Wednesday, January 8, 2025
Wednesday, January 8, 2025

ಕುವೆಂಪುರವರ ಕೃತಿಗಳಲ್ಲಿ ಬದುಕಿನ ಆಗಾಧತೆ ಮತ್ತು ವಿಸ್ತರತೆ ಅಡಗಿದೆ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಕುವೆಂಪುರವರ ಕೃತಿಗಳಲ್ಲಿ ಬದುಕಿನ ಆಗಾಧತೆ ಮತ್ತು ವಿಸ್ತರತೆ ಅಡಗಿದೆ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

Date:

ಉಡುಪಿ, ಡಿ.31: ಕನ್ನಡ ಸಾಹಿತ್ಯದಲ್ಲಿ ಕುವೆಂಪುರವರು ಒಬ್ಬ ಮೇರು ಕವಿಯಾಗಿದ್ದು, ಅವರ ಶ್ರೀ ರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿಯಂತಹ ಮುಖ್ಯ ಕಾದಂಬರಿಗಳನ್ನು ಓದಿ ಬದುಕಿನ ಆಗಾಧತೆ ಮತ್ತು ವಿಸ್ತರತೆಯನ್ನು ತಿಳಿದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪುರವರ ಜಯಂತಿ ಪ್ರಯುಕ್ತ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಶೋಕಾಚರಣೆ ಹಿನ್ನೆಲೆ, ಸಾಂಕೇತಿಕವಾಗಿ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು. ಕುವೆಂಪುರವರು ಕರ್ನಾಟಕದಲ್ಲಿ ಮಾತ್ರವಲ್ಲದೇ ಭಾರತದ ಸಾಹಿತ್ಯದಲ್ಲೇ ಉತ್ತಮ ಹೆಸರನ್ನು ಪಡೆದವರು. ತಮ್ಮ ಸಾಹಿತ್ಯದ ಮೂಲಕ ಕನ್ನಡಿಗರಲ್ಲಿ ಕನ್ನಡಾಭಿಮಾನ ಮೂಡಿಸಿ, ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಸಾಹಿತ್ಯ ಪರಿಷತ್‌ನ ಮಾಧ್ಯಮ ಕಾರ್ಯದರ್ಶಿ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರ್ಕಳದ ಡಾ. ಅಭಿತ್ ಬಿ ಶೆಟ್ಟಿಗೆ ‘ವೈದ್ಯಕೀಯ ಉದ್ಯಮಿ ಪ್ರಶಸ್ತಿ’

ಕಾರ್ಕಳ, ಜ.7: ಉಡುಪಿ ಜಿಲ್ಲೆಯ ಕಾರ್ಕಳದ ಡಾ. ಅಭಿತ್ ಬಿ ಶೆಟ್ಟಿ...

ಕಿನ್ನಿಮುಲ್ಕಿ: ಜನಸಂಪರ್ಕ ಸಭೆ

ಉಡುಪಿ, ಜ.7: ಉಡುಪಿ ನಗರಸಭೆಯ ಕಿನ್ನಿಮುಲ್ಕಿ ವಾರ್ಡಿನಲ್ಲಿ ಶಾಸಕ ಯಶ್ಪಾಲ್ ಸುವರ್ಣ...

ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೋಟ, ಜ.7: ಫೆಬ್ರವರಿ 12 ರಿಂದ 15 ರವರೆಗೆ ಕೋಟದ ಹಾಡಿಕೆರೆ...

ಅಪ್ರೆಂಟಿಷಿಪ್ ತರಬೇತಿ: ಅರ್ಜಿ ಆಹ್ವಾನ

ಉಡುಪಿ, ಜ.7: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್.ಏ.ಎಲ್) ಬೆಂಗಳೂರಿನಲ್ಲಿ ಮಾರ್ಚ್ 2025...
error: Content is protected !!