Home ಅಂಕಣ ಪರೀಕ್ಷೆಗೆ ಮುನ್ನ

ಪರೀಕ್ಷೆಗೆ ಮುನ್ನ

298
0

ತ್ತೀಚಿನ ದಿನಗಳಲ್ಲಿ ಪರೀಕ್ಷೆಯ ಭಯ ಮಕ್ಕಳಿಗಿಂತ ಹೆಚ್ಚು ಪೋಷಕರಿಗೆ ಹಾಗೂ ಶಾಲಾ-ಕಾಲೇಜುಗಳ ಉಪನ್ಯಾಸಕರಿಗೆ. ಅವರ ಮಾನಸಿಕ ಒತ್ತಡ ಅವರ ಮಕ್ಕಳ ಮೇಲೆ ಇರುವ ಅಪೇಕ್ಷೆ, ಮುಂದೆ ಏನು ಓದಬೇಕು, ಯಾವ ಸೀಟು ಯಾವ ಲೈನ್ಗೆ ಸೇರಬೇಕು ಎನ್ನುವ ಆತಂಕ ಇರುತ್ತದೆ. ಇದರಿಂದ ಮಕ್ಕಳ ಮೇಲೆ ಇನ್ನೂ ಹೆಚ್ಚಿನ ಒತ್ತಡ ಬೀಳುವುದು ಸಹಜ. ತಮ್ಮ ಮುಂದೆ ಇರುವ ಎಲ್ಲರನ್ನೂ ಒತ್ತಡದಿಂದಿರುವುದನ್ನು ನೋಡಿ ಆ ಮಕ್ಕಳು ಕೂಡ ಪರೀಕ್ಷೆ ಎಂದರೆ ಒತ್ತಡ ಎಂದು ನಂಬಿಬಿಡುತ್ತವೆ. ಅದು ಬೆಳೆದು ಪ್ರತಿ ಪರೀಕ್ಷೆ ಬರೆಯುವಾಗ ತನ್ನಿಂದ ತಾನೇ ಒತ್ತಡ ಉದ್ಭವಿಸುತ್ತದೆ. ಮುಂದೆ ಅದು ಪರೀಕ್ಷೆಯ ಭಯವಾಗಿ ತಿರುಗುತ್ತದೆ. ಈ ತರಹದ ವಾತಾವರಣ ಸೃಷ್ಟಿ ಮಾಡುವ ಅವಶ್ಯಕತೆ ಇದೆಯೇ? ಎನ್ನುವ ಪ್ರಶ್ನೆ. ಇದಕ್ಕೆ ಪ್ರತಿಯೊಬ್ಬರ ಉತ್ತರ ಬೇರೆ ಬೇರೆ ಇರುತ್ತದೆ. ಇದರ ಬಗ್ಗೆ ಚರ್ಚೆ ಎಂದೂ ಮುಗಿಯದ ಕಥೆ. ಅದು ನಿಮಗೆ ಬಿಟ್ಟದ್ದು. ನಾನು ಹೇಳಬೇಕಾದದ್ದು ಪರೀಕ್ಷೆಗೆ ಮುನ್ನ ಮಕ್ಕಳಿಗೆ ಪೋಷಕರು ಹೇಳಬೇಕಾದ ಕೆಲವು ಅಂಶಗಳು.

ಮೊದಲಿಗೆ, ಮಕ್ಕಳಿಗೆ ಅಂಕವೇ ಜೀವನದಲ್ಲಿ ಮುಖ್ಯವಲ್ಲ. ಸೀಟ್ ಸಿಗದೇ ಇದ್ದಿದ್ದರೆ ಬೇರೆ ಏನಾದರೂ ಕಲಿತು ಏನಾದರೂ ಕೆಲಸ ಮಾಡಬಹುದು. ಜಗತ್ತು ತುಂಬಾ ದೊಡ್ಡದಿದೆ. ಈ ಯುಗದಲ್ಲಿ ಏನು ಬೇಕಾದರೂ ಮಾಡಿ ಬದುಕಬಹುದು. ನಿನ್ನ ಪ್ರಯತ್ನ ನೀನು ಮಾಡು ಸಮಯವನ್ನು ವ್ಯರ್ಥ ಮಾಡದೆ ನಿನ್ನ ಮೇಲೆ, ಭಗವಂತನ ಮೇಲೆ ನಂಬಿಕೆ ಇಟ್ಟು ಓದು. ಓದುವಾಗ ಪರೀಕ್ಷೆಗೋಸ್ಕರ ಓದಬೇಡ, ಅದನ್ನು ಅರ್ಥ ಮಾಡಿಕೊಂಡು ಓದು. ಆಗ ನೆನಪಿನಲ್ಲಿ ಉಳಿಯುತ್ತದೆ ಎಂದು ಮಕ್ಕಳಿಗೆ ತಿಳಿ ಹೇಳಿ.

ನೀನು ಎಷ್ಟು ಅಂಕ ಗಳಿಸಿದರು ನನ್ನ ಪ್ರೀತಿ ಯಾವತ್ತು ಕಮ್ಮಿಯಾಗುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿ. ಇದು ಬಹಳ ಮುಖ್ಯ. ಮಕ್ಕಳಿಗೆ ನಿಮ್ಮ ಪ್ರೀತಿ, ತಾನು ಎಷ್ಟೇ ಮಾರ್ಕ್ಸ್ ತಗೊಂಡರೂ ನನಗೆ ಪ್ರೀತಿಸುತ್ತಾರೆ ಎಂಬ ವಿಶ್ವಾಸ ಮೂಡಲಿ. ಅಪ್ಪ ಅಮ್ಮನ ಪ್ರೀತಿ ನನ್ನ ಅಂಕದ ಮೇಲೆ ಅಲ್ಲ ಎನ್ನುವ ವಿಶ್ವಾಸ ಬೆಳೆಯಲಿ. ಆಗ ಮಕ್ಕಳು ಶ್ರದ್ಧೆಯಿಂದ ಒತ್ತಡವಿಲ್ಲದೆ ಓದುತ್ತಾರೆ.

ಪರೀಕ್ಷೆ ಎಂದರೆ ಭಯ ಪಡುವ ಅವಶ್ಯಕತೆ ಇಲ್ಲ. ನಿನ್ನ ಅಂಕ ನಿನ್ನ ಬುದ್ಧಿಶಕ್ತಿಯ ಮಾಪನ ಯಂತ್ರವಲ್ಲ. ಎಲ್ಲ ಗೊತ್ತಿದ್ದೂ ಭಯದಿಂದ ಕೆಲವು ಉತ್ತರಗಳನ್ನು ಮರೆಯುವುದುಂಟು ಅಲ್ಲವೇ? ಅದರ ಅರ್ಥ ಆ ಮಗು ಬುದ್ಧಿವಂತ ಅಲ್ಲ ಎಂದು ಪರಿಗಣಿಸಲು ಆಗುವುದಿಲ್ಲ.

ಮುಂದೆ ನೀನು ಏನು ಕಲಿತರೂ ನಿನಗೆ ಸಪೋರ್ಟ್ ಮಾಡುತ್ತೇವೆ ಎನ್ನುವ ಭರವಸೆ ನೀಡಿ ಅವನ ಇಚ್ಛೆಗೆ ವಿರುದ್ಧ ಹೋಗಬೇಡಿ.

ಕೊನೆಯದಾಗಿ ಒಳ್ಳೆಯ ಆಹಾರ ನಿದ್ದೆ ವ್ಯಾಯಾಮ ಮಾಡಲು ಪ್ರೇರೇಪಿಸಿ. ಧ್ಯಾನ ಬಹಳ ಮುಖ್ಯ. ಪ್ರಾಣಾಯಾಮ, ಕೆಲವು ಯೋಗಾಸನಗಳನ್ನು ಮಾಡಿದರೆ ಒಳ್ಳೆಯದು. ಹೊರಗೆ ಸ್ವಲ್ಪ ಹೊತ್ತು ಆಟವಾಡಲು ಬಿಡಿ. ಆಗ ಅವರ ಮನಸ್ಸು ಉಲ್ಲಾಸದಿಂದಿರುತ್ತದೆ.

ಎಲ್ಲರನ್ನೂ ಗೌರವಿಸಿ ಪ್ರೀತಿಸಲು ಹೇಳಿ. ಮಾನವೀಯತೆಗೆ ಪ್ರಾಮುಖ್ಯತೆ ನೀಡಿ. ಒಳ್ಳೆಯ ಅಂಕ ಗಳಿಸಿ, ಒಳ್ಳೆಯ ಮಾನವನಾಗದಿದ್ದರೆ ಏನು ಪ್ರಯೋಜನ?

-ಡಾ. ಹರ್ಷಾ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.