Saturday, January 18, 2025
Saturday, January 18, 2025

ಗಾನ ಸಂಭ್ರಮ 2025 ಸಂಪನ್ನ

ಗಾನ ಸಂಭ್ರಮ 2025 ಸಂಪನ್ನ

Date:

ಕುಂದಾಪುರ, ಜ.18: ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ ಗುಜ್ಜಾಡಿಯ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಅಂತರ್ ಜಿಲ್ಲಾ ಮಟ್ಟದ ಕರೋಕೆ ಟ್ರ್ಯಾಕ್ ಗೀತ ಗಾಯನ ಸ್ಪರ್ಧೆ ಗಾನ ಸಂಭ್ರಮ 2025 ರ ಫೈನಲ್ ಸ್ಪರ್ಧೆ ಸುವರ್ಣ ಸಂಗಮ ವೇದಿಕೆಯಲ್ಲಿ ನಡೆಯಿತು. ಸರಿಗಮಪ ಖ್ಯಾತಿಯ ಗಾಯಕರಾದ ಕಂಬದ ರಂಗಯ್ಯ, ಮತ್ತು ಪ್ರಥ್ವಿ ಭಟ್ ಹಾಗು ಸ್ಟಾರ್ ಸಿಂಗರ್ ಖ್ಯಾತಿಯ ವಿನುಷ್ ಭಾರದ್ವಾಜ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಸರಿಗಮಪ ಖ್ಯಾತಿಯ ಗಾಯಕರಾದ ಶಿವಾನಿ ಮತ್ತು ರಜತ್ ಮಯ್ಯ ಹಾಗು ಎದೆ ತುಂಬಿ ಹಾಡಿದೆನು ಖ್ಯಾತಿಯ ಪಲ್ಲವಿ ಪ್ರಭು ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಈ ಸಂದರ್ಭದಲ್ಲಿ ಖ್ಯಾತ ನಿರೂಪಕ, ಗಾಯಕ ನವೀನ್ ಚಂದ್ರ ಕೊಪ್ಪ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಗಾನ ಸಂಭ್ರಮ ಸ್ಪರ್ಧೆಯಲ್ಲಿ ಮೋಹನ್ ಸಾಗರ್ ಪ್ರಥಮ ಬಹುಮಾನವನ್ನು ಪಡೆದರೆ, ರಾಜೇಶ್ ಪ್ರಭು ಹೆಬ್ರಿ ದ್ವಿತೀಯ ಸ್ಥಾನವನ್ನು ಮತ್ತು ಅಶ್ವಿಜ್ ಸುಳ್ಯ ತೃತೀಯ ಸ್ಥಾನ ಸ್ಥಾನವನ್ನು ಪಡೆದರು. ವೈಷ್ಣವಿ ಇವೆಂಟ್ಸ್ ಮಾಲೀಕರಾದ ಗೋಪಾಲ್ ಚಂದನ್ ಸ್ವಾಗತಿಸಿದರು ಶ್ರೀ ಚನ್ನಬಸವೇಶ್ವರ ಯುವಕ ಮಂಡಲದ ಅಧ್ಯಕ್ಷ ಶ್ರೀಧರ್ ಎನ್ ಶುಭ ಹಾರೈಸಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ, ನ್ಯಾಯವಾದಿ ರವಿಕಿರಣ ಮುರುಡೇಶ್ವರ, ಆಯುರ್ವೇದ ವೈದ್ಯೆ ಡಾ. ವೀಣಾ ಕಾರಂತ್, ಎಸ್ ಪಿ ಮ್ಯೂಸಿಕಲ್ ನ ರಾಜೇಶ್, ನಾರಾಯಣ ಕೆ ಗುಜ್ಜಾಡಿ, ನಿತೇಶ್, ರಘುರಾಮ್ ಮೊದಲಾದವರು ಉಪಸ್ಥಿತರಿದ್ದರು. ಪ್ರವೀಣ್ ಪೂಜಾರಿ ಮತ್ತು ಪ್ರಶಾಂತ್ ಪೂಜಾರಿ ಸಹಕರಿಸಿದರು. ವಿ. ಜೆ ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಭಟ್ಕಳ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!