Home ಸುದ್ಧಿಗಳು ಪ್ರಾದೇಶಿಕ ಉಡುಪಿ ಮೂಲದ ಸಫಲ್ ಶೆಟ್ಟಿ ಐ.ಸಿ.ಎಸ್.ಇ. ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ವಿಶಿಷ್ಟ ಸಾಧನೆ

ಉಡುಪಿ ಮೂಲದ ಸಫಲ್ ಶೆಟ್ಟಿ ಐ.ಸಿ.ಎಸ್.ಇ. ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ವಿಶಿಷ್ಟ ಸಾಧನೆ

355
0

ಉಡುಪಿ, ಮೇ 16: ಚಿಕ್ಕಮಗಳೂರು ಸೇಂಟ್‌ ಮೆರೀಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಉಡುಪಿ ಮೂಲದ ಸಫಲ್ ಎಸ್ ಶೆಟ್ಟಿ ಈ ಬಾರಿಯ ಐ.ಸಿ.ಎಸ್.ಇ.ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 98.2 ಅಂಕಗಳನ್ನು ಪಡೆಯುವುದರೊಂದಿಗೆ 10ನೇ ರ್ಯಾಂಕ್ ಪಡೆಯುವುದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

ಇವರು ಉಡುಪಿ ಮೂಲದ ಚಿಕ್ಕಮಗಳೂರು ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಡಾ. ಎನ್. ಸಖಾರಾಂ ಶೆಟ್ಟಿ ಮತ್ತು ಡಾ. ಬೆಳ್ಕಳೆ ಶರ್ಮಿಳಾ ಶೆಟ್ಟಿ ದಂಪತಿ ಪುತ್ರ. ವೈದ್ಯಕೀಯ ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವ ಸಫಲ್ ಶೆಟ್ಟಿ ಪ್ರಸ್ತುತ ಕ್ರಿಕೆಟ್ ನಲ್ಲಿ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.