Thursday, January 9, 2025
Thursday, January 9, 2025

ಸಹಕಾರ ಕ್ಷೇತ್ರದಲ್ಲೂ ರಾಜಕೀಯ ಪಕ್ಷಗಳ ಸೇೂಲು ಗೆಲುವಿನ ಲೆಕ್ಕಾಚಾರ ಬೇಕೇ?

ಸಹಕಾರ ಕ್ಷೇತ್ರದಲ್ಲೂ ರಾಜಕೀಯ ಪಕ್ಷಗಳ ಸೇೂಲು ಗೆಲುವಿನ ಲೆಕ್ಕಾಚಾರ ಬೇಕೇ?

Date:

ನಾನು ತಿಳಿದುಕೊಂಡ ಮಟ್ಟಿಗೆ ಸಹಕಾರ ಕ್ಷೇತ್ರ ರಾಜಕೀಯದಿಂದ ದೂರವಿದ್ದಷ್ಟೂ ಸಹಕಾರದ ತತ್ವಗಳನ್ನು ಅಳವಡಿಸಿಕೊಳ್ಳಲು ಹೆಚ್ಚು ಪೂರಕವಾದ ಪರಿಸರ ಸೃಷ್ಟಿ ಮಾಡಬಹುದು ಅನ್ನುವುದು ಸಹಕಾರಿ ತತ್ವದಲ್ಲಿ ನಂಬಿಕೆ ಇರುವವರ ಲೆಕ್ಕಾಚಾರ. ಸಹಕಾರ ಮತ್ತು ಶಿಕ್ಷಣ ಕ್ಷೇತ್ರಗಳು ವಾಸ್ತವಿಕ ರಾಜಕೀಯದಿಂದ ದೂರವಿದ್ದಷ್ಟು ಹೆಚ್ಚು ಕಾಲದವರೆಗೆ ಆರೇೂಗ್ಯಕರವಾಗಿ ಉಸಿರಾಡಲು ಸಾಧ್ಯ. ಹಾಗಂತ ರಾಜಕೀಯ ವ್ಯಕ್ತಿಗಳು ಸಹಕಾರಿ ರಂಗಕ್ಕೆ ಬರಬಾರದು ಅನ್ನುವುದು ನನ್ನ ಅಭಿಪ್ರಾಯವಲ್ಲ. ಆದರೆ ಸಹಕಾರದಲ್ಲಿ ಅವರು ಕಾರ್ಯನಿರ್ವಹಿಸುವಾಗ ತಮ್ಮ ಪಕ್ಷಗಳ ರಾಜಕೀಯವನ್ನು ಸಹಕಾರದೊಳಗೆ ಎಳೆದು ತರಬಾರದು. ಇದರಿಂದಾಗಿ ಸಹಕಾರಿ ಸ್ವಾಸ್ಥ್ಯ ಖಂಡಿತವಾಗಿಯೂ ಕೆಟ್ಟು ಹೇೂಗಬಹುದು ಅನ್ನುವುದು ಸಹಕಾರಿ ತತ್ವದ ಬಹುಮುಖ್ಯ ಕಾಳಜಿಯೂ ಹೌದು.
ನಾನು ಇದುವರೆಗೆ ಪ್ರತಿ ವರ್ಷವೂ ಹತ್ತು ಹಲವು ಸಹಕಾರ ಕಾರ್ಯಕ್ರಮದಲ್ಲಿ ದಿಕ್ಸೂಚಿ ಉಪನ್ಯಾಸ ನೀಡಲು ಹೇೂಗಿದ್ದೇನೆ. ಅಲ್ಲಿ ಎಲ್ಲಿಯೂ ಕೂಡಾ ರಾಜಕೀಯವನ್ನು ಎಳೆದು ತಂದವರನ್ನು ನಾನು ನೇೂಡಿಯೇ ಇಲ್ಲ. ಪ್ರತಿ ಕಾರ್ಯಕ್ರಮದಲ್ಲಿಯೂ ಜನಪ್ರತಿನಿಧಿಗಳು ಭಾಗವಹಿಸುತ್ತಿದ್ದರು. ಅವರು ಯಾರು ಕೂಡಾ ತಮ್ಮ ಪಕ್ಷವನ್ನು ಬಿಂಬಿಸಿಕೊಂಡಿದ್ದನ್ನು ನಾನು ನೇೂಡಿಲ್ಲ. ಇಂತಹ ಸಹಕಾರದ ಬದುಕಿನ ಕಾರ್ಯಕ್ರಮಗಳನ್ನು ನೇೂಡಿಯೇ ಖುಷಿ ಪಟ್ಟಿದ್ದೇನೆ. ಮಾತ್ರವಲ್ಲದೆ, ಸಹಕಾರ ರಂಗ ಮತ್ತು ಶಿಕ್ಷಣ ಕ್ಷೇತ್ರ ನಮ್ಮ ಸಮಾಜವನ್ನು ಸಮಗ್ರತೆಯ ನೆಲೆಯಲ್ಲಿ ಎತ್ತಿ ಸುಧಾರಿಸಬಲ್ಲ ಶಕ್ತಿಯುತವಾದ ಸಂಸ್ಥೆಗಳೆಂದು ನಂಬಿಕೆ ನಮ್ಮಲ್ಲಿ ಇತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯ ಕೆಲವೊಂದು ರೈತ ಸೇವಾ ಸಹಕಾರಿ ಸಂಸ್ಥೆಗಳ ಚುನಾವಣಾ ಫಲಿತಾಂಶವನ್ನು ಪತ್ರಿಕೆಯಲ್ಲಿ ಪ್ರಕಟಿಸುವಾಗ ಗೆದ್ದ ಅಭ್ಯರ್ಥಿಗಳು ತಮ್ಮ ಗೆಲುವನ್ನು ತಮ್ಮ ತಮ್ಮ ಪಕ್ಷಗಳಿಗೆ ಅರ್ಪಣೆ ಮಾಡಿಕೊಳ್ಳುವುದರ ಜೊತೆಗೆ ತಮ್ಮ ಪಕ್ಷಗಳ ಗೆಲುವು ಅನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳುವುದನ್ನು ನೇೂಡಿದರೆ ಇಂದು ಸಹಕಾರಿ ರಂಗದಲ್ಲಿ ನಡೆದ ಚುನಾವಣೆಯೋ ಅಥವಾ ರಾಜಕೀಯ ಪಕ್ಷಗಳು ತಮ್ಮ ಚಿಹ್ನೆಗಳನ್ನು ಬಳಸಿ ಸಹಕಾರಿ ರಂಗದಲ್ಲಿ ನಡೆಸಿದ ಚುನಾವಣಾ ಫಲಿತಾಂಶವೋ ಅನ್ನುವ ಸಂಶಯ ಮೂಡಲು ಕಾರಣವಾಗಿದೆ. ಈ ಸಹಕಾರಿ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಗೆಲುವು ನಮ್ಮ ಪಕ್ಷಕ್ಕೆ ಬಂದಿದೆ. ಇದು ಸಹಕಾರಿ ರಂಗಕ್ಕೆ ಹೇಳಿಸಿದ ಸುದ್ದಿ ಅಲ್ಲ. ನಿಮ್ಮ ಹೃದಯದಲ್ಲಿ ನಿಮ್ಮ ನಿಮ್ಮ ಪಕ್ಷಗಳ ಕುರಿತಾಗಿ ಗೌರವ ಅಭಿಮಾನವಿರಲಿ. ಆದರೆ ಅದನ್ನು ಸಹಕಾರಿ ಸಂಸ್ಥೆಯ ಒಳಗೆ ಪ್ರಕಟಿಸುವ ಅಗತ್ಯವಿಲ್ಲ ಅನ್ನುವುದು ನನ್ನ ಖಚಿತವಾದ ಅಭಿಪ್ರಾಯ. ಒಂದು ವೇಳೆ ಇಂತಹ ಸಹಕಾರಿ ಸಂಸ್ಥೆಗಳಲ್ಲಿ ಯಾವುದೋ ಅವ್ಯವಹಾರ ಅಥವಾ ಮುಳುಗಿಯೇ ಹೇೂಯಿತು ಅಂದರೆ ಇದರ ಜವಾಬ್ದಾರಿಯನ್ನು ಇಂತಹ ರಾಜಕೀಯ ಪಕ್ಷಗಳು ಸಾಂಘಿಕವಾಗಿ ವಹಿಸಿಕೊಳ್ಳಲು ಸಿದ್ಧರಿದ್ದಾರೆಯೇ ಅನ್ನುವುದು ಇನ್ನೊಂದು ಪ್ರಶ್ನೆ. ಅಂತೂ ಸಹಕಾರಿ ವ್ಯವಸ್ಥೆ ರಾಜಕೀಯ ಪಕ್ಷಗಳ ಹೆಸರಿನಿಂದ ದೂರ ನಿಲ್ಲುವುದು ಸಹಕಾರ ವ್ಯವಸ್ಥೆಯ ಆರೇೂಗ್ಯಪೂರ್ಣ ಬೆಳವಣಿಗೆಯ ದೃಷ್ಟಿಯಿಂದ ಅತೀ ಅಗತ್ಯವಿದೆ ಅನ್ನುವುದು ನಮ್ಮೆಲ್ಲರ ಅನಿಸಿಕೆ.

ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾವಿತ್ರಿ ಬಾ ಪುಲೆ ಜನ್ಮದಿನಾಚರಣೆ

ಕುಂದಾಪುರ, ಜ.9: ಸರಕಾರಿ ಪದವಿಪೂರ್ವ ಕಾಲೇಜು ನಾವುಂದ ಇಲ್ಲಿ ರೇಂಜರ್ಸ್ ಮತ್ತು...

ವಿವಿಧ ಚಟುವಟಿಕೆಗಳಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ

ಉಡುಪಿ, ಜ.9: ಕೃಷಿ ಇಲಾಖೆಯ ವತಿಯಿಂದ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ...

ಪ್ರತಿಭಾ ಕಾರಂಜಿಯಲ್ಲಿ ಸಾಯ್ಬ್ರಕಟ್ಟೆ ಶಾಲೆಯ ಪ್ರಣೀತಾ ಪ್ರಥಮ

ಕೋಟ, ಜ.9: ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೈದೆಬೆಟ್ಟು...

ಜೇಸಿಐ ಶಂಕರನಾರಾಯಣ ಪದಾಧಿಕಾರಿಗಳ ಆಯ್ಕೆ

ಶಂಕರನಾರಾಯಣ, ಜ.9: ಜೇಸಿಐ ಶಂಕರನಾರಾಯಣ ಇದರ 2025ನೇ ಸಾಲಿನ ಅಧ್ಯಕ್ಷರಾಗಿ ಪ್ರವೀಣ್...
error: Content is protected !!