ಉಡುಪಿ ಬುಲೆಟಿನ್, ಜ.6: ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ಸಂತೆಕಟ್ಟೆಯ ಆಶೀರ್ವಾದ ಚಿತ್ರಮಂದಿರ ಎದುರಿನಲ್ಲಿ ವರ್ಷದ ಹಿಂದೆ ಮಣ್ಣಿನ ರಾಶಿ ಬಿದ್ದಿತ್ತು. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಬಹಳ ತೊಂದರೆಯುಂಟಾಗುತ್ತಿತ್ತು.
ಈ ಬಗ್ಗೆ ಡಿಸೆಂಬರ್ 23 2024 ರಂದು ಉಡುಪಿ ಬುಲೆಟಿನ್ ನಲ್ಲಿ ‘ರಾಷ್ಟ್ರೀಯ ಹೆದ್ದಾರಿಯಲ್ಲೇ ಮಣ್ಣಿನ ರಾಶಿ; ನಿರ್ಲಕ್ಷ್ಯದ ಪರಮಾವಧಿಗೆ ಇದೇ ಸಾಕ್ಷಿ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡಿತ್ತು. https://nammaudupibulletin.com/suddigalu/pradeshika/reg-news-udupi-5605/ ಇದೀಗ ಮಣ್ಣಿನ ರಾಶಿಯನ್ನು ತೆರವುಗೊಳಿಸಲಾಗಿದೆ.