ಉಡುಪಿ, ಜ.13: ಟೀಮ್ ಭವಾಬ್ಧಿ ಪಡುಕರೆ ಕೋಟತಟ್ಟು ವತಿಯಿಂದ ಸಾಸ್ತಾನ ವಿನಯಚಂದ್ರ ಅವರು ನಡೆಸುತ್ತಿರುವ ಹೊಸ ಬದುಕು ಆಶ್ರಮದಲ್ಲಿ ಟೀಮ್ ಭವಾಬ್ಧಿಯ ಸೇವಾ ಕಾರ್ಯ ಪ್ರಯುಕ್ತ ದಿನನಿತ್ಯ ಉಪಯೋಗಿಸುವ ಬಟ್ಟೆಗಳನ್ನು ನೀಡಲಾಯಿತು. ಟೀಮ್ ಭವಾಬ್ಧಿ ಅಧ್ಯಕ್ಷ ಸಂತೋಷ ತಿಂಗಳಾಯ, ಉಪಾಧ್ಯಕ್ಷ ಉದಯ್ ಬಂಗೇರ, ಕಾರ್ಯದರ್ಶಿ ಸಂದೇಶ್ ಅಮೀನ್, ಕೋಟತಟ್ಟು ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ, ಗೌರವ ಸಲಹೆಗಾರ ದೇವೇಂದ್ರ ಶ್ರೀಯಾನ್, ಆಶ್ರಮದ ಮುಖ್ಯಸ್ಥರಾದ ಸಾಸ್ತಾನ ವಿನಯಚಂದ್ರ ಉಪಸ್ಥಿತರಿದ್ದರು.
ಟೀಮ್ ಭವಾಬ್ಧಿ: ಹೊಸಬದುಕು ಆಶ್ರಮಕ್ಕೆ ಕೊಡುಗೆ
ಟೀಮ್ ಭವಾಬ್ಧಿ: ಹೊಸಬದುಕು ಆಶ್ರಮಕ್ಕೆ ಕೊಡುಗೆ
Date: