Friday, November 15, 2024
Friday, November 15, 2024

ಅಪರೂಪದ ಲಿಂಗ ಮುದ್ರೆ ಕಲ್ಲು ಪತ್ತೆ

ಅಪರೂಪದ ಲಿಂಗ ಮುದ್ರೆ ಕಲ್ಲು ಪತ್ತೆ

Date:

ಉಡುಪಿ, ನ.15: ಇತಿಹಾಸ ಮತ್ತು ಪುರಾತತ್ವ ಶಾಸ್ತ್ರಜ್ಞ ಹಾಗೂ ಶಿವಮೊಗ್ಗದ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆಯ ಅಧ್ಯಕ್ಷ ಡಾ. ಎಸ್‌.ಜಿ.ಸಾಮಕ್ ಅವರು ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಸಾಸ್ತಾನ -ಪಾಂಡೇಶ್ವರ ಗ್ರಾಮದ ಚಡಗರ ಕೇರಿಯ ಶ್ರೀ ವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಅಪರೂಪದ ಲಿಂಗ ಮುದ್ರೆ ಕಲ್ಲನ್ನು ಪತ್ತೆ ಹಚ್ಚಿದ್ದಾರೆ. ಸುಮಾರು 14 15ನೇ ಶತಮಾನಕ್ಕೆ ಸೇರಿರುವ ಕಣ ಶಿಲೆಯ ಈ ಕಲ್ಲು ಆಯತಾಕಾರದಲ್ಲಿದೆ (34 ಸೆಂಟಿಮೀಟರ್ ಅಗಲ ಹಾಗೂ 19 ಸೆಂಟಿಮೀಟರ್ ದಪ್ಪ). ಇದರ ಉದ್ದ 94 ಸೆಂಟಿಮೀಟರ್. ಕಲ್ಲಿನ ಮುಂಭಾಗದ ಅಗಲ ಮುಖದ ಮೇಲೆ ಸೂರ್ಯ ಚಂದ್ರರ ಸಹಿತ ಶಿವಲಿಂಗದ ಉಬ್ಬು ಶಿಲ್ಪವಿದೆ. ಇದರ ಬಲಬದಿಯ ಸಣ್ಣ ಮುಖದ ಮೇಲೆ 55 ಸೆಂಟಿಮೀಟರ್ ಉದ್ದ ಹಾಗೂ 5 ಸೆಂಟಿಮೀಟರ್ ಅಗಲದ ಅಳತೆ ಕೊಲಿನ ಉಬ್ಬು ಶಿಲ್ಪವಿದೆ.

ಹಿಂದೆ ಭೂದಾನ ನೀಡುವ ಸಂದರ್ಭದಲ್ಲಿ ಲಿಂಗ ಮುದ್ರೆ ಅಥವಾ ವಾಮನ ಮುದ್ರೆ ಕಲ್ಲುಗಳನ್ನು ನಿಲ್ಲಿಸುವ ಪರಿಪಾಠವಿತ್ತು. ಕರ್ನಾಟಕದಲ್ಲಿ ಈ ರೀತಿಯ ನೂರಾರು ಕಲ್ಲುಗಳು ದೊರೆತಿದ್ದರೂ ಅಳತೆ ಕೊಲಿನ ಸಹಿತ ಇರುವ ಲಿಂಗ ಮುದ್ರೆ ಕಲ್ಲು ಇಲ್ಲಿ ದೊರೆತಿರುವುದು ರಾಜ್ಯದಲ್ಲೇ ಪ್ರಪ್ರಥಮ. ಹೆಚ್ಚಿನ ಅಧ್ಯಯನ ಮುಂದುವರೆದಿದೆ. ಈ ಕ್ಷೇತ್ರ ಕಾರ್ಯದಲ್ಲಿ ಪಿ.ರಾಮಕೃಷ್ಣ ಚಡಗ, ಅಧ್ಯಕ್ಷರು, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸೇವಾ ಸಂಘ(ರಿ), ಶ್ರೀ ವಿನಾಯಕ ದೇವಸ್ಥಾನ ಚಡಗರ ಮಠ, ಸಾಸ್ತಾನ- ಪಾಂಡೇಶ್ವರ, ಕೋಶಾಧಿಕಾರಿಗಳು ಪಿ.ಸಿ.ಹೊಳ್ಳ ಹಾಗೂ ಪಿ. ಹೆಚ್. ಅರವಿಂದ ಶರ್ಮ, ಮಾಜಿ ಅಧ್ಯಕ್ಷರು, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಇವರುಗಳು ಮಾಹಿತಿ ನೀಡಿ ಸಹಕರಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ಜಿಲ್ಲೆಯ ವಿವಿಧೆಡೆ ಮಳೆಯ ಅಬ್ಬರ

ಉಡುಪಿ, ನ.15: ಉಡುಪಿ ಜಿಲ್ಲೆಯ ವಿವಿಧೆಡೆ ಗುರುವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಬಿಟ್ಟು...

ಗಣಿತ ಎಂದರೆ ಸತ್ಯ, ಅದುವೇ ಜೀವನ ಆಗಲಿ: ಡಾ. ಸುಧಾಕರ್ ಶೆಟ್ಟಿ

ಕಾರ್ಕಳ, ನ.15: ಗಣಿತವೇ ಸತ್ಯ, ಅದು ತರ್ಕಕ್ಕೆ ನಿಕಶವಾದದ್ದು. ಗಣಿತವೇ ಬದುಕು....

ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಶಾಸಕ ಯಶ್ಪಾಲ್ ಸುವರ್ಣ, ಜಿ. ಪಂ. ಸಿ.ಇ.ಒ. ಭೇಟಿ

ಉಡುಪಿ, ನ.15: ಉಡುಪಿ ನಗರದ ಹೃದಯ ಭಾಗದಲ್ಲಿರುವ ಜಿಲ್ಲೆಯ ಏಕೈಕ ಬಾಲಕಿಯರ...

ತೆಂಕನಿಡಿಯೂರು ಕಾಲೇಜಿನಲ್ಲಿ ಗ್ರಂಥಾಲಯ ಸಪ್ತಾಹ ಉದ್ಘಾಟನೆ

ಉಡುಪಿ, ನ.15: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ...
error: Content is protected !!