ್ಮಾಸ್ತ್ರವಾಗಿ ಬಳಕೆಯಾಗಿದೆ.

3. ಭ್ರಷ್ಟಾಚಾರದ ಆರೋಪ: ಇದನ್ನು ಕೂಡ ಕಾಂಗ್ರೆಸ್ 40% ಲೇಬಲ್ ಅನ್ನು ನಿರಂತರವಾಗಿ ಬಿಜೆಪಿ ಸರ್ಕಾರದ ಮೇಲೆ ಅಂಟಿಸಿದಾಗ ಕೂಡ ಅದನ್ನು ಹೊತ್ತು ತಿರುಗಿದರೆ ಅದಕ್ಕೆ ಪ್ರತಿ ಉತ್ತರ ಕೊಡುವ ಗೌಜಿಗೆ ಹೇೂಗಲೇ ಇಲ್ಲ. ಇದು ಶಾಶ್ವತವಾಗಿ ತೆಗೆಯಲಾರದ ಲೇಬಲಾಗಿ ಮುಂದುವರಿಯಿತು.

5. ಮೋದಿ ಜಪ: ನಾವು ಏನು ಮಾಡಿದರು ನಡೆಯುತ್ತದೆ, ಮೇೂದಿ ಬಂದು ಹೇೂದರೆ ಸಾಕು ನಮ್ಮ ಜೀವ ಉಳಿಯುತ್ತದೆ ಅನ್ನುವ ಬಲವಾದ ನಂಬಿಕೆ. ಆದರೆ ಇದು ಹೆಚ್ಚು ಕಾಲ ನಡೆಯುವುದಿಲ್ಲ. ಜನ ಬುದ್ಧಿವಂತರಿದ್ದಾರೆ ಅನ್ನುವುದನ್ನು ತಿಳಿಯದೇ ಈಗ ಬುದ್ಧಿ ಕಲಿಯುವ ಕಾಲ ಈ ಚುನಾವಣಾ ಫಲಿತಾಂಶ ಸ್ವಷ್ಟವಾಗಿ ಹೇಳಿದೆ.

6. ಅವೈಜ್ಞಾನಿಕ ಮಾರ್ಗದರ್ಶನ: ರಾಜಕೀಯದ ವಾಸ್ತವಿಕತೆಯನ್ನು ತಿಳಿಯದ ಚುನಾವಣೆಯಲ್ಲಿ ನಿಂತು ಗೆಲ್ಲಲು ಸಾಧ್ಯವಿಲ್ಲದವರ ಮಾರ್ಗದರ್ಶನದ ಫಲವಾಗಿ ಬಿಜೆಪಿ ಹಲವಾರು ಸೀಟುಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂತು.

ಕಾಂಗ್ರೆಸ್ ಯಾಕೆ ಗೆದ್ದಿದೆ?: 1. ಸೋಲಿನಿಂದ ಪಾಠ: ಸೇೂಲಿನ ಮೇಲೆ ಸೇೂಲಿನಿಂದ ಬದುಕಿನ ಪಾಠವನ್ನು ಕಲಿತಿದೆ ಅನ್ನುವುದು ಸ್ಬಷ್ಟ. ಜನರ ಮೂಲಭೂತ ಬೇಡಿಕೆಗಳೇನು, ಬಡತನದ ವಿಷಯಗಳು ಭಾವನಾತ್ಮಕ ವಿಷಯಗಳನ್ನು ಹೇಗೆ ಮೆಟ್ಟಿ ನಿಲ್ಲಬಹುದು ಅನ್ನುವ ವಾಸ್ತವಿಕ ಸತ್ಯವನ್ನು ಅರ್ಥಮಾಡಿಕೊಂಡಿದೆ. 2. ರಾಜ್ಯದ ಜನರಿಗೆ ರಾಜ್ಯ ನಾಯಕರೇ ಬೇಗನೇ ಹತ್ತಿರವಾಗಬಲ್ಲರು ಅನ್ನುವ ಚುನಾವಣಾ ತಂತ್ರಗಾರಿಕೆಗಳು ಕಾಂಗ್ರೆಸ್‌ನ ಜಯಕ್ಕೆ ಕಾರಣವೂ ಆಯಿತು. ಆದರೆ ಈ ಕೊರತೆ ಎದ್ದುಕಂಡಿದ್ದು ಬಿಜೆಪಿಯಲ್ಲಿ.

ಸಿದ್ದಾಪುರ ಮೂಲ್ಕಿ ಅಂತಹ ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರದ ಪ್ರಧಾನಿ, ಗೃಹ ಸಚಿವರು, ಹೊರ ರಾಜ್ಯದ ಮುಖ್ಯ ಮಂತ್ರಿಗಳು ಬಂದು ರೇೂಡ್ ಶೇೂ ಭಾಷಣ ಮಾಡಿ ಎಬ್ಬಿಸಬೇಕಾದ ಪರಿಸ್ಥಿತಿ. ಬರೇ ರೇೂಡ್ ಷೇೂ, ರಾಲಿಗಳಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ ಅನ್ನುವುದು ಈ ಚುನಾವಣಾ ಸೇೂಲು ಗೆಲುವಿನ ಸಂದೇಶವೂ ಹೌದು. 3. ಕೊಟ್ಟ ಗ್ಯಾರಂಟಿ ಗಳನ್ನು ಪೂರೈಕೆ ಮಾಡಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧ್ಯ, ಇಲ್ಲವಾದರೆ ಬಿಜೆಪಿಗೆ ಇಂದು ಬಂದ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!