Thursday, December 12, 2024
Thursday, December 12, 2024

ತೆಂಕನಿಡಿಯೂರು ಕಾಲೇಜು: ಮಾನವ ಹಕ್ಕುಗಳ ದಿನಚಾರಣೆ

ತೆಂಕನಿಡಿಯೂರು ಕಾಲೇಜು: ಮಾನವ ಹಕ್ಕುಗಳ ದಿನಚಾರಣೆ

Date:

ಮಲ್ಪೆ, ಡಿ.10: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಐಕ್ಯೂಎಸಿ, ರಾಜ್ಯಶಾಸ್ತç ವಿಭಾಗ, ಎಂ.ಎಸ್.ಡಬ್ಲ್ಯೂ ಸ್ನಾತಕೋತ್ತರ ವಿಭಾಗ ಹಾಗೂ ಯೂತ್ ರೆಡ್‌ಕ್ರಾಸ್ ಘಟಕಗಳ ಜಂಟಿ ಆಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ್ ನೀಲಾವರ, ಮಾನವ ಹಕ್ಕುಗಳ ಪರಿಕಲ್ಪನೆಯ ಉಗಮ ಬೆಳವಣಿಗೆಗಳ ಜೊತೆಗೆ ಮಾನವ ಹಕ್ಕುಗಳ ಉಲ್ಲಂಘನೆಯ ನಿದರ್ಶನಗಳನ್ನು ಪ್ರಸ್ತುತಪಡಿಸಿದರು. ಪಾಶ್ಚಿಮಾತ್ಯರ ವ್ಯಕ್ತಿಗತವಾದ ಹಕ್ಕುಗಳ ಮತ್ತು ಪೌರಾತ್ಯದ ಸಾಮುದಾಯಿಕ ಹಕ್ಕುಗಳ ಮಹತ್ವವನ್ನು ಪಾಶ್ಚಿಮಾತ್ಯ ಮತ್ತು ಪೌರಾತ್ಯ ಚಿಂತಕರ ಚಿಂತನೆಗಳ ಮೂಲಕ ಪ್ರಸ್ತುತ ಪಡಿಸಿದರು. ಮುಖ್ಯ ಅತಿಥಿಗಳಾಗಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ ಕರಬ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಮಾನವ ಹಕ್ಕುಗಳ ಬಗ್ಗೆ ಜಾಗೃತಿಯ ಜೊತೆಗೆ ಅದರಂತೆ ಬದುಕಬೇಕೆಂದರು.

ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ, ಮಾನವ ಹಕ್ಕುಗಳ ಜಾಗೃತಿ ಮೂಡಿಸಲು ಯುವಜನತೆ ಸಕ್ರೀಯರಾಗಬೇಕೆಂದರು. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಘು ನಾಯ್ಕ, ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಎಂ.ಎಸ್.ಡಬ್ಲ್ಯೂ ಮುಖ್ಯಸ್ಥರಾದ ಸುಷ್ಮಾ ಟಿ., ಶೈಕ್ಷಣಿಕ ಸಲಹೆಗಾರರಾದ ಡಾ. ಶ್ರೀಧರ ಭಟ್, ರವಿ ಎಸ್., ರಾಜೇಂದ್ರ ಮೊಗವೀರ, ಡಾ. ಪ್ರಮೀಳಾ ಜೆ. ವಾಸ್, ಸುಮತಿ ಬಿಲ್ಲವ, ಅಮಿತಾ ಇನ್ನಿತರರು ಉಪಸ್ಥಿತರಿದ್ದರು. ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳಾದ ಶಿವಾನಿ ಸ್ವಾಗತಿಸಿ, ಗೌತಮಿ ವಂದಿಸಿದರು. ಮಹಮ್ಮದ್ ಸುಹಾದ್ ವಿಶ್ವ ಮಾನವ ಹಕ್ಕುಗಳ ಘೋಷಣೆಯ ವಿಧಿಗಳನ್ನು ವಾಚಿಸಿದರು. ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಡಿತ್ ಎಂ ವೆಂಕಟೇಶ್ ಕುಮಾರ್‌ಗೆ ‘ಆಳ್ವಾಸ್ ವಿರಾಸತ್-2024’ ಪ್ರಶಸ್ತಿ ಪ್ರದಾನ

ವಿದ್ಯಾಗಿರಿ, ಡಿ.12: ಬಡವರು, ದೀನ ದಲಿತರು, ಅಂಗವಿಕಲರಿಗಾಗಿ ಬದುಕು ಮುಡುಪಾಗಿಟ್ಟಿದ್ದ ಪಂಡಿತ...

ಕನ್ನಡ ಭವನ ಕಾಸರಗೋಡಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆಯಾಗಿ ರೇಖಾ ಸುದೇಶ್ ರಾವ್ ಆಯ್ಕೆ

ಉಡುಪಿ, ಡಿ.12: ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ದಕ್ಷಿಣ ಕನ್ನಡ...

ಗೋಮಾಳ ನಿಯಮ ಬದಲಾವಣೆ ಸಾಧ್ಯವಿಲ್ಲ: ಕೃಷ್ಣ ಬೈರೇಗೌಡ

ಬೆಳಗಾವಿ, ಡಿ.11: ಸರ್ವೋಚ್ಚ ನ್ಯಾಯಾಲಯ 3 ಪ್ರಕರಣಗಳಲ್ಲಿ ಸ್ಪಷ್ಟವಾಗಿ ಗೋಮಾಳ ಜಮೀನನ್ನು...

ಬಗರ್ ಹುಕುಂ ಅರ್ಜಿ ಪುನರ್ ಪರಿಶೀಲನೆ

ಬೆಳಗಾವಿ, ಡಿ.11: ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಲು ನಮೂನೆ 50, 53,...
error: Content is protected !!