Tuesday, November 5, 2024
Tuesday, November 5, 2024

ಬೇಡಿಕೆಗಳನ್ನು ಸಲ್ಲಿಸಲು ಅವಕಾಶ

ಬೇಡಿಕೆಗಳನ್ನು ಸಲ್ಲಿಸಲು ಅವಕಾಶ

Date:

ಉಡುಪಿ, ನ.4: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ 2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿ ಪ್ರಕ್ರಿಯೆಯು ನವೆಂಬರ್ 2024ರ ಅಂತ್ಯದವರೆಗೆ ನಡೆಯುತ್ತಿದ್ದು, ಗ್ರಾಮೀಣ ಪ್ರದೇಶದ ಜನರು ಕೂಡಲೇ ತಮಗೆ ಅಗತ್ಯವಾದ ವೈಯುಕ್ತಿಕ ಅಥವಾ ಸಾರ್ವಜನಿಕ ಕಾಮಗಾರಿಗಳ ಬೇಡಿಕೆಗಳನ್ನು ತಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಥವಾ ವೆಬ್‌ಸೈಟ್ https://mgnrega.karnataka.gov.in ನಲ್ಲಿ ಆನ್‌ಲೈನ್ ಮೂಲಕ ತಮ್ಮ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದ ಅರ್ಹ ಫಲಾನುಭವಿಗಳು ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ಗೊಬ್ಬರ ಗುಂಡಿ, ಎರೆಹುಳು ಗೊಬ್ಬರ ಘಟಕ, ನೀರಾವರಿ ಬಾವಿ, ದನದ ಹಟ್ಟಿ, ಕೋಳಿ ಶೆಡ್, ಹಂದಿ ಶೆಡ್, ಕೊಳವೆ ಬಾವಿ ಜಲ ಮರುಪೂರಣ ಘಟಕ, ಇಂಗು ಗುಂಡಿ, ಬಯೋ ಗ್ಯಾಸ್, ಬಚ್ಚಲು ಗುಂಡಿ, ಅಡಿಕೆ, ತೆಂಗು, ಕಾಳುಮೆಣಸು, ಕೊಕ್ಕೋ, ಮಲ್ಲಿಗೆ, ಗೇರು, ಡ್ರ‍್ಯಾಗನ್ ಫ್ರೂಟ್, ರಾಮ್ ಭೂತಾನ್, ಮಾವು, ವೀಳ್ಯದೆಲೆ ಬೆಳೆಯಲು ಮತ್ತು ಇತರೆ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಿ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹಿರಿಯಡಕ – ಗುಡ್ಡೆಯಂಗಡಿ – ಕಾರ್ಕಳ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಉಡುಪಿ, ನ.5: ಹಿರಿಯಡಕ - ಗುಡ್ಡೆಯಂಗಡಿ - ಕಾರ್ಕಳ ರಸ್ತೆ ಅಭಿವೃದ್ಧಿಗೆ...

ಇಂಡೋನೇಷ್ಯಾ: ಜ್ವಾಲಾಮುಖಿ ಸ್ಫೋಟಕ್ಕೆ 10 ಸಾವು

ಯು.ಬಿ.ಎನ್.ಡಿ., ನ.4: ಇಂಡೋನೇಷ್ಯಾದ ಪೂರ್ವ ಭಾಗದಲ್ಲಿ ಸರಣಿ ಜ್ವಾಲಾಮುಖಿ ಸ್ಫೋಟಗಳು ಸಂಭವಿಸಿ...

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಒಂದೇ ವರ್ಷದಲ್ಲಿ 25 ಮಿಲಿಯನ್ ಅರ್ಜಿ

ನವದೆಹಲಿ, ನ.4: ಪಿಎಂ ವಿಶ್ವಕರ್ಮ ಯೋಜನೆ ಪ್ರಾರಂಭವಾದಾಗಿನಿಂದ 25 ದಶಲಕ್ಷಕ್ಕೂ ಹೆಚ್ಚು...

ಕೆನಡಾದ ಹಿಂದೂ ಮಂದಿರದಲ್ಲಿ ಪ್ರತ್ಯೇಕತಾವಾದಿಗಳ ಹಿಂಸಾಚಾರವನ್ನು ಖಂಡಿಸಿದ ಭಾರತ

ನವದೆಹಲಿ, ನ.4: ಕೆನಡಾದ ಒಂಟಾರಿಯೊದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದಲ್ಲಿ ಉಗ್ರರು...
error: Content is protected !!