Sunday, January 19, 2025
Sunday, January 19, 2025

ಶಿಕ್ಷಣ ಕ್ಷೇತ್ರವನ್ನು ತಲ್ಲಣಗೊಳಿಸುತ್ತಿರುವ ಆತ್ಮಹತ್ಯೆಯ ಪ್ರಕರಣಗಳು

ಶಿಕ್ಷಣ ಕ್ಷೇತ್ರವನ್ನು ತಲ್ಲಣಗೊಳಿಸುತ್ತಿರುವ ಆತ್ಮಹತ್ಯೆಯ ಪ್ರಕರಣಗಳು

Date:

ತ್ತೀಚಿನ ಒಂದು ಸರಕಾರಿ ಮಾಹಿತಿ ಪ್ರಕಾರ ಕೇವಲ 5 ವರ್ಷಗಳಲ್ಲಿ ನಮ್ಮ ರಾಜ್ಯ ಒಂದರಲ್ಲಿಯೇ 1058 ಮಂದಿ ವಿದ್ಯಾರ್ಥಿಗಳು ಒಂದಲ್ಲ ಕಾರಣಕ್ಕಾಗಿಯೇ ಆತ್ಮಹತ್ಯೆಗೆ ಶರಣಾಗಿದ್ದರೆ. ಇದೇ ಒಂದು ವರ್ಷದಲ್ಲಿ 117 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಬಲಿಯಾಗಿದ್ದಾರೆ.

ಇದು ಅತ್ಯಂತ ಮನಕಲಕುವ ಗಂಭೀರವಾದ ವಿಚಾರ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮನೇೂವೈದ್ಯ ಕ್ಷೇತ್ರದಲ್ಲಿ ವಿಸ್ತಾರವಾಗಿ ಚರ್ಚೆ ನಡೆಸಬೇಕಾದ ಅನಿವಾರ್ಯತೆ ಬಂದಿದೆ.

ನಮ್ಮ ಸರ್ಕಾರ ಕೂಡ ಇದನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುವುದರ ಜೊತೆಗೆ ಪರಿಹಾರ ಹುಡುಕುವಲ್ಲಿ ತಕ್ಷಣವೇ ಮುಂದಾಗಬೇಕಾಗಿದೆ. ಹೊಸ ಶಿಕ್ಷಣ ಪಠ್ಯ ಪುಸ್ತಕ ಬಗ್ಗೆ ಮಾತ್ರ ಚಿಂತಿಸಿದರೆ ಸಾಲದು ಎಳೆಯ ಮಕ್ಕಳ ಜೀವ ಬದುಕಿನ ಬಗ್ಗೆಯೂ ಆಲೇೂಚಿಸಬೇಕಾಗಿದೆ.

ಇಂದಿನ ದಿನಗಳಲ್ಲಿ ಆಗುವ ಆತ್ಮಹತ್ಯೆಗಳ ಹಿನ್ನೆಲೆಯನ್ನು ಸೂಕ್ಷ್ಮವಾಗಿ ನೇೂಡುವಾಗ ಇದಕ್ಕೆ ಬರೇ ಶಿಕ್ಷಕರೇ ಕಾರಣವೇ? ಹೆತ್ತವರ ಪಾತ್ರ ಹೇಗಿರಬೇಕು?ವಿದ್ಯಾರ್ಥಿಗಳು ಮಾನಸಿಕ ಒತ್ತಡಗಳಿಗೆ ಒಳಗಾಗಿ ಕ್ಷುಲ್ಲಕ ಕಾರಣಕ್ಕೆ ತಮ್ಮ ಅಮೂಲ್ಯವಾದ ಜೀವವನ್ನೆ ಕಳೆದುಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ ಅಂದರೆ ನಾವು ಅವರಿಗೆ ನೀಡುವ ಶಿಕ್ಷಣ ವ್ಯವಸ್ಥೆಯು ಕಾರಣವಿರಬಹುದೇ ಅನ್ನುವ ಹತ್ತು ಹಲವು ಪ್ರಶ್ನೆಗಳು ಶಿಕ್ಷಣ ವಲಯದಲ್ಲಿ ಅದರಲ್ಲೂ ಬಹುಮುಖ್ಯವಾಗಿ ಹೆತ್ತವರಲ್ಲಿ ಶಿಕ್ಷಕರಲ್ಲಿ ವಿದ್ಯಾರ್ಥಿ ಸಮುದಾಯದಲ್ಲಿ ಮೂಡಿಬಂದಿರುವುದಂತೂ ಸತ್ಯ.

ವಿದ್ಯಾದೇಗುಲದ ಶಿಕ್ಷಣ ಅನ್ನುವ ರಥ ಯಶಸ್ವಿಯಾಗಿ ಚಲಿಸ ಬೇಕಾದರೆ ಶಿಕ್ಷಕರು, ಹೆತ್ತವರು, ವಿದ್ಯಾರ್ಥಿಗಳು ಅನ್ನುವ ಮೂರು ಗಾಲಿಗಳ ಸಂಬಂಧ ಅನ್ಯೇೂನ್ಯವಾಗಿರಬೇಕು.

ಇಲ್ಲಿ ಒಂದು ಗಾಲಿ ಸ್ವಲ್ಪ ಎಡವಿದ್ದರೂ ಸಾಕು ವಿದ್ಯಾರ್ಥಿಗಳ ಬದುಕೇ ದುಸ್ಥರವಾಗುತ್ತದೆ ಅನ್ನುವ ಎಚ್ಚರಿಕೆ ಈ ಮೂರು ಗಾಲಿಗಳಿಗೆ ಇರಲೇಬೇಕು.

ಇಂದು ಶಿಕ್ಷಣ ವಲಯದಲ್ಲಿ ಈ ಮೂರು ಗಾಲಿಗಳಾದ ಶಿಕ್ಷಕರು ರಕ್ಷಕರು ವಿದ್ಯಾರ್ಥಿಗಳ ದಿನನಿತ್ಯದ ಸಂಬಂಧಗಳನ್ನು ಸಿ.ಸಿ. ಕ್ಯಾಮರಗಳಲ್ಲಿ ಸೆರೆ ಹಿಡಿದು ನೇೂಡಬೇಕಾದ ದು:ಸ್ಥಿತಿ ಬಂದಿದೆ.

ಮೊದಲು ಮನೆಯಲ್ಲಿ ಮನೆ ತುಂಬಾ ಮಕ್ಕಳು ಹೆತ್ತವರ ಬೈಗುಳ ಬಡಿತ ಹೆದರಿಕೆಯಿಂದ ಬೆಳೆಯುತ್ತಿದ್ದ ಮಕ್ಕಳು ಸಣ್ಣಪುಟ್ಟ ವಿಷಯಗಳನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯುವ ಮನಃಸ್ಥಿತಿ ಇತ್ತು.

ಆದರೆ ಇಂದಿನ ಎರಡು ಬೇಕು ಒಂದು ಸಾಕು ಅನ್ನುವ ಕೊಂಡಾಟದ ಕುಟುಂಬದಲ್ಲಿ ಬೆಳೆದ ಮಕ್ಕಳಿಗೆ ಸಂಸಾರದ ಸಂಬಂಧಗಳ ಅರಿವೇ ಇಲ್ಲ.

ತಂದೆ ತಾಯಂದಿರು ಅಷ್ಟೇ ತಮ್ಮ ಮಕ್ಕಳಿಂದ ಬೆಟ್ಟದಷ್ಟು ಆಸೆ ಹೊತ್ತು ಬೆಳೆಸುತ್ತಾರೆ. ಪ್ರತ್ಯಕ್ಷ ಹಾಗೂ ಪರೇೂಕ್ಷವಾಗಿ ಇವೆಲ್ಲವೂ ಮಕ್ಕಳ ಕಲಿಕೆಯ ಮೇಲೆ ಒತ್ತಡ ಬೀರುತ್ತದೆ.

ಈ ಎಲ್ಲಾ ಒತ್ತಡ ಒತ್ತಾಸೆಗಳನ್ನು ಹೊತ್ತ ಮಗು ಶಾಲೆಯಲ್ಲಿ ಕೂಡ ಶಿಕ್ಷಣ ಸಂಸ್ಥೆಗಳು ಹೇರುವ ವಿಶಿಷ್ಟ ಶ್ರೇಣಿ ಅಂಕ ಶೇ.100 ಫಲಿತಾಂಶ.

ನಮ್ಮ ಸಂಸ್ಥೆಯ ಒಣ ಪ್ರತಿಷ್ಠೆ ಈ ಎಲ್ಲಾ ಒತ್ತಡಗಳ ನಡುವೆ ಆ ಮಗುವಿನ ಮಾನಸಿಕ ದೈಹಿಕ ಪರಿಸ್ಥಿತಿ ಹೇಗಾಗಬಹುದು? ನೀವೇ ಊಹಿಸಿ.

ಈ ಎಲ್ಲಾ ಒತ್ತಡದ ಪರಿಣಾಮವಾಗಿ ಮಗು ಮಾನಸಿಕ ಖಿನ್ನತೆ, ಆತ್ಮಹತ್ಯೆಗೆ ತನ್ನ ಬದುಕನ್ನೆ ಕಳೆದುಕೊಳ್ಳುವ ಪರಿಸ್ಥಿತಿಗೆ ಬರುವುದಂತೂ ಸತ್ಯ.

ಕಾಲ ಮಿಂಚಿ ಕೈ ತಪ್ಪಿದ ಮೇಲೆ ಮಗುವಿನ ಆತ್ಮಹತ್ಯೆಗೆ ಹೆತ್ತವರು ಶಿಕ್ಷಕರನ್ನು ಶಿಕ್ಷಕರು ಹೆತ್ತವರನ್ನು ದೂರಿ ಕೊನೆಗೂ ಆರಕ್ಷಕ ಠಾಣೆಗೆ ದೂರು ಕೊಡುವುದರಲ್ಲಿಯೇ ಮಗುವಿನ ಬದುಕು ಭವಿಷ್ಯ ಕೊನೆಗಾಣಿಸಿ ಬಿಡುತ್ತೇವೆ.

ಒಂದಂತೂ ಸತ್ಯ ಇನ್ನು ಮುಂದೆ ಒಬ್ಬ ನಿಷ್ಠಾವಂತ ಶಿಕ್ಷಕ ತನ್ನ ವಿದ್ಯಾರ್ಥಿಗಳನ್ನು ತಿದ್ದಿ ತೀಡುವುದರಲ್ಲಿ ನೂರು ಬಾರಿ ಆಲೇೂಚಿಸಿ ಮುಂದವರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಂತೂ ನಿಜ. ಹಾಗಾದರೆ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿ ಹೆಚ್ಚು ಅಂಕಗಳಿಗೆ ಉತ್ತೇಜಿಸುವುದು ತಪ್ಪೇ?

ಅದೇ ವಿದ್ಯಾರ್ಥಿ ಉತ್ತಮ ಅಂಕಗಳಿಸಿ ಪಾಸಾದರೆ ನಾವು ಮೇಷ್ಟ್ರುಗಳನ್ನು ಹೊಗಳಿ ಅಟ್ಟಕ್ಕೆ ಎರಿಸುತ್ತೇವೆ. ಅದೇ ಮಗು ದಾರಿ ತಪ್ಪಿ ನಡೆದರೆ ಅದೇ ಶಿಕ್ಷಕರನ್ನು ಚಟ್ಟಕ್ಕೆ ಏರಿಸುವವರು ನಾವೇ?

ಅಂತೂ ಒಟ್ಟಿನಲ್ಲಿ ಈ ಪವಿತ್ರವಾದ ಶೈಕ್ಷಣಿಕ ಅನ್ನುವ ರಥದ ಮೂರು ಚಕ್ರಗಳು ಉರುಳದಂತೆ ನೇೂಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಹೊಣೆ ಅನ್ನುವುದನ್ನು ಮರೆಯಲು ಸಾಧ್ಯನೇ ಇಲ್ಲ ಅಲ್ವೇ?

– ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!