Wednesday, October 30, 2024
Wednesday, October 30, 2024

ಹೋಂ ಡಾಕ್ಟರ್ ಫೌಂಡೇಶನ್: ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಣೆ

ಹೋಂ ಡಾಕ್ಟರ್ ಫೌಂಡೇಶನ್: ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಣೆ

Date:

ಉಡುಪಿ, ಅ.30: ಹೋಂ ಡಾಕ್ಟರ್ ಫೌಂಡೇಶನ್ ಇದರ ದಶಮಾನೋತ್ಸವ ಸಂಭ್ರಮ ಮತ್ತು ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಣೆ ಕಾರ್ಯಕ್ರಮವು ಕೊಳಲಗಿರಿ ಸಂತೆ ಮೈದಾನದಲ್ಲಿ ನಡೆಯಿತು. ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜ ಸೇವೆ ಮಾಡುವಾಗ ಅವಮಾನ ಮತ್ತು ಪ್ರಶಂಸೆ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವನೆ ನಮ್ಮಲ್ಲಿರಬೇಕು. ಇಂದು ಪ್ರತಿಯೊಂದು ಕೆಲಸ ಸರ್ಕಾರ ಮಾಡಬೇಕೆನ್ನುವ ಮನೋಭಾವನೆ ಬಿಟ್ಟು ಸಮಾಜಕ್ಕಾಗಿ ಏನಾದರೂ ಉತ್ತಮ ಕೆಲಸ ಮಾಡುವ ಮನಸ್ಸು ಮಾಡಬೇಕಾಗಿದೆ. ಯುವ ಜನಾಂಗ ಇಂದು ಹಲವಾರು ಕಾರಣದಿಂದ ವಿವಿಧ ರೀತಿಯ ಸಮಸ್ಯೆಯನ್ನು ಎದುರಿಸುವ ಸ್ಥಿತಿಯಲ್ಲಿ ಅವರನ್ನು ತಿದ್ದಿ ಸಮಾಜಕ್ಕೆ ಉತ್ತಮ ಪ್ರಜೆಯಾಗಿ ಮಾಡುವ ಜವಾಬ್ದಾರಿ ನಮ್ಮದಾಗಬೇಕು. ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಮತ್ತು ಸಂಸ್ಕೃತಿ ತಿಳಿಸುವ ಅಗತ್ಯತೆಯಿದೆ ಎಂದರು.

ಸಭಾಧ್ಯಕ್ಷತೆಯನ್ನು ಹೋಂ ಡಾಕ್ಟರ್ ಫೌಂಡೇಶನ್ ಇದರ ಪ್ರವರ್ತಕರಾದ ಡಾ. ಶಶಿಕಿರಣ್ ಶೆಟ್ಟಿ ವಹಿಸಿ ಸಂಸ್ಥೆಯು ನಡೆದು ಬಂದ ಹಾದಿಯ ಬಗ್ಗೆ ತಿಳಿಸಿದರು. ಅಸಹಾಯಕರಿಗೆ ದಿನಸಿ ಸಾಮಗ್ರಿ ಮತ್ತು ರೋಗಿಗಳಿಗೆ ಸುಮಾರು 3.50 ಲಕ್ಷ ರೂ. ಸಹಾಯಧನ ವಿತರಿಸಲಾಯಿತು. ಡಾ. ಶಶಿಕಿರಣ್ ಶೆಟ್ಟಿ ಬರೆದ ಬದುಕು ಬದಲಿಸುವ ಕಥೆಗಳು ಭಾಗ-3 ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ಡಾ.ಸುಮಾ ಶೆಟ್ಟಿ, ಬಂಗಾರಪ್ಪ, ರಾಘವೇಂದ್ರ ಪೂಜಾರಿ, ಸುಜಯ ಶೆಟ್ಟಿ, ಉದಯ ನಾಯ್ಕ್, ರಾಘವೇಂದ್ರ ಕರ್ವಾಲು, ರೋಶನ್ ಡಿಸೋಜ ಉಪಸ್ಥಿತರಿದ್ದರು. ಸಂಸ್ಥೆಯ ಫಲಾನುಭವಿಗಳಾದ ಸುಮತಿ ಅಜ್ಜಿ, ಮಧುಸೂಧನ ಭಟ್, ಮತ್ತಿತರು ಉಪಸ್ಥಿತರಿದ್ದರು. ಅಸ್ತಿಮಜ್ಜೆ ಚಿಕಿತ್ಸೆಗೆ ಒಳಗಾದ ದಿನೇಶ್ ರವರ ಚಿಕಿತ್ಸೆ ಮಾಡಿದ ಕೆ.ಎಂ.ಸಿ ಮಣಿಪಾಲದ ವೈದ್ಯರಾದ ಡಾ.ವಾಸುದೇವ ಭಟ್ ರವರನ್ನು ಸನ್ಮಾನಿಸಲಾಯಿತು. ಉಚಿತ ಅಂಬುಲೆನ್ಸ್ ಸೇವೆಗೆ ಸಹಕರಿಸಿದವರನ್ನು ಗೌರವಿಸಲಾಯಿತು. ಪ್ರತಿಭಾನ್ವಿತ ಬಾಲ ಸಂಗೀತ ಕಲಾವಿದೆಗೆ ನೆರವಾಗಲು ಅಂಡ್ರಾಯಿಡ್ ಮೊಬೈಲ್ ನೀಡಲಾಯಿತು. ಶಾರದಾ ಅಂಧ ಕಲಾವಿದ ತಂಡದಿಂದ ಸಂಗೀತ ಕಾರ್ಯ೯ಕ್ರಮ ನಡೆಯಿತು. ಸಂದೀಪ್ ಶೆಟ್ಟಿ ಮತ್ತು ಯೋಗಿಶ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವ ಪಾರ್ಶ್ವವಾಯು ದಿನಾಚರಣೆ

ಉಡುಪಿ, ಅ.30: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ...

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಿ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ

ಉಡುಪಿ, ಅ.30: ಜಿಲ್ಲೆಯಲ್ಲಿ ನಡೆಯುತ್ತಿರುವ ನೂತನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳು,...

ಎನ್.ಎಸ್.ಎಸ್ ಘಟಕ ಉದ್ಘಾಟನೆ

ಕಟಪಾಡಿ, ಅ.30: ಪಾಜಕ ಶ್ರೀ ವಿಶ್ವೇಶತೀರ್ಥ ಮಹಾವಿದ್ಯಾಲಯ ಪದವಿ ಕಾಲೇಜಿನಲ್ಲಿ ೨೦೨೪--೨೫...
error: Content is protected !!