Monday, January 20, 2025
Monday, January 20, 2025

ವಿಕಾಸದ ಬೆಳಕು ಹರಿಸುತ್ತಿರುವ ಜಮ್ಮು ಕಾಶ್ಮೀರದ ಮುಖ್ಯ ಕಾರ್ಯಾಲಯ

ವಿಕಾಸದ ಬೆಳಕು ಹರಿಸುತ್ತಿರುವ ಜಮ್ಮು ಕಾಶ್ಮೀರದ ಮುಖ್ಯ ಕಾರ್ಯಾಲಯ

Date:

ರಾಜಕೀಯಶಾಸ್ತ್ರದ ವಿದ್ಯಾರ್ಥಿಯಾದ ನನಗೆ ಕಾಶ್ಮೀರ ಪ್ರವಾಸದ ಮುಖ್ಯ ಉದ್ದೇಶ ಬರೇ ಕಾಶ್ಮೀರದ ಪ್ರಕೃತಿಯ ಮಡಿಲ ಸೌಂದರ್ಯತೆಯನ್ನು ಸವಿಯುವುದು ಮಾತ್ರವಾಗಿರಲಿಲ್ಲ, ಇದರ ಜೊತೆಗೆ ಜಮ್ಮು ಕಾಶ್ಮೀರದ ಬೇಸಿಗೆ ಕಾಲದ ರಾಜಧಾನಿ ಅನ್ನಿಸಿಕೊಂಡ ಲಾಲ್ ಚೌಕ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಕಾಶ್ಮೀರ ಶಾಸನ ಸಭೆಯ’ ಸ್ಥಿತಿಗತಿ ಹೇಗಿದೆ ಮತ್ತು ಇದಕ್ಕೆ ತಾಗಿಕೊಂಡಿರುವ ಅಭಿವೃದ್ಧಿಯ ವಿಕಾಸ ಸೌಧ ಅನ್ನಿಸಿಕೊಂಡ ಸೆಕ್ರೆಟೇರಿಯಟ್ ಕಾರ್ಯವೈಖರಿ ಹೇಗಿದೆ ಅನ್ನುವುದನ್ನು ವೀಕ್ಷಿಸಬೇಕೆಂಬ ಕುತೂಹಲವು ಇತ್ತು.

ಕಾಶ್ಮೀರದ ಸೆಕ್ರೆಟರಿಯೆಟ್ ಅಧಿಕಾರಿಗಳ ಸಹಾಯ ಪಡೆದುಕೊಂಡು ಮೊದಲು ನೇರವಾಗಿ ಪ್ರವೇಶ ಮಾಡಿದ್ದು ಕಾಶ್ಮೀರದ ಸೆಕ್ರೆಟೇರಿಯಟ್ ಪ್ರಾಂಗಣಕ್ಕೆ. ಆರು ಅಂತಸ್ತಿನ ಭವ್ಯ ಕಟ್ಟಡ. ಮೂರನೇ ಮಹಡಿಯಲ್ಲಿ ಮುಖ್ಯ ಕಾರ್ಯದರ್ಶಿಗಳ ಕೊಠಡಿ, ಪ್ರಧಾನ ಕಾರ್ಯದರ್ಶಿಗಳ ಆಡಳಿತ ಕಛೇರಿ ಐದನೇ ಮಹಡಿಯಲ್ಲಿ ಇದೆ. ನಮ್ಮ ವಿಕಾಸಸೌಧಕ್ಕೆ ಜನ ನುಗ್ಗುವ ತರದಲ್ಲಿ ಸಾರ್ವಜನಿಕರ ತಿರುಗಾಟ ತುಂಬಾ ಕಡಿಮೆ. ಕಟ್ಟಡದ ಸುತ್ತಮುತ್ತ ಭದ್ರತಾ ಕಾವಲು ಪಡೆ ಇದೆ. ಅಧಿಕಾರಿಗಳ ಜೊತೆಗೆ ಹೇೂದ ಕಾರಣ ನನ್ನ ಪ್ರವೇಶ ಸುಗಮವಾಗಿತ್ತು. ಅಭಿವೃದ್ಧಿ ಖಾತೆಯ ಪ್ರಧಾನ ಕಾರ್ಯದರ್ಶಿಗಳ ಆಡಳಿತದ ಕಚೇರಿಯಲ್ಲಂತೂ ನಮಗೆ ರಾಜಾತಿಥ್ಯ. ನಾವು ಕರ್ನಾಟಕದಿಂದ ಬಂದಿದ್ದೇವೆ ಅನ್ನುವುದು ತಿಳಿದ ತಕ್ಷಣವೇ ನಮ್ಮನ್ನು ಕೂರಿಸಿ ಚಾ ತಿಂಡಿ ಕೊಟ್ಟು ಉಪಚರಿಸಿದ್ದು ಮಾತ್ರವಲ್ಲ ಅಲ್ಲಿನ ಅಧಿಕಾರಿಗಳು ಇಡಿ ಆಡಳಿತದ ಕುರಿತಾಗಿ ಮಾಹಿತಿ ನೀಡಿದ್ದು ಮಾತ್ರವಲ್ಲ ಇಡೀ ಕಾಶ್ಮೀರದ ಅಭಿವೃದ್ಧಿಯ ಯೇೂಜನೆಯ ಚಿತ್ರಣವನ್ನು ನಮ್ಮ ಮುಂದೆ ತಂದಿಟ್ಟರು.

ಅನಂತರದಲ್ಲಿ ನಾವು ನೇರವಾಗಿ ಪ್ರವೇಶ ಮಾಡಿದ್ದು ಕಾಶ್ಮೀರ ವಿಧಾನಸೌಧದ ಸಂಕಿರಣ. ಅಲ್ಲಿನ ಚಿತ್ರಣ ಸಂಪೂರ್ಣ ಭಿನ್ನವಾಗಿತ್ತು. ಎಲ್ಲೋ ಬೆರಳೆಣಿಕೆಯಷ್ಟು ಸಿಬ್ಬಂದಿಗಳು ಕೂತ್ತಿದ್ದರು ಅನ್ನುವುದಕ್ಕಿಂತ ತಿರುಗಾಡುತ್ತಿದ್ದರು ಶಾಸನಸಭೆ ನಡೆಯುವ ಹಾಲ್ ಬಾಗಿಲಿಗೆ ಬೀಗ ಜಡಿದಿದ್ದು ಎದ್ದು ಕಾಣತಿತ್ತು. ಶಾಸನಸಭೆ ಬೆಳಕು ಕಾಣದೆ ಆರೇಳು ವರುಷಗಳು ಕಳೆದು ಹೋಯಿತು ಅನ್ನುವುದನ್ನು ಅಲ್ಲಿನ ಬಾಗಿಲಿಗೆ ಜಡಿದ ಬೀಗಗಳೆ ಸಾರಿ ಹೇಳುವಂತಿದೆ. ಹೊರಗಡೆ ಬಾಗಿಲಿನ ಗೇೂಡೆಗಳ ಮೇಲೆ ತೂಗು ಹಾಕಿದ ನಾಮಫಲಕಗಳು. ‘ನಾನು ಎಸೆಂಬ್ಲಿ ಹಾಲ್’, ‘ನಾನು ಮುಖ್ಯ ಮಂತ್ರಿ ಕಛೇರಿ’, ‘ನಾನು ಸ್ಪೀಕರ್‌ ಕೊಠಡಿ’ ಅನ್ನುವುದಕ್ಕೆ ದಾರಿ ತೇೂರಿಸುವಂತಿದೆ ಬಿಟ್ಟರೆ ಒಂದೇ ಒಂದು ನರಪಿಳ್ಳೆ ಅಲ್ಲಿಲ್ಲ. ಒಂದು ಪಕ್ಕದ ಮೂಲೆ ಕೇೂಣೆಯಲ್ಲಿ ವಿಧಾನಸಭಾ ಕಾರ್ಯದರ್ಶಿಗಳು ಕೂತಿರುವುದು ಕಾಣುತ್ತದೆ. ಅವರು ನಮ್ಮನ್ನು ನೇೂಡಿದ ತಕ್ಷಣವೇ ನಮ್ಮನ್ನು ಕರೆದು ಪರಿಚಯಿಸಿ ಮಾತನಾಡಿಸಿ ಕಳುಹಿಸಿಕೊಟ್ಟರು. ಇದಿಷ್ಟು ಒಳಗಿನ ಒಂದಿಷ್ಟು ರಾಜಕೀಯ ಚಿತ್ರಣವಾದರೆ ಹೊರಗಿನ ಚಿತ್ರಣ ಹೇಗಿದೆ ನೇೂಡುವ.

ಕಾಶ್ಮೀರದ ಪ್ರಧಾನ ಕೇಂದ್ರ ಸ್ಥಳ ಶ್ರೀನಗರ. ಈ ಶ್ರೀನಗರದಲ್ಲಿ ಮೊದಲಿನಿಂದಲೂ ಬಹುಚರ್ಚೆಗೆ ಗ್ರಾಸವಾದ ಸ್ಥಳವೆಂದರೆ ಲಾಲ್ ಚೌಕ್. ಇಲ್ಲಿನ ಇತಿಹಾಸವೆಂದರೆ 2019ರ ತನಕ ಈ ಚೌಕದಲ್ಲಿ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿದ್ದೇ ಇಲ್ಲ. ಆದರೆ ಸಂವಿಧಾನದಲ್ಲಿ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ವಿಧಿ 370 ಮತ್ತು 35 (A) 2019ರಲ್ಲಿ ವಿಧಿವಶವಾದ ಮೇಲೆ ಭಾರತದ ತ್ರಿವರ್ಣ ಧ್ವಜ ಪ್ರತಿನಿತ್ಯ ಇಲ್ಲಿ ಹಾರಾಡುತ್ತಿದೆ, ರಾರಾಜಿಸುತ್ತಿದೆ. ಎಲ್ಲಿಯವರೆಗೆ ತ್ರಿವರ್ಣಗಳು ರಾರಾಜಿಸುತ್ತಿವೆ ಅಂದರೆ ರಾತ್ರಿಯ ಹೊತ್ತಿನಲ್ಲಿ ಮುಖ್ಯ ರಸ್ತೆಯ ಬದಿಯಲ್ಲಿ ಹಾಕಿರುವ ಡೆಕೇೂರೆಟ್ಯೂ ಲೈಟ್ ಗಳು ಕೂಡಾ ತ್ರಿವರ್ಣಗಳನ್ನೆ ಪ್ರತಿಫಲಿಸುತ್ತಿವೆ. ಇದು ನಾವು ಕಾಣುವ ಕಾಶ್ಮೀರ ನೆಲದ ಬದಲಾವಣೆ. ನಮ್ಮ ಹಿರಿಯ ರಾಜಕಾರಣಿಗಳು ಅನ್ನಿಸಿಕೊಂಡವರು ಎಲ್ಲಿ ವೈಶಂಪಾಯನ ಸರೇೂಹರದಲ್ಲಿ ಅಡಗಿರಬಹುದು ಎಂದು ಹುಡುಕಿಕೊಂಡು ಶ್ರೀನಗರವನ್ನೆ ಸುತ್ತಿ ನೇೂಡಿದಾಗ ಅವರ ಸಿರಿವಂತಿಕೆಯನ್ನು ಸಾರುವ ಏಳು ಸುತ್ತಿನ ಕೇೂಟೆಯ ಭವ್ಯ ಬಂಗಲೆಗಳು ಜನರಿಲ್ಲದೆ ಬಿಕೊ ಅನ್ನುವ ಪರಿಸ್ಥಿತಿ. ಸದ್ಯಕ್ಕಂತೂ ಅವರೆಲ್ಲರೂ ದೇಶದ ರಾಜಧಾನಿಯತ್ತ ವಲಸೆ ಹೇೂಗಿದ್ದಾರೆ ಅನ್ನುವ ಸುದ್ದಿ. ಒಂದು ಕಾಲದಲ್ಲಿ’ನಾನೇ ರಾಷ್ಟ್ರಪತಿ ನನ್ನ ಮಗನೇ ಪ್ರಧಾನಿ’ ಅಂದು ಘೇೂಷಿಸಿಕೊಂಡ ಅಪ್ಪ ಮಗರನ್ನು ಕಾಶ್ಮೀರದಲ್ಲಿ ಹುಡುಕಿ ನೇೂಡುವುದೇ ಅತೀ ದೊಡ್ಡ ಸಾಹಸ.

ಹಾಗಾದರೆ ಅಲ್ಲಿನ ಜನರ ಮನಸ್ಸು ಏನು ಹೇಳುತ್ತದೆ? ಸದ್ಯಕ್ಕಂತೂ ರಾಜಕಾರಣಿಗಳ, ಚುನಾವಣೆಗಳ, ಹೇೂರಾಟಗಳ ಬಾಂಬ್‌ ಸಿಡಿಲುಗಳ ಪಿಡುಗಿನಿಂದ ದೂರವಿದ್ದು ನೆಮ್ಮದಿಯಲ್ಲಿ ಇದ್ದಾರೆ. ಹಾಗಂತ ಅಲ್ಲಿನ ಜನ ತಮಗೆ ಜನಪ್ರತಿನಿಧಿ ಸರ್ಕಾರದ ವ್ಯವಸ್ಥೆ ಬೇಡ ಅನ್ನುವ ಮನಸ್ಥಿತಿ ಇಲ್ಲ. ಜಾತಿ, ಮತ, ಧರ್ಮ ಮೀರಿ ಸರ್ವರನ್ನೂ ಸಮಭಾವ ಸಮಚಿತ್ತದಿಂದ ಕಾಣುವ ಅಭಿವೃದ್ಧಿ ಪರವಾದ ಸರಕಾರದ ಬೇಕು ಅನ್ನುವ ನಿರೀಕ್ಷೆಯಲ್ಲಿ ಇರುವುದಂತೂ ಸತ್ಯ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!