ಉಡುಪಿ, ಜ.22: ಗೋವುಗಳ ಮೇಲೆ ಭೀಭತ್ಸ ಹಿಂಸೆ, ವಧೆ, ಆಕ್ರಮಣಗಳು ಸನಾತನ ಧರ್ಮೀಯ ಶ್ರದ್ಧಾವಂತರನ್ನು ತೀವ್ರ ಸಂಕಟಕ್ಕೆ ಈಡು ಮಾಡಿದ್ದು ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಗವಂತನಿಗೆ ಶರಣಾಗಬೇಕು ಎಂದು ಕರೆ ಕೊಟ್ಟಿರುವ ಪೇಜಾವರ ಶ್ರೀಗಳ ಅಭಿಮತದಂತೆ ಪರ್ಯಾಯ ಶ್ರೀ ಪುತ್ತಿಗೆ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಜನವರಿ 23 ರಿಂದ ಒಂದು ವಾರಗಳ ಕಾಲ ವಿಶೇಷ ವಿಷ್ಣು ಸಹಸ್ರನಾಮ ಪಾರಾಯಣ, ಶಿವಪಂಚಾಕ್ಷರಿ ಜಪ ಮತ್ತು ತತ್ಸಂಬಂಧಿ ಹೋಮಗಳು, ಮಾತೆಯರಿಂದ ಗೀತಾ ಪಾರಾಯಣ ನಡೆಯಲಿವೆ. ಪರ್ಯಾಯ ಪುತ್ತಿಗೆ ಉಭಯ ಶ್ರೀಪಾದರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಗೋವುಗಳ ಮೇಲೆ ಹಿಂಸೆ- ಶ್ರೀ ಕೃಷ್ಣ ಮಠದಲ್ಲಿ ಒಂದು ವಾರಗಳ ಕಾಲ ವಿಷ್ಣು ಸಹಸ್ರನಾಮ ಪಾರಾಯಣ, ಶಿವಪಂಚಾಕ್ಷರಿ ಜಪ, ಗೀತಾ ಪಾರಾಯಣ
ಗೋವುಗಳ ಮೇಲೆ ಹಿಂಸೆ- ಶ್ರೀ ಕೃಷ್ಣ ಮಠದಲ್ಲಿ ಒಂದು ವಾರಗಳ ಕಾಲ ವಿಷ್ಣು ಸಹಸ್ರನಾಮ ಪಾರಾಯಣ, ಶಿವಪಂಚಾಕ್ಷರಿ ಜಪ, ಗೀತಾ ಪಾರಾಯಣ
Date: