Tuesday, February 25, 2025
Tuesday, February 25, 2025

2024 ರಲ್ಲಿ ದೇಶಕ್ಕಿಲ್ಲ ಗ್ರಹಣ

2024 ರಲ್ಲಿ ದೇಶಕ್ಕಿಲ್ಲ ಗ್ರಹಣ

Date:

ಪ್ರತೀ ಆರು ತಿಂಗಳಿಗೊಮ್ಮೆ ಸೂರ್ಯ ಹಾಗೂ ಚಂದ್ರನ ಗ್ರಹಣಗಳು ಸಂಭವಿಸುತ್ತವೆ. ಈ ವರ್ಷವೂ ಮೂರು ಗ್ರಹಣಗಳು ಸಂಭವಿಸಲಿವೆ. ಆದರೆ ಅವು ಮೂರೂ ಭಾರತದಲ್ಲಿ ಗೋಚರಿಸುವುದಿಲ್ಲ. ಅದೆಲ್ಲವೂ ಅಮೇರಿಕನ್ನರಿಗೆ. ಅವರ ಲಕ್, ಅವರಿಗೆ ಅಪರೂಪದ ಎರಡು ಸೂರ್ಯಗ್ರಹಣಗಳು ಹಾಗೂ ಒಂದು ಚಂದ್ರಗ್ರಹಣ ಗೋಚರಿಸಲಿವೆ.

ಏಪ್ರಿಲ್ 8 ಕ್ಕೆ ಖಗ್ರಾಸ ಸೂರ್ಯಗ್ರಹಣ, ಅಕ್ಟೋಬರ್ 2 ಕ್ಕೆ ಕಂಕಣ ಸೂರ್ಯಗ್ರಹಣ, ಸೆಪ್ಟೆಂಬರ್‌ 17 ಕ್ಕೆ ಪಾರ್ಶ್ವ ಚಂದ್ರಗ್ರಹಣ. ಇವೆಲ್ಲವೂ ಅಮೇರಿಕಾ ಹಾಗೂ ಆಸು ಪಾಸು ದೇಶಗಳಿಗೆ ಮಾತ್ರ.

ನಾಲ್ಕು ಸೂಪರ್ ಮೂನ್: ಈ ವರ್ಷ ನಾಲ್ಕು ಸೂಪರ್ ಮೂನ್ ಗಳು ಕಾಣಲು ಸಿಗಲಿವೆ. ಆಗಸ್ಟ್ 19, ಸೆಪ್ಟೆಂಬರ್ 18, ಅಕ್ಟೋಬರ್ 17, ಹಾಗೂ ನವೆಂಬರ್ 15. 28 ದಿನಗಳಿಗೊಮ್ಮೆ ದೀರ್ಘವೃತ್ತಾಕಾರದಲ್ಲಿ ಭೂಮಿಯನ್ನು ಸುತ್ತುವ ಚಂದ್ರ ಒಮ್ಮೆ ಎಪೊಜಿ (ಸಮೀಪದ ದೂರ) ಬರುವುದಿದೆ. ಆ ದಿನ ಹುಣ್ಣಿಮೆಯಾದರೆ ಚಂದ್ರ ಮಾಮೂಲಿಗಿಂತ ಸುಮಾರು 14 ಅಂಶ ದೊಡ್ಡದಾಗಿ ಕಂಡು 24 ಅಂಶ ಹುಣ್ಣಿಮೆ ಪ್ರಭೆ ಹೆಚ್ಚು ಇದನ್ನು ಸೂಪರ್ ಮೂನ್ ಎನ್ನುವರು. ಚಂದ್ರ ಭೂಮಿಯ ಸರಾಸರಿ ದೂರ ಸುಮಾರು 3 ಲಕ್ಷದ 84 ಸಾವಿರದ 400 ಕಿಮೀ. ಆದರೆ ಈ ಸೂಪರ್ ಮೂನ್ ಗಳಲ್ಲಿ ಸುಮಾರು 3 ಲಕ್ಷದ 56 ಸಾವಿರ ಕಿಮೀ ಆಸುಪಾಸು ಬರುವುದಿದೆ. ಅಂದರೆ ಸುಮಾರು 28 ಸಾವಿರ ಕಿಮೀ ಭೂಮಿಗೆ ಚಂದ್ರ ಹತ್ತಿರ ಬರುತ್ತದೆ. ಹಾಗಾಗಿ ಸೂಪರ್ ಮೂನ್ಗಳಲ್ಲಿ ಚಂದ್ರನ ಪ್ರಭೆ ಹೆಚ್ಚು. ಈ ವರ್ಷ ಆಗಸ್ಟ್ 19 ರಂದು 3,61,970 ಕಿಮೀ, ಸೆಪ್ಟೆಂಬರ್ 18 ರಂದು 3,57,486 ಕಿಮೀ, ಅಕ್ಟೋಬರ್ 17 ರಂದು 3,57,364 ಕಿಮೀ ಹಾಗೂ ನವೆಂಬರ್ 15 ರಂದು 3,61,867 ಕಿಮೀ ಗಳು.

– ಡಾ. ಎ.ಪಿ. ಭಟ್, ಉಡುಪಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!