Sunday, January 19, 2025
Sunday, January 19, 2025

ಜೀವನದಲ್ಲಿ ಸಕಾರಾತ್ಮಕ ಮನಸ್ಥಿತಿ ಅಳವಡಿಸಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್

ಜೀವನದಲ್ಲಿ ಸಕಾರಾತ್ಮಕ ಮನಸ್ಥಿತಿ ಅಳವಡಿಸಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್

Date:

ವೃದ್ಧ ತಾಯಿ, 45 ಹರೆಯದ ಮಗ, ಆತನ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದ ಕಾರು ಅಪಘಾತವಾಗಿ ಬಾಗಿಲು ಮುರಿದಿತ್ತು. ಆದರೆ ಯಾರಿಗೂ ಸ್ವಲ್ಪವೂ ಪೆಟ್ಟಾಗಲಿಲ್ಲ. ಹೀಗಾಯಿತೆಂದು, ತಾಯಿ ಈ ಕಾರು ನಮಗೆ ಅಪಶಕುನ ಅದನ್ನು ಮಾರಿಬಿಡು ಎಂದು ಹೇಳುತ್ತಾರೆ. ಆದರೆ ಮಗ, ಅಮ್ಮಈ ಹೊಸ ಕಾರಿನಿಂದ ಯಾರಿಗೂ ಪೆಟ್ಟಾಗಲಿಲ್ಲ, ಇದು ನನಗೆ ಸಿಕ್ಕಿದ್ದು ಪುಣ್ಯವೆಂದು ಉತ್ತರ ನೀಡುತ್ತಾನೆ. ಸೆಕೆಂಡ್ ರಾಂಕ್ ಬಂದ ಮಗುವನ್ನು ಅಭಿನಂದಿಸುವ ಬದಲು ಫಸ್ಟ್ ಏಕೆ ಬರಲಿಲ್ಲವೆಂದು ಹೇಳುವ ಪೋಷಕರು ಒಂದು ಕಡೆಯಾದರೆ, ನನ್ನ ಮುದ್ದು ಕಂದ ಎರಡನೇ ರಾಂಕ್ ಬಂದಿದ್ಯಾ ಎಂದು ಖುಷಿ ಪಡುವ ತಂದೆ-ತಾಯಿಯರು ಒಂದು ಕಡೆ. ನನಗೆ ಇಷ್ಟೇ ಸಿಕ್ಕಿದ್ದು ಎಂದು ನಿರಾಶ ಭಾವದಿಂದ ಹೇಳುವರು ಕೆಲವರು, ಅದೇ ಇನ್ನೊಬ್ಬರು ನನಗೆ ಎಷ್ಟು ಸಿಕ್ಕಿದೆ ಎಂದು ಸಂತೋಷಪಟ್ಟು ಕುಣಿಯುವವರು.

ಇಷ್ಟೆಲ್ಲಾ ಉದಾಹರಣೆ ಏಕೆ ಹೇಳುತ್ತಿದ್ದೇನೆ ಎಂದು ಈಗಾಗಲೇ ತಿಳಿದಿರಬಹುದು. ಜೀವನದಲ್ಲಿ ನಾವು ಎರಡು ರೀತಿಯ ವ್ಯಕ್ತಿಗಳನ್ನು ಕಾಣುತ್ತೇವೆ. ಎಲ್ಲದರಲ್ಲೂ ಬೆಳಕನ್ನು ನೋಡುವ ಪ್ರವೃತ್ತಿಯವರು ಒಂದಾದರೆ ಎಲ್ಲಾ ಕತ್ತಲೆಯೇ ಎಂದು ಸ್ವೀಕರಿಸುವವರು ಇನ್ನೊಂದು ವರ್ಗ. ಇವರನ್ನು ಧನಾತ್ಮಕ ಹಾಗೂ ಋಣಾತ್ಮಕ ವ್ಯಕ್ತಿಗಳೆಂದು ಕರೆಯುತ್ತಾರೆ.

ಧನಾತ್ಮಕ ವ್ಯಕ್ತಿ ಜೀವನದಲ್ಲಿ ಎಲ್ಲದರಲ್ಲೂ ಒಳ್ಳೆಯದನ್ನೇ ನೋಡುತ್ತಾನೆ, ಆದರೆ ಋಣಾತ್ಮಕ ವ್ಯಕ್ತಿ ತನಗೆ ಸಿಕ್ಕಿದ ಎಲ್ಲವನ್ನು ಬೇಸರದಿಂದ ಕಾಣುತ್ತಾನೆ. ಈ ವ್ಯಕ್ತಿಗಳನ್ನು ಹೇಗೆ ಬದಲಿಸುವುದು ಇಲ್ಲಿದೆ ಕೆಲವು ಟಿಪ್ಸ್.
•ಮೊದಲಿಗೆ ನಾವು ನಕಾರಾತ್ಮಕ ವ್ಯಕ್ತಿ ಎಂದು ಅರಿಯಬೇಕು. ಅರಿತಮೇಲೆ ನಕಾರಾತ್ಮಕ ಬಾವನೆಯನ್ನು ಹೊರಹಾಕಲು ಪ್ರಯತ್ನಿಸಬೇಕು. ಜೀವನದಲ್ಲಿ ಆಗುವುದೆಲ್ಲ ಒಳ್ಳೆಯದೇ ಎಂದು ಸ್ವೀಕರಿಸುವ ಮನಸ್ಸಿರಬೇಕು.
•ಬೆಳಿಗ್ಗೆ ಎದ್ದ ತಕ್ಷಣ ದೀರ್ಘ ಉಸಿರಾಡಿ ಜೀವನದಲ್ಲಿ ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಐದು ಸಲ ಹೇಳಿಕೊಳ್ಳಿ.
•ಐದು ನಿಮಿಷ ಕಣ್ಣು ಮುಚ್ಚಿ ನಿಮ್ಮ ಆಲೋಚನೆಗಳ ಬಗ್ಗೆ ಗಮನಹರಿಸಿ ಇದರಿಂದ ನಮಗೆ ನಮ್ಮ ಆಲೋಚನೆಗಳ ಬಗ್ಗೆ ಅರಿವು ಮೂಡುತ್ತದೆ.ನಾವು ಸಕಾರಾತ್ಮಕ ಅಥವಾ ನಕಾರಾತ್ಮಕ ವ್ಯಕ್ತಿಗಳಾ ಎಂದು ತಿಳಿಯುವುದು.
•ಬೆಳಿಗ್ಗೆಯಿಂದ ರಾತ್ರಿಯವರೆಗೆ ಎಷ್ಟು ಸರ್ತಿ ನಕಾರಾತ್ಮಕ ಆಲೋಚನೆಗಳು ಬಂದಿವೆ ಎಂದು ಬರೆದಿಟ್ಟುಕೊಳ್ಳಿ. ಒಂದು ವಾರದ ನಂತರ ನೀವು ಅದನ್ನು ಪರಿಶೀಲಿಸಿ. ಮುಂದಿನ ವಾರ ಇನ್ನಷ್ಟು ನಕಾರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ.
•ನಕಾರಾತ್ಮಕ ಆಲೋಚನೆ ಬಂದಾಗ ಆ ಆಲೋಚನೆ ಬಿಟ್ಟು ಬೇರೆ ಸಕಾರಾತ್ಮಕ ಆಲೋಚನೆಯ ಕಡೆಗೆ ಕೊಂಡೊಯ್ಯಿರಿ.
•ದಿನಾಲು ಪುಸ್ತಕದಲ್ಲಿ ನೀವು ಸಕಾರಾತ್ಮಕವಾಗಿ ಆಲೋಚನೆ ಮಾಡುತ್ತೀರಿ ಎಂದು ಬರೆಯಿರಿ.
•ಪ್ರತಿ ದಿನ ನಿಮಗೆ ಒಳ್ಳೆಯದಾದನ್ನು ಬರೆಯಿರಿ.
•ದೇವರಿಗೆ ಧನ್ಯವಾದಗಳು ಹಾಗೂ ನಿಮಗೆ ಸಹಾಯ ಮಾಡಿದ ಇತರರಿಗೆ ಧನ್ಯವಾದಗಳನ್ನು ಬರೆಯಿರಿ.
•ಒಳ್ಳೆಯ ಆಹಾರ ಸೇವಿಸಿ, ವ್ಯಾಯಾಮ ಮಾಡಿ, ಒಳ್ಳೆಯ ನಿದ್ದೆ ಮಾಡಿರಿ.
•ಎಲ್ಲದಕ್ಕೂ ದೂರುವುದನ್ನು ಬಿಡಿರಿ.
•ಜೀವನದಲ್ಲಿ ಮಾಡಬೇಕಾದ ಸಾಧನೆಯನ್ನು ಬರೆಯಿರಿ. ಅದನ್ನು ಗುರಿಯಾಗಿಟ್ಟುಕೊಂಡು ನನಸು ಮಾಡುವ ತಯಾರಿಯನ್ನು ಮಾಡಿರಿ.
•ಬೇರೆಯವರೊಂದಿಗೆ ಹೋಲಿಸಬೇಡಿ.
•ಬೇರೆಯವರು ನಿಮ್ಮ ಬಗ್ಗೆ ಏನು ಆಲೋಚನೆ ಮಾಡುತ್ತಾರೆ ಎಂಬ ಆಲೋಚನೆ ಬೇಡ.

ಜೀವನದಲ್ಲಿ ಸುಖ-ದುಃಖ ಒಟ್ಟಿಗೆ ಸ್ವೀಕರಿಸುವ ಮನೋಭಾವವಿರಲಿ. ನಾವು ನಕಾರಾತ್ಮಕವಾಗಿ ಆಲೋಚನೆ ಮಾಡುವುದು ಸರಿಯಲ್ಲ ಆದಷ್ಟು ನಾವು ನಕಾರಾತ್ಮಕ ಭಾವನೆಯಿಂದ ಮನಸ್ಸಿನಿಂದ ಹೊರಬಂದು ಸಕಾರಾತ್ಮಕವಾಗಿ ಬೆಳೆಯಲು ಕಲಿಯಬೇಕು. ಆದರೆ ನೆನಪಿಡಿ ನಕಾರಾತ್ಮಕ ಭಾವನೆಯು 100 % ದೂರ ಮಾಡಲು ಸಾಧ್ಯವಿಲ್ಲ. ಅದು ಖಂಡಿತವಾಗಿಯೂ ಬಂದೇ ಬರುತ್ತದೆ ಆದರೆ ಅದನ್ನು ಸ್ವೀಕರಿಸಿ ಮುಂದೆ ನಡೆಯಿರಿ. ಆದರೆ ಯಾವಾಗಲೂ ನಕಾರಾತ್ಮಕವಾಗಿ ಇರಬೇಡಿ ಅಷ್ಟೇ. ಎಲ್ಲದರಲ್ಲಿಯೂ ಒಳ್ಳೆಯದನ್ನು ನೋಡಿ. ಸಕಾರಾತ್ಮಕವಾಗಿ ಇರುವುದೆಂದರೆ ಯಾವಾಗಲೂ ಸಕಾರಾತ್ಮಕವಾಗಿ ಆಲೋಚನೆ ಮಾಡಿ ನಕಾರಾತ್ಮಕ ಆಲೋಚನೆ ಬಾರದೆ ಇರುವ ವಿಷಯವಲ್ಲ. ಆದರೆ ಆದಷ್ಟು ಸಕಾರಾತ್ಮಕವಾಗಿ ಇರಲು ಬಯಸುವುದು ಹಾಗೂ ನಡೆಯುವುದು.

-ಡಾ.ಹರ್ಷಾ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!