Saturday, January 18, 2025
Saturday, January 18, 2025

ಸಾಲಿಗ್ರಾಮ: ಯುವ ವೇದಿಕೆ 8ನೇ ವಾರ್ಷಿಕೋತ್ಸವ

ಸಾಲಿಗ್ರಾಮ: ಯುವ ವೇದಿಕೆ 8ನೇ ವಾರ್ಷಿಕೋತ್ಸವ

Date:

ಕೋಟ, ಜ.17: ಯುವ ವೇದಿಕೆಯ ಸಮಾಜಮುಖಿ ಕಾರ್ಯಗಳು ಅತ್ಯಂತ ಪ್ರಶಂಸನೀಯ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ ಎಸ್ ಕಾರಂತ ಹೇಳಿದರು. ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಇದರ ಆಶ್ರಯದಲ್ಲಿ ಎಂಟನೇ ವರ್ಷದ ವಾರ್ಷಿಕೋತ್ಸವ ಅನ್ವೇಷಣೆ ಶೀರ್ಷಿಕೆಯಡಿ ನಡೆದ ಸಾಂಸ್ಕೃತಿಕ ಪರ್ವ, ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಶೇಖರ್ ಆಸ್ಪತ್ರೆಯ ನಿರ್ದೇಶಕ ಡಾ.ಪಿ ವಿಷ್ಣುಮೂರ್ತಿ ಮಯ್ಯ ಶುಭ ಹಾರೈಸಿದರು. ಬೆಂಗಳೂರಿನ ಪ್ರಸಿದ್ಧ ಹೃದ್ರೋಗ ತಜ್ಞೆ ಡಾ. ಪ್ರಭಾವತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ತಾರಾನಾಥ ಹೊಳ್ಳ, ಸಮಾಜಸೇವಕ ಶ್ರೀಪತಿ ಅಧಿಕಾರಿ, ಶೌರ್ಯ ಪ್ರಶಸ್ತಿ ವಿಜೇತ ಧೀರಜ್ ಐತಾಳ್ ಇವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಗೋವಿಂದ ನಕ್ಷತ್ರಿ ಪುತ್ರ ಶಿಕ್ಷಕ ಡಾ. ಬಾಲಕೃಷ್ಣ ನಕ್ಷತ್ರಿ ಅಂಬಾಗಿಲುಕೆರೆ, ದಿ.ಜಯಂತಿ ಮಧ್ಯಸ್ಥ ಸ್ಮರಣಾರ್ಥ ಸದಾಶಿವ ಮಧ್ಯಸ್ಥ ಇವರು ಕೊಡಮಾಡಿದ ವಿದ್ಯಾನಿಧಿಯನ್ನು ಸಾಧಕ ವಿದ್ಯಾರ್ಥಿಗಳಿಗೆ ನೀಡಲಾಯಿತು. ಕೂಟಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ್ ಹಂದೆ ಶುಭಾಶಂಸನೆಗೈದರು. ಕರ್ನಾಟಕ ರಾಜ್ಯ ನೌರಕರ ಸಂಘಕ್ಕೆ ಆಯ್ಕೆಯಾದ ಪಿ.ವೈ ಕೃಷ್ಣಪ್ರಸಾದ ಹೇರ್ಳೆ, ಕೂಟಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷರಾಗಿ ಅಯ್ಕೆಯಾದ ಸತೀಶ್ ಹಂದೆ, ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ, ವೈದ್ಯಕೀಯ ಕ್ಷೇತ್ರದ ಸಾಧಕ ಡಾ.ಸ್ವಸ್ತಿಕ್ ಉಪಾಧ್ಯಾಯ ಇವರುಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಅಘೋರೇಶ್ವರ ದೇಗುಲ ಕಾರ್ತಟ್ಟು ಅಧ್ಯಕ್ಷ ಚಂದ್ರಶೇಖರ್ ಕಾರಂತ, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಸುರೇಶ ತುಂಗ, ಕೂಟಮಹಾಜಗತ್ತು ಅಂಗಸಂಸ್ಥೆ ಸಾಲಿಗ್ರಾಮ ಅಧ್ಯಕ್ಷ ಪಿ.ಸಿ ಹೊಳ್ಳ, ಯುವ ವೇದಿಕೆಯ ಮಾರ್ಗದರ್ಶಕರಾದ ಮಂಜುನಾಥ ಉಪಾಧ್ಯ, ಎ.ಪಿ ಅಡಿಗ ಅಸೋಸಿಯೇಟ್ಸ್ ಉಳ್ತೂರು ಮುಖ್ಯಸ್ಥ ಗಣೇಶ್ ಅಡಿಗ ಉಪಸ್ಥಿತರಿದ್ದರು. ಯುವ ವೇದಿಕೆಯ ಗೌರವಾಧ್ಯಕ್ಷ ಪಿ.ವೈ ಕೃಷ್ಣಪ್ರಸಾದ್ ಹೇರ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವವೇದಿಕೆಯ ಅಧ್ಯಕ್ಷ ಗಿರೀಶ್ ಮಯ್ಯ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಕಾಂತ್ ಐತಾಳ್ ವರದಿ ವಾಚಿಸಿದರು. ವೇದಿಕೆಯ ವೆಂಕಟೇಶ ಮಯ್ಯ, ರವಿರಾಜ್ ಉಪಾಧ್ಯ, ಸಚಿನ್ ಹೇರ್ಳೆ, ಪ್ರಶಾಂತ್ ಹೇರ್ಳೆ ಸನ್ಮಾನ ಪತ್ರ ವಾಚಿಸಿದರು. ಯುವ ವೇದಿಕೆಯ ಪ್ರಮುಖರಾದ ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಪನ್ನವ ನಾವಡ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಗತ್ಯ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರು, ಜ.17: ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಇರಬೇಕು ಎನ್ನುವುದು ನನ್ನ...

ಕೋಟೆಕಾರ್ ಉಳ್ಳಾಲದ ಸಹಕಾರಿ ಬ್ಯಾಂಕ್ ದರೋಡೆ- ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ತುರ್ತು ಸಭೆ

ಮಂಗಳೂರು, ಜ.17: ಕೋಟೆಕಾರ್ ಉಳ್ಳಾಲದ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ...

ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವೀಲ್ ಚೇರ್ ಸೌಲಭ್ಯ: ಅರ್ಜಿ ಆಹ್ವಾನ

ಉಡುಪಿ, ಜ.17: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ...

ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ: ಸುವರ್ಣ ಸಂಗಮ ಸಮಾರೋಪ

ನಾಯಕವಾಡಿ, ಜ.17: ಸಂಸ್ಕಾರ ಭರಿತ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜಕ್ಕೆ...
error: Content is protected !!