Sunday, November 17, 2024
Sunday, November 17, 2024

ತೆಂಕನಿಡಿಯೂರು ಕಾಲೇಜು: ಬಿರ್ಸಾ ಮುಂಡಾ ಜನ್ಮದಿನಾಚರಣೆ

ತೆಂಕನಿಡಿಯೂರು ಕಾಲೇಜು: ಬಿರ್ಸಾ ಮುಂಡಾ ಜನ್ಮದಿನಾಚರಣೆ

Date:

ಉಡುಪಿ, ನ.16: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಐಕ್ಯೂಎಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮತ್ತು ನೆಹರೂ ಯುವ ಕೇಂದ್ರ ಉಡುಪಿ ಹಾಗೂ ಚೈತನ್ಯ ಯುವಕ ಮಂಡಲ (ರಿ) ನೀಲಾವರ ಇವರ ಸಹಯೋಗದಲ್ಲಿ ಬಿರ್ಸಾ ಮುಂಡಾ ಗೌರವ ದಿನಸ ಆಚರಿಸಲಾಯಿತು. ಬಿರ್ಸಾ ಮುಂಡಾ ಜೀವನ ಮತ್ತು ಸಾಧನೆ ಕುರಿತ ಮಾತನಾಡಿದ ಸಂಪನ್ಮೂಲ ವ್ಯಕ್ತಿ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ ನೀಲಾವರ, ಬಹಳ ವೈವಿಧ್ಯಮಯ ಮತ್ತು ವಿಶ್ವದ ಬಲುದೊಡ್ಡ ಸ್ವಾತಂತ್ರ್ಯ ಸಂಗ್ರಾಮವಾದ ಭಾರತ ರಾಷ್ಟ್ರೀಯ ಹೋರಾಟದಲ್ಲಿ ಕಡೆಗಣಿಸಲ್ಪಟ್ಟ ಸಮುದಾಯಗಳ ಕೊಡುಗೆಗಳನ್ನು ಗುರುತಿಸುವ ಮತ್ತು ಪರಿಚಯಿಸುವ ಅವಶ್ಯಕತೆಯಿದೆ. ದೇಸಿ ಸಂಸ್ಕೃತಿ, ನೆಲ, ಜಲ ಮತ್ತು ಮಣ್ಣಿಗಾಗಿ ಬಿರ್ಸಾ ಮುಂಡಾ ಕೊಡುಗೆ ಅಪಾರ. ತನ್ನದೇ ಮಾದರಿ ಮತ್ತು ಧರ್ಮದ ಮೂಲಕ ಬ್ರಿಟೀಷ್‌ರಾಜ್‌ಗೆ ಪ್ರತಿಯಾಗಿ ಮುಂಡಾರಾಜ್ ಸ್ಥಾಪಿಸಿದ ಬಿರ್ಸಾಮುಂಡಾ ಕುರಿತು ಯುವಜನತೆ ಅನುಕರಿಸಬೇಕಾದ್ದು ಬಹಳಷ್ಟಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಂಶುಪಾಲರಾದ ನಿತ್ಯಾನಂದ ವಿ. ಗಾಂವಕರ ವಹಿಸಿದ್ದರು. ಎನ್. ಎಸ್. ಎಸ್. ಯೋಜನಾಧಿಕಾರಿ ಡಾ. ರಘು ನಾಯ್ಕ ಕಾರ್ಯಕ್ರಮದ ಔಚಿತ್ಯ ತಿಳಿಸಿ ಅತಿಥಿಗಳನ್ನು ಸ್ವಾಗತಿಸಿದರು. ಎನ್.ಎಸ್.ಎಸ್. ವಿದ್ಯಾರ್ಥಿನಿ ಸೋನಿಯಾ ವಂದನಾರ್ಪಣೆಗೈದರು. ಬೆನಾಸಿರ್ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್. ಘಟಕ-2ರ ಯೋಜನಾಧಿಕಾರಿ ಮಮತಾ, ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಶೈಕ್ಷಣಿಕ ಸಲಹೆಗಾರರಾದ ಡಾ. ಶ್ರೀಧರ ಭಟ್, ವಾಣಿಜ್ಯಶಾಸ್ತ್ರ ಮುಖ್ಯಸ್ಥರಾದ ಬಿಂದು ಟಿ., ರಾಜ್ಯಶಾಸ್ತ್ರ ಉಪನ್ಯಾಸಕಿ ಆರತಿ ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಂಡಾ ಸಮುದಾಯ ಸೇರಿದ ವಿದ್ಯಾರ್ಥಿಗಳ ಜೊತೆಗೆ ಎನ್.ಎಸ್.ಎ. ಹಾಗೂ ಚೈತನ್ಯ ಯುವಕ ಮಂಡಲ (ರಿ) ನೀಲಾವರ ಇದರ ಸದಸ್ಯರು ಭಾಗವಹಿಸಿದರು. ಬಿರ್ಸಾ ಮುಂಡಾ ಭಾವಚಿತ್ರಕ್ಕೆ ಹಾರಾರ್ಪಣೆಗೈದು ಗೌರವಿಸಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಮೂರ್ತದಿಂದ ಮೂರ್ತದಡೆಗೆ ನಮ್ಮನ್ನು ಕೊಂಡೊಯ್ಯುವುದೇ ಕವನ: ಡಾ. ಮಾಧವಿ ಭಂಡಾರಿ

ಉಡುಪಿ, ನ.16: ಅಮೂರ್ತದಿಂದ ಮೂರ್ತದಡೆಗೆ ನಮ್ಮನ್ನು ಕೊಂಡೊಯ್ಯುವುದೇ ಕವನ. ಕವಿಗಳು ತಮ್ಮ...

ಜ್ಞಾನದ ಜೊತೆಗೆ ಕ್ರೀಡೆಗೂ ಪ್ರೋತ್ಸಾಹ ನೀಡುತ್ತಿರುವ ಜ್ಞಾನಸುಧಾ: ಅಭಿನ್ ದೇವಾಡಿಗ

ಮಣಿಪಾಲ, ನ.16: ಶಿಕ್ಷಣ ಮತ್ತು ಕ್ರೀಡೆಗೆ ಸಮಾನ ಆದ್ಯತೆ ನೀಡಬೇಕು. ಕ್ರೀಡೆ...

ಸರಸ್ವತಿ ವಿದ್ಯಾಲಯದಲ್ಲಿ ಆಡುಂಬೊಲ ಕಾರ್ಯಕ್ರಮ

ಗಂಗೊಳ್ಳಿ, ನ.16: ಗ್ರಾಮೀಣ ಕ್ರೀಡೆಗಳು ಮಕ್ಕಳಲ್ಲಿ ಆರೋಗ್ಯವನ್ನು ಮತ್ತು ಸೃಜನಶೀಲತೆಯನ್ನು ಹೆಚ್ಚಿಸುವಲ್ಲಿ...
error: Content is protected !!