Monday, January 20, 2025
Monday, January 20, 2025

ಜನಮನ ಸೂರೆಗೊಂಡ ‘ಮರಣಿ ಮಾಂಟೆ’

ಜನಮನ ಸೂರೆಗೊಂಡ ‘ಮರಣಿ ಮಾಂಟೆ’

Date:

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ಇಲ್ಲಿನ ಪದವಿಪೂರ್ವ ತರಗತಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಮರಣಿ ಮಾಂಟೆ ‘ನಾಟಕ ತನ್ನ ಭಿನ್ನತೆಯಿಂದ ಜನಮನ ಸೂರೆಗೊಂಡಿತು.

ತನ್ನ ಶೀರ್ಷಿಕೆಯಿಂದಲೇ ಬಹಳಷ್ಟು ಕುತೂಹಲವನ್ನು ಮೂಡಿಸಿದ್ದ, ಸಾವಿನ ದೇವತೆಯೊಂದಿಗೆ ಹೋರಾಟಕ್ಕಿಳಿವ ವೈದ್ಯನೊಬ್ಬನ ಕಥಾನಕವನ್ನು ಪ್ರಮುಖ ವಸ್ತುವಾಗಿ ಹೊಂದಿದ ಮಾಮೂಲಿ ನಾಟಕ ಗಳಿಗಿಂತ ತೀರಾ ಭಿನ್ನ ನೆಲೆಯಲ್ಲಿ ಥಿಯೇಟರ್ ನಾಟಕಗಳನ್ನು ನೆನಪಿಸುವಂತೆ ಮೂಡಿಬಂದ ಈ ನಾಟಕವನ್ನು ಇಲ್ಲಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಲೇಖಕ ನರೇಂದ್ರ ಎಸ್ ಗಂಗೊಳ್ಳಿ ರಚಿಸಿ ನಿರ್ದೇಶಿಸಿದ್ದರು.

50 ನಿಮಿಷಗಳ ಅವಧಿಯ ಈ ನಾಟಕದದ್ದಕ್ಕೂ ಬಳಸಿದ ಪರಿಕರಗಳು, ವೇಷಭೂಷಣಗಳು, ರಂಗ ಸಜ್ಜಿಕೆ ವಿಶೇಷವಾಗಿ ಗಮನ ಸೆಳೆಯಿತು. ಮರಣಿ ಪಾತ್ರದಲ್ಲಿ ಶ್ರಾವ್ಯ ಎನ್ ಪಾತ್ರವನ್ನೇ ಆವಾಹಿಸಿಕೊಂಡಂತೆ ಅಬ್ಬರದ ಅಭಿನಯವನ್ನು ನೀಡಿ ಜನ ಮೆಚ್ಚುಗೆ ಗಳಿಸಿದರು. ಸಾವಿನ ದಾಸಿ ಮುದುಕಿಯ ಪಾತ್ರದಲ್ಲಿ ವಿಶೇಷ ಆಂಗಿಕ ಅಭಿನಯದಿಂದ ಅಮೀಕ್ಷಾ ಡಿ ನಾಯ್ಕ್ ಗಮನ ಸೆಳೆದರೆ, ಚಮರಿಯ ಪಾತ್ರದಲ್ಲಿ ತನ್ನ ಸ್ಪಷ್ಟವಾದ ಮಾತುಗಾರಿಕೆಯಿಂದ ನಿಶಾ ಬಿ ಪೂಜಾರಿ ಪ್ರೇಕ್ಷಕರನ್ನು ರಂಜಿಸಿದರು. ವೈದ್ಯ ಜೀವಕನ ಪಾತ್ರದಲ್ಲಿ ಹೃತಿಕಾ ಮತ್ತು ರಾಜಕುಮಾರಿ ಪಯಸ್ವಿನಿ ಪಾತ್ರದಲ್ಲಿ ದಿಯಾ ಪಾತ್ರಕ್ಕೆ ಜೀವ ತುಂಬಿದರು.

ಉಳಿದಂತೆ ಲಾಲಿತ್ಯನಾಗಿ ಆಕಾಂಕ್ಷ, ಬಡ ಹೆಂಗಸಾಗಿ ಸಮೀಕ್ಷಾ, ಮಗನಾಗಿ ಸಂಜನಾ, ತರಂಗಿಣಿಯಾಗಿ ರಿಶೆಲ್ ಡಿ ಅಲ್ಮೇಡ, ಶಿವನಾಗಿ ರಚನಾ, ಡಂಗುರದವರಾಗಿ ನಾಗಶ್ರೀ ಮತ್ತು ಶ್ರೀನಿಧಿ, ರಾಜಭಟರಾಗಿ ತ್ರಿಷಾ, ದೀಕ್ಷಾ, ಶ್ರೀನಿಧಿ, ಶಿಲ್ಪ ಪ್ರಿಯ, ತೇಜಸ್ವಿನಿ, ಶ್ರೀಶ್ರಾವ್ಯ, ಮುರಿಗಳಾಗಿ ರಿತೇಶ್ ಎಂ ಜಿ, ರಿತೇಶ್ ತೋಳಾರ್, ಅಮೃತ್, ವಿನಯ್,ಸಂಪತ್, ರಿತೇಶ್, ಶರತ್ ವಿಶ್ವಾಸ್, ಪ್ರಥ್ವಿಕ್ ಮತ್ತು ವೀರೇಂದ್ರ ಅಭಿನಯಿಸಿದ್ದರು. ಆಂಗ್ಲ ಭಾಷೆ ಉಪನ್ಯಾಸಕರಾದ ಥಾಮಸ್ ಪಿ. ಎ., ವಿದ್ಯಾರ್ಥಿಗಳಾದ ಸುಜನ್ ಮತ್ತು ಪ್ರೇಮ್ ಹಿನ್ನೆಲೆ ಸಂಗೀತ ನೀಡಿದ್ದರು. ಹಿನ್ನೆಲೆ ಗಾಯನದಲ್ಲಿ ಶ್ರೇಯಾ ಖಾರ್ವಿ ಸಹಕರಿಸಿದರು.

ಮರಣಿ ಮತ್ತು ಶಿವನ ಪ್ರವೇಶ ಸನ್ನಿವೇಶಗಳು, ಆರಂಭದಲ್ಲಿ ಮುರಿಗಳ ನೃತ್ಯ, ಜೀವಕನ ಕನಸಿನಲ್ಲಿ ಕಾಣಿಸಿಕೊಳ್ಳುವ ಪ್ರೇತ, ಲಾಲಿತ್ಯ ತರಂಗಿಣಿಯ ಸಾವಿನ ಸನ್ನಿವೇಶಗಳನ್ನು ಕಟ್ಟಿಕೊಟ್ಟ ರೀತಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತ್ತು. ಯಾವ ವೈದ್ಯನೂ ಸಾವನ್ನು ಗೆಲ್ಲಲು ಸಾಧ್ಯವಿಲ್ಲ, ಅಂತರಂಗದ ಗುಟ್ಟು ತಿಳಿಯಬೇಕಾದರೆ ಅಂತಪುರವನ್ನು ಹೊಕ್ಕು ನೋಡಬೇಕು ಎನ್ನುವಂತಹ ಸಂಭಾಷಣೆಗಳು ಗಮನ ಸೆಳೆದವು.

ಕೊನೆಯಲ್ಲಿ ಮರಣಿಯ ಲೋಕವನ್ನು ಪ್ರದರ್ಶಿಸಿದ ರೀತಿ ಮನಸಳೆಯುವಂತಿತ್ತು. ಕಿರು ಸನ್ನಿವೇಶಗಳು, ಅನೂಹ್ಯ ತಿರುವುಗಳು, ನಾಟಕದ ಅಂದವನ್ನು ಹೆಚ್ಚಿಸಿದವು. ಅರ್ಥಪೂರ್ಣ ಕಥೆ ನಾಟಕಕ್ಕೆ ಮೌಲ್ಯ ತಂದಿತ್ತು. ಒಟ್ಟಾರೆಯಾಗಿ ಎಲ್ಲಾ ಇತಿಮಿತಿಗಳ ನಡುವೆ ಇಂಥದ್ದೊಂದು ರಮಣೀಯ ನಾಟಕವನ್ನು ಅಭಿನಯಿಸಿ ಗ್ರಾಮೀಣ ಭಾಗದ ಮಕ್ಕಳು ಕೂಡ ಇಂತಹ ನಾಟಕಗಳನ್ನು ಮಾಡಬಲ್ಲರು ಎಂದು ತೋರಿಸಿಕೊಟ್ಟ ಹೆಮ್ಮೆ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳದ್ದು.

ನಾಟಕದ ಬಹುತೇಕ ವೇಷ ಭೂಷಣಗಳನ್ನು ರಂಗಸಜ್ಜಿಕೆಗಳನ್ನು ವಿದ್ಯಾರ್ಥಿಗಳು ಸ್ವಯಂ ಪ್ರಯತ್ನದಿಂದ ರೂಪಿಸಿದ್ದು ವಿಶೇಷವಾಗಿತ್ತು. 30 ವಿದ್ಯಾರ್ಥಿಗಳ ತಂಡವನ್ನು ಎರಡು ವಾರಗಳ ಅವಧಿಯಲ್ಲಿ ತರಬೇತುಗೊಳಿಸಿ ನಾಟಕವನ್ನು ವೇದಿಕೆಯ ಮೇಲೆ ಅಚ್ಚುಕಟ್ಟಾಗಿ ತಂದು ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಿದ ನಿರ್ದೇಶಕ ನರೇಂದ್ರ ಎಸ್ ಗಂಗೊಳ್ಳಿ ಅವರ ಪರಿಶ್ರಮ ಅಭಿನಂದನೀಯ.

-ಸಂ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!