Tuesday, January 7, 2025
Tuesday, January 7, 2025

ಹಾವುಗಳು ಪ್ರಕೃತಿಯ ಒಡಲಿನ ಒಡನಾಡಿ: ಗುರುರಾಜ್ ಸನಿಲ್

ಹಾವುಗಳು ಪ್ರಕೃತಿಯ ಒಡಲಿನ ಒಡನಾಡಿ: ಗುರುರಾಜ್ ಸನಿಲ್

Date:

ಕೋಟ, ಜ.3: ಪರಿಸರ ಜೀವ ಸಮತೋಲನದಲ್ಲಿ ಪ್ರಕೃತಿಯೇ ಸೃಷ್ಟಿಸಿಕೊಂಡ ಅನೇಕ ಪ್ರಬೇಧದ ಜೀವಿಗಳು ನಮ್ಮ ಸುತ್ತಮುತ್ತಲಿನಲ್ಲಿ ಕಾಣಬಹುದು. ಹಾವುಗಳು ಪರಿಸರದ ಮಿತ್ರನಾಗಿ ಮಾನವನ ಬದುಕಿಗೂ ಜೊತೆಯಾಗುತ್ತವೆ. ಹಾವುಗಳಲ್ಲಿ ವಿಷರಹಿತ ವಿಷ ಸಹಿತ ಎಂಬ ವಿಭಾಗ ಮಾಡಬಹುದು. ಕಾಳಿಂಗ ಸರ್ಪ ಹಾವು ಮಾತ್ರ ಗೂಡು ಮಾಡಿ ಮರಿ ಹಾಕುವ ಹಾಗೂ ಉಳಿದ ಎಲ್ಲಾ ಹಾವುಗಳು ಮೊಟ್ಟೆ ಇಡುವಂತವು. ಮನುಷ್ಯನಿಗೆ ತೊಂದರೆ ಕೊಡದೆ ಬದುಕುವ ಜೀವಿಗಳಲ್ಲಿ ಹಾವುಗಳನ್ನು ಗುರುತಿಸಬಹುದು ಎಂದು ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್ ಹೇಳಿದರು.

ಮಣೂರು ಪಡುಕರೆಯ ಪ್ರೌಢಶಾಲೆಯಲ್ಲಿ ಆಯೋಜಿಸಿದ ಹಾವು-ನಾವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗೀತಾನಂದ ಪೌಂಡೇಶನ್ ಮಣೂರು ಪಡುಕರೆ ಪ್ರಾಯೋಜಕತ್ವದಲ್ಲಿ ಹಾಗೂ ಸಮೃದ್ಧಿ ಇಕೋ ಕ್ಲಬ್ ಸಂಯೋಜನೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯೋಪಾಧ್ಯಾಯ ವಿವೇಕಾನಂದ ವಿ ಗಾಂವಕಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಣ್ಮರೆಯಾಗುತ್ತಿರುವ ಕೆಲವು ಪ್ರಕಾರದ ಹಾವುಗಳನ್ನು ಸಂರಕ್ಷಿಸಬೇಕಿದೆ. ಇದೇ ರೀತಿ ಹಾವುಗಳ ಸಂತತಿ ನಾಶವಾದರೆ ಪರಿಸರದಲ್ಲಿ ಅಸಮತೋಲನವಾಗಿ ಇನ್ನೊಂದು ಉಪದ್ರಕಾರಿ ಜೀವಿಗಳು ಹೆಚ್ಚಾಗಬಹುದು. ಹಾಗಾಗಿ ಹಾವುಗಳ ಸಂರಕ್ಷಣೆ ನಮ್ಮ ನಿಮ್ಮಲ್ಲರ ಜವಬ್ದಾರಿಯಾಗಬೇಕು ಎಂದರು.

ಗೀತಾನಂದ ಫೌಂಡೇಶನ್ ನಿರ್ವಾಹಕರಾದ ರವಿಕಿರಣ್, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಘವೇಂದ್ರ ಕಾಂಚನ್, ಸವಿತಾ ಕಾರ್ಕಡ ಕ್ಲಸ್ಟರ್ ಸಿ.ಆರ್.ಪಿ, ಸಂಮೃದ್ಧಿ ಇಕೋ ಕ್ಲಬ್ ಅಧ್ಯಕ್ಷ ಶ್ರವಣ್ ಉಪಸ್ಥಿತರಿದ್ದರು. ಇಕೋ ಕ್ಲಬ್ ಮಾರ್ಗದರ್ಶಕ ಶಿಕ್ಷಕಿ ಅನುಪಮ ಸಂನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ಡಾ. ಶಿವರಾಮ ಕಾರಂತ ಬಾಲ ಪ್ರತಿಭೆ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಇಕೋ ಕ್ಲಬ್ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಮಂಜುನಾಥ ಹೊಳ್ಳ ವಂದಿಸಿದರು. ನೆರೆಯ ಶಾಲೆಯಿಂದ ಬಂದ ಶಿಕ್ಷಕರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿನಿ ಸಮೃದ್ಧಿ ನಿರೂಪಿಸಿದರು. ಶಿಕ್ಷಕಿ ಹರ್ಷಿತಾ ಕಾರ್ಯಕ್ರಮ ಸಂಘಟಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಕಂಟೋನ್ಮೆಂಟ್ ಕಥೆಗಳು’ ಲೋಕಾರ್ಪಣೆ

ಬೈಂದೂರು, ಜ.7: ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಸೈನಿಕರಿಂದಾಗಿ ನಾವು ನೆಮ್ಮದಿಯಿಂದ...

ಕೊಡಂಕೂರು: ರೂ. 2.50 ಕೋಟಿ ವೆಚ್ಚದ ಸೇತುವೆ ಮತ್ತು ರಸ್ತೆ ಕಾಮಗಾರಿಗೆ ಶಾಸಕ ಯಶ್ಪಾಲ್ ಸುವರ್ಣ ಚಾಲನೆ

ಉಡುಪಿ, ಜ.7: ಉಡುಪಿ ನಗರಸಭೆಯ ಕೊಡಂಕೂರು ವಾರ್ಡಿನ ನೆರೆಪೀಡಿತ ತಾರಕಟ್ಟ ಪ್ರದೇಶದಲ್ಲಿ...
error: Content is protected !!