Saturday, January 4, 2025
Saturday, January 4, 2025

ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಸಾಮಾಜಿಕ ಕಾರ್ಯ ಶ್ಲಾಘನೀಯ: ಡಾ.ಕೃಷ್ಣ ಕಾಂಚನ್

ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಸಾಮಾಜಿಕ ಕಾರ್ಯ ಶ್ಲಾಘನೀಯ: ಡಾ.ಕೃಷ್ಣ ಕಾಂಚನ್

Date:

ಕೋಟ, ಡಿ.29: ಇಲ್ಲಿನ ಪಾರಂಪಳ್ಳಿ ಪಡುಕರೆಯ ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ಪ್ರತಿವರ್ಷ ನಡೆಸಲ್ಪಡುವ ಅಶಕ್ತರಿಗಾಗಿ ನಮ್ಮ ಕಾರ್ಯಕ್ರಮ ಎನ್ನುವ ಶೀರ್ಷಿಕೆಯಡಿ ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿ ಯಕ್ಷಗಾನ ಕಾರ್ಯಕ್ರಮದ ವೇದಿಕೆಯಲ್ಲಿ ಸಾಧಕರಿಗೆ ಸನ್ಮಾನ, ಅಶಕ್ತರಿಗೆ ನೆರವು ಕಾರ್ಯಕ್ರಮ ಶನಿವಾರ ಪಾರಂಪಳ್ಳಿ ಪಡುಕರೆಯಲ್ಲಿ ಜರಗಿತು. ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಮಾತನಾಡುತ್ತಾ, ಸಂಘಸಂಸ್ಥೆಗಳ ಸಾಮಾಜಿಕ ಕಾರ್ಯ ಶ್ಲಾಘನೀಯ ಅಲ್ಲದೆ ಅಶಕ್ತರಿಗಾಗಿ ನೆರವು ಕಾರ್ಯಕ್ರಮ ವಿಶೇಷವಾದದ್ದು. ವಿನ್ ಲೈಟ್ ಸಾಮಾಜಮುಖಿ ಕಾರ್ಯಕ್ರಮ ಜನಮನ್ನಣೆ ಗಳಿಸಿದೆ ಎಂದರು.

ಯಕ್ಷಗಾನ ಕಾರ್ಯಕ್ರಮಕ್ಕೆ ಒಗ್ಗೂಡಿಸಿ ಮಿಗತೆ ಹಣವನ್ನು ಸ್ಥಳೀಯ ಅನಾರೋಗ್ಯ ಪೀಡಿತರಿಗೆ ಸುಮಾರು ಒಂದು ಲಕ್ಷ ರೂ ಹಣವನ್ನು ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಸಾಧಕರಾದ ಸಮಾಜ ಸೇವಕರಾದ ಮಂಜುನಾಥ ಉಪಾಧ್ಯ, ಮಹಮ್ಮದ್ ಆಸಿಫ್, ಜಾನಪದ ವಿಭಾಗದ ಗುಂಡು ಪೂಜಾರಿ, ಅಗ್ನಿಶಾಮಕ ದಳದಲ್ಲಿ ಮುಖ್ಯಮಂತ್ರಿ ಪದಕ ವಿಜೇತ ನಾಗೇಶ್ ಪೂಜಾರಿ, ಇಂಜಿನಿಯರಿಂಗ್ ರ್ಯಾಂಕ್ ವಿದ್ಯಾರ್ಥಿ ಶ್ರೀರಾಜ್ ಪೂಜಾರಿ ಇವರುಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕರಾದ ಗೀತಾ ಶಂಭು ಪೂಜಾರಿ, ರಾಜೇಶ್ ಉಪಾಧ್ಯಾಯ, ಪೆರ್ಡೂರು ಮೇಳದ ಮ್ಯಾನೇಜರ್ ಸುಬ್ರಹ್ಮಣ್ಯ ಶೆಟ್ಟಿ, ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಿರೀಶ್ ಪೂಜಾರಿ ಉಪಸ್ಥಿತರಿದ್ದರು. ಸ್ಪೋರ್ಟ್ಸ್ ಕ್ಲಬ್ ನ ದೇವೇಂದ್ರ ಶ್ರೀಯಾನ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿಯಲ್ಲಿ ‘ಚನ್ನಪಟ್ಟಣದ ಗೊಂಬೆ’ ತಯಾರಿಕೆಯ ಕಾರ್ಯಾಗಾರ

ಉಡುಪಿ, ಜ.4: ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು...

ಶೈಕ್ಷಣಿಕ ಪ್ರಗತಿ ಸಾಧಿಸುವಲ್ಲಿ ಸಾಕ್ಷರತಾ ಇಲಾಖೆಯ ಕಾರ್ಯ ಶ್ಲಾಘನೀಯ

ಮಣೂರು, ಜ.4: ಶಾಲೆಗಳಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುವಲ್ಲಿ ಸಾಕ್ಷರತಾ ಇಲಾಖೆ ಶೈಕ್ಷಣಿಕ...

ಪ್ರತಿಭಾ ಕಾರಂಜಿ: ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ

ಕೋಟ, ಜ.4: ಶ್ರೀ ದುರ್ಗಾ ಆಂಗ್ಲಮಾಧ್ಯಮ ಪ್ರೌಢಶಾಲೆ ಕೊಕ್ಕರ್ಣೆ ಇಲ್ಲಿ ನಡೆದ...

ರಥಬೀದಿ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ದಶಮ ಸಂಭ್ರಮಕ್ಕೆ ಚಾಲನೆ

ಮಂಗಳೂರು, ಜ.3: ಡಾ.ಪಿ ದಯಾನಂದ ಪೈ ಪಿ ಸತೀಶ ಪೈ ಸರ್ಕಾರಿ...
error: Content is protected !!