Tuesday, January 7, 2025
Tuesday, January 7, 2025

ದೇಶದೆಲ್ಲೆಡೆ ಗ್ರಂಥಾಲಯ ಆಂಧೋಲನವಾಗಲಿ: ಡಾ. ಮಹಾಬಲೇಶ್ವರ ರಾವ್

ದೇಶದೆಲ್ಲೆಡೆ ಗ್ರಂಥಾಲಯ ಆಂಧೋಲನವಾಗಲಿ: ಡಾ. ಮಹಾಬಲೇಶ್ವರ ರಾವ್

Date:

ಉಡುಪಿ, ಜ.3: ಜನರಲ್ಲಿ ಓದುವ ಹವ್ಯಾಸ ವೃದ್ಧಿ, ಜ್ಞಾನ ಗಳಿಕೆ, ವಿದ್ಯಾವಂತರಾಗಲು ಪೂರಕವಾಗಿ ಗ್ರಂಥಾಲಯ ಆಂಧೋಲನ ನಡೆದಿಲ್ಲ ಎಂದು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಹೇಳಿದರು.ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದಿಂದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮನೆಯೇ ಗ್ರಂಥಾಲಯ ಯೋಜನೆಯಡಿ 130ನೇ ಗ್ರಂಥಾಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಬಸ್, ರೈಲು, ವಿಮಾನ ನಿಲ್ದಾಣ, ಆಸ್ಪತ್ರೆ ಸಹಿತ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ವಿರಾಮ ಸಿಕ್ಕಾಗ ಓದಲು ಪುಸ್ತಕ ಭಂಡಾರ/ಗ್ರಂಥಾಲಯ ನಿರ್ಮಾಣವನ್ನು ಅಗತ್ಯ ಸೇವೆಯಾಗಿ ಪರಿಗಣಿಸಬೇಕು. ಆಧುನಿಕ ಡಿಜಿಟಲ್ ಮಾಧ್ಯಮ ಬಂದ ಮೇಲೆ ಪುಸ್ತಕ ಓದು ಕಡಿಮೆಯಾಗಿದೆ. ಪ. ಪೂ. ಕಾಲೇಜಿನ ತನಕದ ವೇಳಾಪಟ್ಟಿಯಲ್ಲಿ ಗ್ರಂಥಾಲಯ ಇಲ್ಲ. ಗ್ರಂಥಾಲಯಗಳು ದುರ್ಬಲವಾಗಿವೆ. ಈ ನಿಟ್ಟಿನಲ್ಲಿ ಶಾಲೆಗೊಂದು ಗ್ರಂಥಾಲಯ ಅಭಿಯಾನ ಆಗಬೇಕು ಎಂದು ಹೇಳಿದರು.

ಜಪಾನಿನ ಮಿಯಾಜಾಕಿ ವಿವಿಯ ಪ್ರೊಫೆಸರ್ ಡಾ. ಹರೀಶ್ ಕುಮಾರ್ ಮಧ್ಯಸ್ಥ ಮಾತನಾಡಿ, ಸಾಗರೋತ್ತರ ರಾಷ್ಟ್ರಗಳಿಗೂ ಪುಸ್ತಕ/ಗ್ರಂಥಾಲಯ ಅಭಿಯಾನ ವಿಸ್ತರಣೆಯಾಗಲಿ. ಈ ನಿಟ್ಟಿನಲ್ಲಿ ನಾನು ವಿಶೇಷ ಆಸಕ್ತಿ ವಹಿಸುವೆನು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಮೊಬೈಲ್ ಸಂಸ್ಕೃತಿ ಹೆಚ್ಚಿದ್ದು ಯುವಜನರಲ್ಲಿ ಓದುವ ಹವ್ಯಾಸ ಮೂಡಿಸುವ ಹೊಣೆಗಾರಿಕೆಯನ್ನು ಸಮಾಜಮುಖಿ ಕಾರ್ಯಕ್ರಮದ ಮೂಲಕ ನಿಭಾಯಿಸಬೇಕು ಎಂದರು.

ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಗ್ರಂಥಾಲಯಗಳು ಜನರಿಗೆ ಪರಿಣಾಮಕಾರಿಯಾಗಿ ತಲುಪುವಲ್ಲಿ ಹೆಚ್ಚಿನ ಆಸಕ್ತಿ ಕಸಾಪ ವಹಿಸಬೇಕು ಎಂದರು. ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆ ವ್ಯವಸ್ಥಾಪಕ ಹಫೀಝ್ ರೆಹಮಾನ್, ಕಸಾಪ ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿ ಮೋಹನ್ ಹಂದಾಡಿ, ಮಲಬಾರ್ ಗೋಲ್ಡ್ ಸಂಸ್ಥೆಯ ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.

ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಸ್ವಾಗತಿಸಿ, ಜನಾರ್ದನ ಕೊಡವೂರು ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಕಂಟೋನ್ಮೆಂಟ್ ಕಥೆಗಳು’ ಲೋಕಾರ್ಪಣೆ

ಬೈಂದೂರು, ಜ.7: ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಸೈನಿಕರಿಂದಾಗಿ ನಾವು ನೆಮ್ಮದಿಯಿಂದ...

ಕೊಡಂಕೂರು: ರೂ. 2.50 ಕೋಟಿ ವೆಚ್ಚದ ಸೇತುವೆ ಮತ್ತು ರಸ್ತೆ ಕಾಮಗಾರಿಗೆ ಶಾಸಕ ಯಶ್ಪಾಲ್ ಸುವರ್ಣ ಚಾಲನೆ

ಉಡುಪಿ, ಜ.7: ಉಡುಪಿ ನಗರಸಭೆಯ ಕೊಡಂಕೂರು ವಾರ್ಡಿನ ನೆರೆಪೀಡಿತ ತಾರಕಟ್ಟ ಪ್ರದೇಶದಲ್ಲಿ...
error: Content is protected !!