ಉಡುಪಿ, ನ.13: ಅಸಂಘಟಿತ ವಲಯವಾದ ಮೀನುಗಾರಿಕೆ ವಲಯವನ್ನು ಸಂಘಟಿತ ವಲಯವಾಗಿ ರೂಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ-ಮತ್ಸ್ಯ ಕಿಸಾನ್ ಸಮೃದ್ಧಿ ಸಹ ಯೋಜನೆಯಡಿ ಮೀನುಗಾರರು, ಮೀನು ಕೃಷಿಕರು, ಮೀನು ಕಾರ್ಮಿಕರು, ಮೀನು ಮಾರಾಟಗಾರರು, ಮೀನು ಸಾಗಾಣಿಕೆ ಮಾಡುವವರು, ಮೀನು ಸಂಸ್ಕರಣಾ ಘಟಕಗಳು, ಮೀನು ಆಧಾರಿತ ಸೂಕ್ಷ್ಮ ಅಥವಾ ಸಣ್ಣ ಉದ್ಯಮಗಳು, ಐಸ್ ಪೂರೈಕೆದಾರರು ಹಾಗೂ ಮೀನುಗಾರಿಕೆ ವಲಯಕ್ಕೆ ಸಂಬಂಧಿಸಿದ ಇತರೆ ಚಟುವಟಿಕೆಗಳಲ್ಲಿ ನಿರತರಾದ ಪ್ರತಿಯೋರ್ವರೂ ನ್ಯಾಶನಲ್ ಫಿಶರೀಸ್ ಡಿಜಿಟಲ್ ಪ್ಲಾಟ್ ಫಾರ್ಮ್ (NFDP) ಪೋರ್ಟಲ್ ನಲ್ಲಿ ನೇರವಾಗಿ ಅಥವಾ ಮೀನುಗಾರಿಕೆ ಸಹಕಾರಿ ಸಂಘಗಳ ಮೂಲಕ ಅಥವಾ ಸಾಮಾನ್ಯ ಸೇವಾ ಕೇಂದ್ರದ (CSC) ಮೂಲಕ ಶುಲ್ಕ ರಹಿತವಾಗಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ನ್ಯಾಶನಲ್ ಫಿಶರೀಸ್ ಡಿಜಿಟಲ್ ಪ್ಲಾಟ್ ಫಾರ್ಮ್ (NFDP) ಪೋರ್ಟಲ್ ನಲ್ಲಿ ನೋಂದಾಯಿಸಲು ಹೆಚ್ಚುವರಿ ಶುಲ್ಕ ವಿಧಿಸುವ/ ವಿಧಿಸಿರುವ/ ವಿಧಿಸುತ್ತಿರುವ ಮೀನುಗಾರಿಕೆ ಸಹಕಾರಿ ಸಂಘಗಳು ಹಾಗೂ ಸಾಮಾನ್ಯ ಸೇವಾ ಕೇಂದ್ರಗಳ ಮೇಲೆ ಉಡುಪಿ, ಕುಂದಾಪುರ ಮತ್ತು ಕಾರ್ಕಳ ಮೀನುಗಾರಿಕೆ ಸಹಾಯಕ ನಿರ್ದೇಶಕರುಗಳ ಕಾನೂನು ಕ್ರಮ ಜರುಗಿಸುವಂತೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.