Tuesday, September 17, 2024
Tuesday, September 17, 2024

ನಾವೇನು ಕಲಿಯುತ್ತಿದ್ದೇವೆ?

ನಾವೇನು ಕಲಿಯುತ್ತಿದ್ದೇವೆ?

Date:

ಶಿಕ್ಷಣವೆಂದು, ನಮಗೆ ತಿಳಿದಿರುವ ಹಾಗು ಇತರರು ತಿಳಿದಿರುವ ವಿಷಯವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತೇವೆ. ಇದೇ ಸರಿ ಇದೇ ದಾರಿ ಎನ್ನುವ ನಂಬಿಕೆ ಮೂಡಿಸುತ್ತೇವೆ. ಆ ಆಲೋಚನೆ ಮಾಡುವ ಕುತೂಹಲ ಮನಸ್ಸನ್ನು ಅರಳಲು ಬಿಡದೆ ಕಿಸುಕುತ್ತೇವೆ. ಮನಸ್ಸನ್ನು ವ್ಯಾಪಕವಾಗಿ ಹರಡಲು ಅವಕಾಶ ಕೊಡದೆ ಬಂದಿಖಾನೆಯಲ್ಲಿ ಬೀಗ ಹಾಕಿಬಿಡುತ್ತೇವೆ. ಇದನ್ನು ಶಿಕ್ಷಣವೆಂದು ಕರೆಯುತ್ತೇವೆ. ಇದು ನಿಜವಾದ ಶಿಕ್ಷಣವೇ? ನಮ್ಮ ಶಿಕ್ಷಣ ನಮ್ಮ ವೃತ್ತಿಯನ್ನು ಆಯ್ಕೆ ಮಾಡಲು ಮಾತ್ರ ಕಲಿಸುತ್ತದೆ ವಿನಹ ಬದುಕುವುದನ್ನು ಕಲಿಸುವುದಿಲ್ಲ. ವೃತ್ತಿಯೆ ಶಿಕ್ಷಣವೆಂದು ನಂಬಿಬಿಟ್ಟಿದ್ದೇವೆ ಹಣವೇ ಸರ್ವಸ್ವವಾಗಿ ಬಿಟ್ಟಿದೆ. ಪೈಪೋಟಿ ತಾರಕಕ್ಕೇರಿದೆ. ಇತರರನ್ನು ಹಿಂದೆ ಹಾಕುವ ಹುನ್ನಾರದಲ್ಲೇ ಇದ್ದೇವೆ. ಸುಖ ಸಂತೋಷವನ್ನು ಪಕ್ಕಕ್ಕೆ ಇಟ್ಟು ಕೋಟ್ಯಾಧಿಪತಿಯಾಗುವ ಆಸೆಯನ್ನು ಇಟ್ಟುಕೊಂಡಿದ್ದೇವೆ. ಹಾಸಿಗೆ ಇದ್ದಷ್ಟ ಕಾಲು ಚಾಚು ಎಂಬ ಗಾದೆ ಇಲ್ಲಿ ನೆನಪಿಗೆ ಬರುತ್ತದೆ. ಇತರರಿಗೆ ತೋರಿಸುವ ಆಡಂಬರವೇ ಜಾಸ್ತಿಯಾಗಿದೆ.

ಫೇಲ್ ಆದರೆ ಆತ್ಮಹತ್ಯೆ, ಅಪ್ಪ ಮೊಬೈಲ್ ಬಳಸಬೇಡ ಎಂದು ಹೇಳಿದ್ದಕ್ಕೆ ಆತ್ಮಹತ್ಯೆ, ಹುಡುಗಿ ಬಿಟ್ಟು ಹೋದಳು, ಸಂಪಾದಿಸಿದ ಹಣ ಲಾಸ್ ಆಯಿತು ಎಂದು ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡುವುದನ್ನು ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೇವೆ. ಆತ್ಮಹತ್ಯೆ ಸುಲಭದ ಕೆಲಸವಾಗಿ ಬಿಟ್ಟಿದೆ. ನಮ್ಮ ಶಿಕ್ಷಣ ಎಲ್ಲಿ ಹೋಗಿದೆ? ಏನು ಕಲಿಸುತ್ತಿದೆ? ಎಲ್ಲಿ ತಪ್ಪು ಆಗುತ್ತಿದೆ? ಚಿಕ್ಕ ಚಿಕ್ಕ ಕಾರಣಗಳಿಗೆ ಸುಸೈಡ್, ಮರ್ಡರ್ ಮಾಡುತ್ತಿದ್ದೇವೆ. ಜೀವಕ್ಕೆ ಬೆಲೆನೇ ಇಲ್ಲದಂತಾಗಿದೆ. ನಾವು ಓದಿ ಬುದ್ದಿವಂತರಾಗುವ ಬದಲು ಆಲೋಚನಾ ಶಕ್ತಿಯನ್ನು ಕಳೆಯುತ್ತಿದ್ದೇವೆ. ಯಾರು ಇದರ ಹೊಣೆ? ನಮ್ಮ ಸಮಾಜವೆ? ನಮ್ಮ ಶಿಕ್ಷಣವೇ? ನಮ್ಮ ಮನೆಯ ಪರಿಸರವೇ? ಇದನ್ನು ಹುಡುಕಬೇಕಾಗಿದೆ. ನಮ್ಮ ಆಲೋಚನಾ ಶಕ್ತಿಯನ್ನು ವೃದ್ಧಿಸಲು ಉಪಾಯ ಒಂದೇ, ಅದೆನೆಂದರೆ ಅದನ್ನು ಬಲವಂತ ಮಾಡದೆ ಇರುವುದು. ನಾವು ಹೇಗೆ ಇದ್ದೇವು ಹಾಗೆ ಸ್ವೀಕರಿಸುವುದು ನಮ್ಮ ಮಕ್ಕಳನ್ನು ಹಾಗೆ ಸ್ವೀಕರಿಸುವುದು. ಸುಂದರ ಬದುಕನ್ನು ಸೃಷ್ಟಿಸುವುದು. ಯಾವುದೇ ಕಟ್ಟುಪಾಡು ಇಲ್ಲದೆ ಇರುವುದು. ಸ್ವತಂತ್ರವಾಗಿ ಯೋಚಿಸಲು ಬಿಡುವುದು. ಸಮಸ್ಯೆಯನ್ನು ಬೇರೆ ಬೇರೆ ರೀತಿಯಲ್ಲಿ ಬಗೆಹರಿಸಲು ಕಲಿಸುವುದು. ಯಾವ ಪರಿಸ್ಥಿತಿಯಲ್ಲಿ ಹೇಗೆ ಏನು ಮಾಡಬೇಕೆಂಬುದು ತಿಳಿಸುವುದು.

ಹಿಂದಿನ ಕಾಲದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಇತ್ತು, ಅದರಲ್ಲಿ ಜ್ಞಾನದ ಜೊತೆ ಬದುಕುವ ಕಲೆಯನ್ನು ತಿಳಿಸುತ್ತಿದ್ದರು. ಇದನ್ನು ಸಂಪೂರ್ಣ ಶಿಕ್ಷಣವೆಂದು ಹೇಳಬಹುದು. ಆದರೆ ಈಗ ನಾವು ಬದುಕುವ ಪಾಠವನ್ನು ಮರೆತಿದ್ದೇವೆ. ಬರಿ ಹಣದ ಹಿಂದೆ ಬಿದ್ದಿದ್ದೇವೆ. ಯಾವಾಗ ನಾವು ಇತರರನ್ನು ಹೋಲಿಸುವುದು ಬಿಡುತ್ತೇವೆಯೋ, ಆಗ ನಮ್ಮ ಜೀವನವನ್ನು ಜೀವಿಸಲು ಕಲಿಯುತ್ತೇವೆ. ಈಗಿನ ಶಿಕ್ಷಣದಲ್ಲಿ ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾತ್ಸಗಳಂತ ಸಮಸ್ಯೆಗಳನ್ನು ಬಗೆಹರಿಸಲು ಕಲಿಸುತ್ತದೆ ಆದರೆ ಜೀವನದ ಸಮಸ್ಯೆಗಳನ್ನಲ್ಲ.

ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶಾರದಾ ರೆಸಿಡೆನ್ಸಿಯಲ್ ಶಾಲೆ: ಇಂಟರಾಕ್ಟ್ ಪದಗ್ರಹಣ

ಉಡುಪಿ, ಸೆ.16: ರೋಟರಿ ಉಡುಪಿ ಪ್ರಾಯೋಜಿತ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ ಉಡುಪಿ...

ಕಬಡ್ಡಿ: ಸಾಯ್ಬ್ರಕಟ್ಟೆ ಶಾಲಾ ತಂಡದ ಸಾಧನೆ

ಕೋಟ, ಸೆ.16: ನಿಟ್ಟೂರು ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ೧೪ರ ವಯೋಮಾನದ ಬಾಲಕರ...

ವಿಪ್ರ ಮಹಿಳಾ ವಲಯ ವಾರ್ಷಿಕೋತ್ಸವ

ಕೋಟ, ಸೆ.16: ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಇದರ 5ನೇ ವರ್ಷದ...

ವಿಶ್ವಕರ್ಮ ಯಜ್ಞ

ಕೋಟ, ಸೆ.16: ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ,...
error: Content is protected !!