Tuesday, January 14, 2025
Tuesday, January 14, 2025

ವಾಯುಪಡೆಯಲ್ಲಿ ಏರ್‌ಮ್ಯಾನ್, ಅಗ್ನೀವೀರ್ ವಾಯು ಹುದ್ದೆ: ಅರ್ಜಿ ಆಹ್ವಾನ

ವಾಯುಪಡೆಯಲ್ಲಿ ಏರ್‌ಮ್ಯಾನ್, ಅಗ್ನೀವೀರ್ ವಾಯು ಹುದ್ದೆ: ಅರ್ಜಿ ಆಹ್ವಾನ

Date:

ಉಡುಪಿ, ಜ.13: ಭಾರತೀಯ ವಾಯುಪಡೆಯಲ್ಲಿ ಏರ್‌ಮ್ಯಾನ್ ಮತ್ತು ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಏರ್‌ಮ್ಯಾನ್ ಆಗಿ ಗ್ರೂಪ್ ವೈ (ತಾಂತ್ರಿಕವಲ್ಲದ) (ಎ) ವೈದ್ಯಕೀಯ ಸಹಾಯಕ ವೃತ್ತಿಗೆ ಸೇರಲು 10+2 ವಿದ್ಯಾರ್ಹತೆ ಹೊಂದಿದ ಅವಿವಾಹಿತ ಅಭ್ಯರ್ಥಿಯು 2004 ರ ಜುಲೈ 3 ಮತ್ತು 2008 ರ ಜುಲೈ 03 ರ ನಡುವೆ ಜನಿಸಿರಬೇಕು. (ಬಿ)ವೈದ್ಯಕೀಯ ಸಹಾಯಕ ವೃತ್ತಿಗೆ ಫಾರ್ಮಸಿಯಲ್ಲಿ ಡಿಪ್ಲೋಮಾ/ ಬಿ.ಎಸ್ಸಿ ಆಗಿರುವ ಅವಿವಾಹಿತ ಅಭ್ಯರ್ಥಿಯು 2001 ರ ಜುಲೈ 03 ಮತ್ತು 2006 ರ ಜುಲೈ 03 ನಡುವೆ ಜನಿಸಿರಬೇಕು. ವಿವಾಹಿತ ಅಭ್ಯರ್ಥಿಯು 2001 ರ ಜುಲೈ 03 ಮತ್ತು 2004 ರ ಜುಲೈ 03 ನಡುವೆ ಜನಿಸಿರಬೇಕು.

ರ‍್ಯಾಲಿಯು ಕೇರಳ ಕೊಚ್ಚಿಯ ಎರ್ನಾಕುಲಂ ಪಿ.ಟಿ. ಉಷಾ ರಸ್ತೆಯ ಮಹಾರಾಜ ಕಾಲೇಜು ಮೈದಾನದಲ್ಲಿ ಜನವರಿ 29 ರಿಂದ ಫೆಬ್ರವರಿ 6 ರ ವರೆಗೆ ಮುಂಜಾನೆ 6 ಘಂಟೆ ಯಿಂದ 10 ಘಂಟೆಯವರೆಗೆ ನಡೆಯಲಿದ್ದು, ಮಾಹಿತಿಗಾಗಿ ವೆಬ್‌ಸೈಟ್ http://www.airmenselection.cdac.in ಗೆ ಭೇಟಿ ನೀಡಬಹುದಾಗಿದೆ. ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2005 ರ ಜನವರಿ 01 ಮತ್ತು 2008 ರ ಜುಲೈ 01 ರ ನಡುವೆ ಜನಿಸಿದವರು ಅರ್ಜಿ ಸಲ್ಲಿಸಬಹುದಾಗಿದ್ದು, ಜನವರಿ 27 ರವರೆಗೆ ವೆಬ್‌ಸೈಟ್ http://agnipathvayu.cdac.in ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದಿ,್ರ ಮಣಿಪಾಲ ಉಡುಪಿ ಅಥವಾ ವೆಬ್‌ಸೈಟ್ https://careerindianairforce.cdac.in  ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರೀಕ್ಷೆ ಒಂದು ವ್ಯವಸ್ಥೆ, ಆತಂಕ ಬೇಡ: ಡಾ. ವಿರೂಪಾಕ್ಷ ದೇವರಮನೆ

ಉಪ್ಪೂರು, ಜ.14: ಯುವ ವಿಚಾರ ವೇದಿಕೆ ಕೊಳಲಗಿರಿ ಉಪ್ಪೂರು ಇದರ ರಜತ...

ಸಂಜೀವಿನಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟನೆ

ಉಡುಪಿ, ಜ.14: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ, ಜಿಲ್ಲಾ...

ಕೋಟ ಮಹಿಳಾ ಮಂಡಲ 60 ನೇ ವರ್ಷದ ಸಂಭ್ರಮಾಚರಣೆ

ಕೋಟ, ಜ.14: ಇಂದಿನ ಕಾಲ ಮೊದಲಿನಂತ್ತಿಲ್ಲ, ಸಾಕಷ್ಟು ಬದಲಾವಣೆಯನ್ನು ಕಂಡಿದ್ದು ಹಲವಾರು...

ಪೋದಾರ್ ಅಂತರಾಷ್ಟ್ರೀಯ ಶಾಲೆ ಉಡುಪಿ: ರಸ್ತೆ ಸುರಕ್ಷತಾ ಜಾಗೃತಿ

ಉಡುಪಿ, ಜ.13: ಪೋದಾರ್ ಅಂತರಾಷ್ಟ್ರೀಯ ಶಾಲೆ ಉಡುಪಿ ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತಾ...
error: Content is protected !!