ಮಣಿಪಾಲ, ಜ.21: ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ, ನುಡಿ ಘಟಕ ಮಣಿಪಾಲ ಸಿವಿಲ್ ಇಂಜಿನಿಯರಿಂಗ್ ವಿಭಾಗ ಸಹಯೋಗದೊಂದಿಗೆ ಸಂಚಾರ ಜಾಗೃತಿ ಸಪ್ತಾಹವನ್ನು ಯಶಸ್ವಿಯಾಗಿ ನಡೆಯಿತು. ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಮನೋಹರ್ ಹೆಚ್ ಕೆ ಉದ್ಘಾಟಿಸಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಮತ್ತು ಸಮುದಾಯಕ್ಕೆ ಟ್ರಾಫಿಕ್ ಸಿಗ್ನಲ್ ಜಾಗೃತಿ, ಮದ್ಯಪಾನ ಮತ್ತು ಚಾಲನೆಯ ಅಪಾಯಗಳು, ಜವಾಬ್ದಾರಿಯುತ ಪಾರ್ಕಿಂಗ್ ಅಭ್ಯಾಸಗಳು, ಸಂಚಾರ ಅಡಚಣೆಗಳನ್ನು ಕಡಿಮೆ ಗೊಳಿಸುವುದು, ಟ್ರಾಫಿಕ್ ಸಿಗ್ನಲ್ ಜಾಗೃತಿ ಶಿಕ್ಷಣ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎನ್‌ಎಸ್‌ಎಸ್ ತಂಡದ ನಾಯಕರಾದ ವಿಜಯಾಂಶ್ ಚೌರಾಸಿಯಾ ವಂದಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಬಾಲಕೃಷ್ಣ ಮದ್ದೋಡಿ, ಡಾ.ಲಕ್ಷ್ಮಣ ರಾವ್, ಡಾ. ಪೂರ್ಣಿಮಾ ಭಾಗವತ, ಡಾ. ಹರ್ಷಿಣಿ ದಾಸರಿ, ಡಾ. ಮಹಾಶ್ವೇತಾ ಮೇಗಾರ್, ಘಟಕದ ಮುಖ್ಯಸ್ಥರಾದ ಅಕ್ಷತ ಕುರಾನಾ, ಸಂಜನಾ ಮತ್ತು ಕಣವ್ ಸಚ್ದೇವ ಮುಂತಾದವರು ಭಾಗವಹಿಸಿದ್ದರು.