Thursday, January 9, 2025
Thursday, January 9, 2025

ಬಾರಕೂರು: ಅಂತರ ಕಾಲೇಜು ಬೆಸ್ಟ್ ಟ್ಯಾಲೆಂಟ್ ಅವಾರ್ಡ್, ವಿಡಿಯೋ ಮೇಕಿಂಗ್ ಸ್ಪರ್ಧೆ

ಬಾರಕೂರು: ಅಂತರ ಕಾಲೇಜು ಬೆಸ್ಟ್ ಟ್ಯಾಲೆಂಟ್ ಅವಾರ್ಡ್, ವಿಡಿಯೋ ಮೇಕಿಂಗ್ ಸ್ಪರ್ಧೆ

Date:

ಬಾರಕೂರು, ಜ.6: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರ ಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರ್ಕೂರ್ ಇಲ್ಲಿನ ಕಾಮರ್ಸ್ ಫೋರಮ್, ಆಂತರಿಕ ಗುಣಮಟ್ಟದ ಭರವಸೆ ಕೋಶ, ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದಲ್ಲಿ ವಾಣಿಜ್ಯಶಾಸ್ತ್ರ ವಿಭಾಗವು 3-01-2025 ರಂದು ಕಾಲೇಜಿನ ಎ.ವಿ. ಸಭಾಂಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಟ್ಯಾಲೆಂಟ್ ಹಂಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ . ಭಾಸ್ಕರ್ ಶೆಟ್ಟಿ ಸಲ್ವಾಡಿ ಅವರು ಮಾತನಾಡುತ್ತಾ, ಅಂತರ್ ಕಾಲೇಜು ಮಟ್ಟದ ಸ್ಪರ್ಧೆಗಳು ಸ್ನಾತಕೋತ್ತರ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದ್ದು, ವಾಣಿಜಶಾಸ್ತ್ರ ವಿಭಾಗದಿಂದ ಆಯೋಜಿಸರುವಂಥ ವಿ.ವಿ ಮಟ್ಟದ ಅಣಕು ಸಂದರ್ಶನ ಮತ್ತು ತುಣುಕು ವಿಡಿಯೋ ಸ್ಪರ್ಧೆಯು ವಿದ್ಯಾರ್ಥಿಗಳ ಮತ್ತು ಕಾಲೇಜಿನ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಕಾರ್ಯಕ್ರಮದ ಉದ್ಘಾಟಕರಾಗಿ ಕಾರ್ಕಳದ ಎಂ.ಪಿ.ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿಯಾದ ಜಯಲಕ್ಷ್ಮಿ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧಾಪಕರಾದ ರಾಧಾಕೃಷ್ಣ ನಾಯಕ್ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಟ್ಯಾಲೆಂಟ್ ಹಂಟ್ ಕಾರ್ಯಕ್ರಮದ ಹಿನ್ನಲೆ ಮತ್ತು ಇದರ ಉದ್ದೇಶದ ಬಗ್ಗೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರು ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶೋಭಾ ಆರ್., ಸಹಾಯಕ ಪ್ರಾಧ್ಯಾಪಕರಾದ ಅನಿಲ್ ಕುಮಾರ್ ಕೆ ವೈ, ಸುಮ ಟಿ ಕೆ., ಗ್ರಂಥಪಾಲಕರಾದ ಹರೀಶ್ ಸಿ.ಕೆ., ಎಂಎಸ್.ಡಬ್ಲ್ಯೂ ಮುಖ್ಯಸ್ಥರಾದ ಡಾ. ಹೇಮಾ ಎಸ್ ಕೊಡದ್, ಡಾ. ಶ್ರೀದೇವಿ, ಡಾ. ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು. ಅಂತಿಮ ಎಂ.ಕಂ ನ ವಿದ್ಯಾರ್ಥಿನಿ ಸಂಜಲಿ ಬಿ ಸ್ವಾಗತಿಸಿ ರಂಜಿತಾ ಕಾರ್ಯಕ್ರಮ ನಿರೂಪಿಸಿದರು.

ದಿ ಬೆಸ್ಟ್ ಟ್ಯಾಲೆಂಟ್ ಸ್ಪರ್ಧೆಯನ್ನು ಮಂಗಳೂರು ವಿ.ವಿ ಎಲ್ಲಾ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗಕ್ಕೆ ಸಂಬಂಧ ಪಟ್ಟ ಸಂದರ್ಶನಕ್ಕೆ ತಯಾರಿ ನಡೆಸುವಲ್ಲಿ ಮಾರ್ಗದರ್ಶನ ಕೊಡುವ ಮತ್ತು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು. 12 ವಿವಿಧ ಕಾಲೇಜಿನ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಣಕು ಸಂದರ್ಶನ ಮತ್ತು ತುಣುಕು ವಿಡಿಯೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ: ಸ್ನಾತಕೋತ್ತರ ಬೆಸ್ಟ್ ಟ್ಯಾಲೆಂಟ್ ಅವಾರ್ಡ್ 2025ನ್ನು ಕಾರ್ಕಳದ ಎಂ.ಪಿ.ಎಂ ಸರಕಾರಿ ಪ್ರಥಮದರ್ಜೆ ಕಾಲೇಜಿನ ಶರಣ್ಯ ನಾಯಕ್ ಪಡೆದುಕೊಂಡರು, ಅದೇ ಕಾಲೇಜಿನ ಶ್ರೇಯ ಶೆಟ್ಟಿ ಮೋಸ್ಟ ಪ್ರಾಮಿಸಿಂಗ್ ಟ್ಯಾಲೆಂಟ್ ಅವಾರ್ಡನ್ನು ಮತ್ತು ಬಾರಕೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅನಂತ ಡಿ ಡೈನಾಮಿಕ್ ಪರ್ಫಾರ್ಮರ್ ಅವಾರ್ಡನ್ನು ಪಡೆದುಕೊಂಡರು. ಬೆಸ್ಟ್ ಶಾರ್ಟ್ ವಿಡಿಯೋ 2025 ಪ್ರಶಸ್ತಿಯನ್ನು ಎಂ.ಜಿ.ಎಂ ಕಾಲೇಜಿನ ಯತಿರಾಜ್ ಮತ್ತು ತಂಡದವರು ಪಡೆದುಕೊಂಡರು. ಆಳ್ವಾಸ್ ಕಾಲೇಜಿನ ರೇಖಾ ಶೆಟ್ಟಿ, ಬೆಲ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಕುಶಾಲಪ್ಪ ಮತ್ತು ಎಂಪಿಎಂ ಕಾಲೇಜಿನ ಜಯಲಕ್ಷ್ಮಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಸಂಜೆ ನಡೆದಂತಹ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಅಂತಿಮ ವರ್ಷದ ಎಂ.ಕಾಂ ವಿದ್ಯಾರ್ಥಿ ಅನಂತ್ ಡಿ ನಡೆಸಿಕೊಟ್ಟರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಕನಿಷ್ಠ 4 ಮಂದಿ ಸಾವು, ಹಲವರಿಗೆ ಗಾಯ

ಯು.ಬಿ.ಎನ್.ಡಿ., ಜ.8: ತಿರುಮಲ ಬೆಟ್ಟದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ವೈಕುಂಠ ದ್ವಾರ...

ರಾಜ್ಯಮಟ್ಟದ ಅರ್ಹತಾ ಪರೀಕ್ಷೆ (KSET): ಕೋಟೇಶ್ವರ ಸರ್ಕಾರಿ ಕಾಲೇಜಿನ ಮೂರು ವಿದ್ಯಾರ್ಥಿಗಳು ಉತ್ತೀರ್ಣ

ಕುಂದಾಪುರ, ಜ.8: ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ...

ಅರ್ಚಕರಿಗೆ ಡಿಬಿಟಿ ಮೂಲಕ ತಸ್ತೀಕ್ ಪಾವತಿ: ಅರ್ಜಿ ಆಹ್ವಾನ

ಉಡುಪಿ, ಜ.8: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ಅರ್ಚಕರಿಗೆ...

ಜ.11: ಉಡುಪಿಯಲ್ಲಿ ಸಿರಿಧಾನ್ಯ ಹಬ್ಬ

ಉಡುಪಿ, ಜ.8: ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ...
error: Content is protected !!