Wednesday, January 8, 2025
Wednesday, January 8, 2025

ಯುಬಿ ಸ್ಕ್ವೇರ್ ವಾಣಿಜ್ಯ ಕಟ್ಟಡ, ಡಾ. ಯ್ಯೂಬಿ’ಸ್ ಓರಲ್ ಮತ್ತು ಮ್ಯಾಕ್ಸಿಲೋ ಫೇಶಿಯಲ್ ಕ್ಲಿನಿಕ್ ಉದ್ಘಾಟನೆ

ಯುಬಿ ಸ್ಕ್ವೇರ್ ವಾಣಿಜ್ಯ ಕಟ್ಟಡ, ಡಾ. ಯ್ಯೂಬಿ’ಸ್ ಓರಲ್ ಮತ್ತು ಮ್ಯಾಕ್ಸಿಲೋ ಫೇಶಿಯಲ್ ಕ್ಲಿನಿಕ್ ಉದ್ಘಾಟನೆ

Date:

ಉಡುಪಿ, ಡಿ.30: ಉಡುಪಿಯ ಹೃದಯಭಾಗದ ಕೋರ್ಟ್ ರಸ್ತೆಯಲ್ಲಿನ ಯುಬಿ ಸ್ಕ್ವೇರ್ ನೂತನ ವಾಣಿಜ್ಯ ಕಟ್ಟಡ ಹಾಗೂ ಡಾ. ಯ್ಯೂಬಿ’ಸ್ ಓರಲ್ ಮತ್ತು ಮ್ಯಾಕ್ಸಿಲೋ ಫೇಶಿಯಲ್ ಕ್ಲಿನಿಕ್ ಭಾನುವಾರ ಶುಭಾರಂಭಗೊಂಡಿತು. ಯುಬಿ ಸ್ಕ್ವೇರ್ ನೂತನ ವಾಣಿಜ್ಯ ಕಟ್ಟಡವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉಡುಪಿ ಹೃದಯಭಾಗದಲ್ಲಿ ಆರಂಭವಾಗಿರುವ ಈ ಕಟ್ಟಡ ಜನರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಉನ್ನತ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.

ಮ್ಯಾಕ್ಸಿಲೋ ಫೇಶಿಯಲ್ ಕ್ಲಿನಿಕ್‌ನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಆದರ್ಶ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಜಿ.ಎಸ್. ಚಂದ್ರಶೇಖರ್ ಅವರು, ಸಂಸ್ಕಾರವುಳ್ಳ ವೈದ್ಯರಿದ್ದರೆ ಆಸ್ಪತ್ರೆಗಳು ಎತ್ತರಕ್ಕೆ ಬೆಳೆಯುತ್ತವೆ. ವೈದ್ಯರು ರೋಗಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು. ಅದೇ ರೀತಿಯಲ್ಲಿ ಮಾನವ ಸಂಪನ್ಮೂಲ ಕೂಡ ಒಂದು ಆಸ್ಪತ್ರೆಗೆ ಬಹಳ ಮುಖ್ಯ. ಈ ಕ್ಲಿನಿಕ್ ಕೂಡ ಎಲ್ಲ ಸೌಲಭ್ಯಗಳ ಜೊತೆಗೆ ಗುಣಮಟ್ಟದ ಸೇವೆಯನ್ನು ನೀಡುವಂತಾಗಲಿ ಎಂದು ಹಾರೈಸಿದರು. ಉಡುಪಿ ನಗರಸಭೆ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಉಪಾಧ್ಯಕ್ಷರಾದ ರಜನಿ ಹೆಬ್ಬಾರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ ಹೇರೂರು, ಉಜ್ವಲ್ ಡೆವಲಪರ್ಸ್ ಮಾಲಕ ಯು. ಪುರುಷೋತ್ತಮ ಪಿ. ಶೆಟ್ಟಿ, ನ್ಯಾಯವಾದಿ ಮತ್ತು ನೋಟರಿ ಗಣೇಶ್ ಕುಮಾರ್ ಮಟ್ಟು, ಎ.ಜಿ. ಎಸೋಸಿಯೇಟ್ಸ್‌ನ ಗೋಪಾಲ ಭಟ್, ಯೋಗೀಶ್ಚಂದ್ರ ದಾರ್, ಕರ್ನಾಟಕ ಬ್ಯಾಂಕ್‌ನ ಪ್ರದೀಪ್ ಚಾರ್ಟರ್ಡ್ ಎಕೌಂಟೆಂಟ್ ರಾಘವೇಂದ್ರ ಎಮ್.ಎನ್. ಬೆಂಗಳೂರು, ಮನ್ಮಥ್ ರಾಜ್, ಎಲ್‌ಐಸಿಯ ನಿವೃತ್ತ ಹಿರಿಯ ವ್ಯವಸ್ಥಾಪಕರಾದ ದಿ. ಉಡುಪಿ ಭಾಸ್ಕ‌ರ್ ಅವರ ಪತ್ನಿ ಯಜ್ಞಾಭಾಸ್ಕರ್ ಮತ್ತು ಪುತ್ರಿ ಡಾ. ಯು.ಬಿ. ಶಬರಿ ಉಪಸ್ಥಿತರಿದ್ದರು. ಕಟ್ಟಡದ ಮಾಲೀಕ, ವೈದ್ಯ ಡಾ.ಭಾಸ್ಕರ್ ಎಂ.ಎನ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಕಿಶೋರ್ ಕಾರ್ಯಕ್ರಮ ನಿರೂಪಿಸಿದರು. ನೆಲ ಮಹಡಿ ಮತ್ತು ಎರಡು ಅಂತಸ್ತಿನ ಯುಬಿ ಸ್ವ್ಕೇರ್ ಕಟ್ಟಡವು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರ್ಕಳದ ಡಾ. ಅಭಿತ್ ಬಿ ಶೆಟ್ಟಿಗೆ ‘ವೈದ್ಯಕೀಯ ಉದ್ಯಮಿ ಪ್ರಶಸ್ತಿ’

ಕಾರ್ಕಳ, ಜ.7: ಉಡುಪಿ ಜಿಲ್ಲೆಯ ಕಾರ್ಕಳದ ಡಾ. ಅಭಿತ್ ಬಿ ಶೆಟ್ಟಿ...

ಕಿನ್ನಿಮುಲ್ಕಿ: ಜನಸಂಪರ್ಕ ಸಭೆ

ಉಡುಪಿ, ಜ.7: ಉಡುಪಿ ನಗರಸಭೆಯ ಕಿನ್ನಿಮುಲ್ಕಿ ವಾರ್ಡಿನಲ್ಲಿ ಶಾಸಕ ಯಶ್ಪಾಲ್ ಸುವರ್ಣ...

ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೋಟ, ಜ.7: ಫೆಬ್ರವರಿ 12 ರಿಂದ 15 ರವರೆಗೆ ಕೋಟದ ಹಾಡಿಕೆರೆ...

ಅಪ್ರೆಂಟಿಷಿಪ್ ತರಬೇತಿ: ಅರ್ಜಿ ಆಹ್ವಾನ

ಉಡುಪಿ, ಜ.7: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್.ಏ.ಎಲ್) ಬೆಂಗಳೂರಿನಲ್ಲಿ ಮಾರ್ಚ್ 2025...
error: Content is protected !!