ಕೋಟ, ಡಿ.9: ಕೆರೆ ದೀಪೋತ್ಸವ ಎನ್ನುವ ಧಾರ್ಮಿಕ ಕಾರ್ಯಕ್ರಮದ ಮೂಲಕ ಯುವ ಪೀಳಿಗೆಯಲ್ಲಿ ಧಾರ್ಮಿಕ ಭಾವನೆ ಬೆಳೆಸುತ್ತಿರುವ ಗಿರಿ ಫ್ರೆಂಡ್ಸ್ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೆ.ತಾರಾನಾಥ ಹೊಳ್ಳ ಹೇಳಿದರು. ಗಿರಿ ಫ್ರೆಂಡ್ಸ್ ಚಿತ್ರಪಾಡಿ ಸಂಸ್ಥೆ ಹಮ್ಮಿಕೊಂಡ ಚಿತ್ರಪಾಡಿಯ ಕೆರೆ ದೀಪೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ತಾರಾನಾಥ ಹೊಳ್ಳ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಚಿತ್ರಪಾಡಿ ಶ್ರೀನಿವಾಸ್ ಸೋಮಾಯಾಜಿ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವಿಶ್ವನಾಥ್ ನಾವಡ ವಹಿಸಿದ್ದರು. ವೇದಿಕೆಯಲ್ಲಿ ಸ್ಥಾಪಕಾಧ್ಯಕ್ಷ ಸತ್ಯನಾರಾಯಣ ನಾಯಿರಿ, ಗೌರವಾಧ್ಯಕ್ಷರಾದ ಮಂಜುನಾಥ್ ಆಚಾರ್, ಸಂಸ್ಥೆಯ ಸಂಚಾಲಕರಾದ ರವಿ ಪೂಜಾರಿ, ಸಂಸ್ಥೆಯ ಲೆಕ್ಕಪರಿಶೋಧಕ ಮಾಧವ ಪೈ, ಕಾರ್ಯದರ್ಶಿ ಹರೀಶ ಆಚಾರ್, ಕೋಶಾಧಿಕಾರಿ ನಾಗೇಂದ್ರ ಆಚಾರ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿ. ಕೆ ಅಸೋಸಿಯೇಟ್ಸ್ನ ಮಾಲಕರದ ರಾಮಚಂದ್ರ ಆಚಾರ್ ಸಾರಥ್ಯದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಸೃಷ್ಟಿ ನಾವಡ ಮತ್ತು ಸಾಹಿತ್ಯ ನಾವಡ ಪ್ರಾರ್ಥನೆಗೈದರು. ಆದಿತ್ಯ ಐತಾಳ್ ಕಾರ್ಯಕ್ರಮ ನಿರೂಪಿಸಿದರು. ಗಿರಿ ಫ್ರೆಂಡ್ಸ್ ಚಿತ್ರಪಾಡಿ ಸಂಸ್ಥೆಯ ಎಲ್ಲಾ ಸದಸ್ಯರು ಸಹಕರಿಸಿದರು.
ಗಿರಿ ಫ್ರೆಂಡ್ಸ್ ಕಾರ್ಯ ಶ್ಲಾಘನೀಯ: ಕೆ.ತಾರಾನಾಥ್ ಹೊಳ್ಳ
ಗಿರಿ ಫ್ರೆಂಡ್ಸ್ ಕಾರ್ಯ ಶ್ಲಾಘನೀಯ: ಕೆ.ತಾರಾನಾಥ್ ಹೊಳ್ಳ
Date: