ಕೋಟ, ಜ.14: ಕಲೆಯನ್ನು ಆರಾಧಿಸಿ ಅದನ್ನು ವೇದಿಕೆಯಾಗಿರಿಸಿಕೊಂಡು ಸಾಮಾಜಿಕ ಕೈಂಕರ್ಯ ನಿಜಕ್ಕೂ ಶ್ಲಾಘನೀಯ ಎಂದು ಯೋಗಗುರುಕುಲ ಇದರ ಮುಖ್ಯಸ್ಥ ಡಾ.ವಿದ್ವಾನ್ ವಿಜಯ ಮಂಜರ್ ಹೇಳಿದರು. ಸೋಮವಾರ ಯಡಬೆಟ್ಟು ಹಗ್ರಿ ಪರಿಸರದಲ್ಲಿ ಯಕ್ಷಮಿತ್ರರು ಯಡಬೆಟ್ಟು ಸಾಸ್ತಾನ ಆಶ್ರಯದಲ್ಲಿ ಯಕ್ಷರಾತ್ರಿ ಅದ್ಧೂರಿಯ ಯಕ್ಷ ವೇದಿಕೆಯಲ್ಲಿ ಸಾಧಕ ಈಶ್ವರ್ ಮಲ್ಪೆ ತಂಡಕ್ಕೆ ಸನ್ಮಾನಗೈದು ಅವರು ಮಾತನಾಡಿದರು. ರಾಜ್ಯಮಟ್ಟದ ಹ್ಯಾಮರ್ ಸಾಧಕ ತನುಷ್ ಪೂಜಾರಿಯವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವೇದಿಕೆಯಲ್ಲಿ ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ಸಾಸ್ತಾನದ ಬ್ರಹ್ಮಬೈದರ್ಕಳ ಗೋಳಿಗರಡಿ ಪಾತ್ರಿ ಶಂಕರ್ ಪೂಜಾರಿ, ಯಕ್ಷಮಿತ್ರರು ತಂಡದ ಗೌರವಾಧ್ಯಕ್ಷ ಕರಿಯ ದೇವಾಡಿಗ, ಅಧ್ಯಕ್ಷ ಗೋಪಾಲ ಮೆಂಡನ್ ಉಪಸ್ಥಿತರಿದ್ದರು. ನಿರೂಪಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಸುಂಕದಕಟ್ಟೆ ಮೇಳದ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಪ್ರಸಂಗ ಪ್ರದರ್ಶನಗೊಂಡಿತು. ಮೆರವಣಿಗೆ, ಗಣಪತಿ ಪೂಜಾ ಕಾರ್ಯಕ್ರಮ ನಡೆಯಿತು.