Sunday, January 19, 2025
Sunday, January 19, 2025

ಆಯುರ್ವೇದವು ಪ್ರಕೃತಿಯೊಂದಿಗಿನ ನಮ್ಮ ಸಹಜೀವನದ ಸಂಬಂಧವಾಗಿದೆ

ಆಯುರ್ವೇದವು ಪ್ರಕೃತಿಯೊಂದಿಗಿನ ನಮ್ಮ ಸಹಜೀವನದ ಸಂಬಂಧವಾಗಿದೆ

Date:

ವರ್ಷದ ಆಯುರ್ವೇದ ದಿನವನ್ನು 23 ಅಕ್ಟೋಬರ್ 2022 ರಂದು ಆಚರಿಸಲಾಗುತ್ತದೆ. ಆಜಾದಿ ಕಾ ಅಮೃತ್ ಮಹೋತ್ಸವದ ಉಪಕ್ರಮದ ಅಡಿಯಲ್ಲಿ ಆಯುರ್ವೇದ ದಿನಾಚರಣೆಯನ್ನು ನಡೆಸಲಾಗುತ್ತಿದೆ. ‘ಹರ್ ದಿನ್ ಹರ್ ಘರ್ ಆಯುರ್ವೇದ’ ಅಂದರೆ ಪ್ರತಿದಿನ ಪ್ರತಿ ಮನೆಯಲ್ಲಿ ಆಯುರ್ವೇದ ಎಂಬುದು ಈ ವರ್ಷದ ಆಯುರ್ವೇದ ದಿನದ ಧ್ಯೇಯವಾಕ್ಯವಾಗಿದೆ.

ಆಯುರ್ವೇದವು ಕೇವಲ ವೈದ್ಯಕೀಯ ವ್ಯವಸ್ಥೆಯಲ್ಲದೆ ಪ್ರಕೃತಿಯೊಂದಿಗಿನ ನಮ್ಮ ಸಹಜೀವನದ ಸಂಬಂಧದ ಅಭಿವ್ಯಕ್ತಿಯಾಗಿದೆ. ಇದರ ಮುಖ್ಯ ವಿಶೇಷತೆ ಏನೆಂದರೆ ರೋಗವನ್ನು ತಡೆಗಟ್ಟುವುದು ಮತ್ತು ಆರೋಗ್ಯವನ್ನು ಉತ್ತೇಜಿಸುವುದು ಎರಡಕ್ಕೂ ಸರಿಯಾದ ಪರಿಗಣನೆಯನ್ನು ನೀಡಲಾಗುತ್ತದೆ.

ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳ ಸಹಯೋಗದಲ್ಲಿ ಆಯುರ್ವೇದ ದಿನಾಚರಣೆ ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬ ವ್ಯಕ್ತಿಗೂ ಸಾಂಪ್ರದಾಯಿಕ ಔಷಧ ಪದ್ಧತಿಯ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಆಯುರ್ವೇದ ಸಂದೇಶವು ಎಲ್ಲಾ ಹಂತಗಳಿಗೂ ಹರಡುವಂತೆ ಜನರೊಂದಿಗೆ ಕೇಂದ್ರೀಕೃತವಾಗಿ ಸಂವಹನ ನಡೆಸಲು ಮತ್ತು ಸಂವೇದನಾಶೀಲಗೊಳಿಸಲು ಆರು ವಾರಗಳ ಅವಧಿಯ ಕಾರ್ಯಕ್ರಮವನ್ನು (12 ಸೆಪ್ಟೆಂಬರ್-23 ಅಕ್ಟೋಬರ್) ಪ್ರಾರಂಭಿಸಲಾಗಿದೆ.

ರಾಷ್ಟ್ರೀಯ ಆಯುರ್ವೇದ ದಿನದ ಲೋಗೋ: ರಾಷ್ಟ್ರೀಯ ಆಯುರ್ವೇದ ದಿನದ ಲೋಗೋ ಬಹಳ ಅರ್ಥಪೂರ್ಣವಾಗಿದೆ. ಮಧ್ಯಭಾಗದಲ್ಲಿರುವ ಧನ್ವಂತರಿಯ ಪ್ರತಿಮೆ ಔಷಧಿಯ ಅಧಿಪತಿಯನ್ನು ಪ್ರತಿನಿಧಿಸುತ್ತದೆ. ಲೋಗೋದಲ್ಲಿನ ಐದು ದಳಗಳು ಪಂಚ ಮಹಾಭೂತವನ್ನು ಸಂಕೇತಿಸುತ್ತವೆ ಮತ್ತು ಕೆಳಗಿನ ಮೂರು ವೃತ್ತಗಳು ಆಯುರ್ವೇದದ ಮೂಲಭೂತ ತತ್ವಗಳಾದ ವಾತ, ಪಿತ್ತ ಕಫಗಳನ್ನು ಸೂಚಿಸುತ್ತವೆ. ಅಂಶಗಳನ್ನು ಸುತ್ತುವರಿದ ಅಂಡಾಕಾರದ ಎಲೆಯು ಈ ಮೂಲಭೂತ ತತ್ವಗಳ ಆಧಾರದ ಮೇಲೆ ಪ್ರಕೃತಿಯ ಮೂಲಕ ಗುಣಪಡಿಸುವ ಸಾರವನ್ನು ಚಿತ್ರಿಸುತ್ತದೆ. ದೀಪಾವಳಿಯ ಶುಭ ಸಂದರ್ಭದಲ್ಲಿ ಆಯುರ್ವೇದದಲ್ಲಿ ಹೇಳಿದ ಆಹಾರ, ವಿಹಾರ ಪಾಲಿಸುತ್ತ ಆರೋಗ್ಯ ಕಾಪಾಡಿಕೊಳ್ಳೋಣ. ರೋಗ ಬಂದರೆ ಅಡ್ಡ ಪರಿಣಾಮವಿಲ್ಲದ ಆಯುರ್ವೇದ ಚಿಕಿತ್ಸೆ ಪಡೆಯೋಣ.

-ಡಾ. ವಿಜಯ್ ನೆಗಳೂರ್
ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು
ಸ್ವಸ್ಥವೃತ್ತ ವಿಭಾಗ,
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ, ಉದ್ಯಾವರ, ಉಡುಪಿ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!