Tuesday, January 7, 2025
Tuesday, January 7, 2025

ಹಿರಿಯಡ್ಕ: ರಸ್ತೆ ದುರಸ್ತಿಗೆ ಆಗ್ರಹ

ಹಿರಿಯಡ್ಕ: ರಸ್ತೆ ದುರಸ್ತಿಗೆ ಆಗ್ರಹ

Date:

ಹಿರಿಯಡ್ಕ, ಅ.28: ಉಡುಪಿ-ಬೈಲೂರು-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಹಿರಿಯಡಕದಿಂದ ಗುಡ್ಡೆಯಂಗಡಿವರೆಗೆ ಐದಾರು ಕಿಲೋಮೀಟರ್ ರಸ್ತೆಯಲ್ಲಿ ಬೃಹದಾಕಾರದಲ್ಲಿ ಗುಂಡಿಗಳು
ಬಾಯ್ತೆರೆದುಕೊಂಡು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಟೆಂಡರ್‌ ಪ್ರಕ್ರಿಯೆಯಲ್ಲೇ ಕಾಲ ಕಳೆಯುತ್ತಿದೆ ಹೊರತು ಕಾಮಗಾರಿಯ ಮುನ್ಸೂಚನೆ ಕಾಣುತ್ತಿಲ್ಲ. ಹೊಂಡಗಳಿಂದ ರಸ್ತೆಯನ್ನೇ ಹುಡುಕುವಂತಾಗಿದೆ. ಹೊಂಡಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯ ದುರವಸ್ಥೆಯಿಂದಾಗಿ ವಾಹನಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ. ಇದೇ ಸ್ಥಿತಿ ಮುಂದುವರೆದರೆ ರಸ್ತೆಗಳು ಸಾವಿನ ಕೂಪವಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಆದ್ದರಿಂದ ಈ ಬಗ್ಗೆ ಅತಿ ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕು.

ವಿಷ್ಣುಪ್ರಸಾದ್ ಕೊಡಿಬೆಟ್ಟು

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಉಡುಪಿ ಬುಲೆಟಿನ್’ ಇಮ್ಪ್ಯಾಕ್ಟ್; ಹೆದ್ದಾರಿಯ ಮೇಲೆ ಬಿದ್ದಿದ್ದ ಮಣ್ಣಿನ ರಾಶಿ ತೆರವು

ಉಡುಪಿ ಬುಲೆಟಿನ್, ಜ.6: ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ಸಂತೆಕಟ್ಟೆಯ ಆಶೀರ್ವಾದ...

ಇಂದ್ರಾಳಿ ರೈಲ್ವೇ ಮೇಲ್ಸೆತುವೆ ಕಾಮಗಾರಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ಸೂಚನೆ

ಉಡುಪಿ, ಜ.6: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ನಿಗಧಿತ ಕಾಲಾವಧಿಯಲ್ಲಿ ಪೂರ್ಣಗೊಳಿಸದೇ...

ಬಾರಕೂರು: ಅಂತರ ಕಾಲೇಜು ಬೆಸ್ಟ್ ಟ್ಯಾಲೆಂಟ್ ಅವಾರ್ಡ್, ವಿಡಿಯೋ ಮೇಕಿಂಗ್ ಸ್ಪರ್ಧೆ

ಬಾರಕೂರು, ಜ.6: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರ...

ಮಣಿಪಾಲ ಕೆ.ಎಂ.ಸಿ: ಮಧುಮೇಹಿಗಳಿಗೆ ಶೈಕ್ಷಣಿಕ ಕಾರ್ಯಕ್ರಮ

ಮಣಿಪಾಲ, ಜ.6: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಭಾರತ ಸರ್ಕಾರದ ಅನುದಾನಿತ...
error: Content is protected !!