Friday, January 10, 2025
Friday, January 10, 2025

ಹೇರೂರು, ಬಾರ್ಕೂರು, ಉಪ್ಪೂರು ನದಿಗಳಿಗೆ ತ್ಯಾಜ್ಯ ಎಸೆಯುವವರ ಸಂಖ್ಯೆಯಲ್ಲಿ ಹೆಚ್ಚಳ; ಕಠಿಣ ಕ್ರಮಕ್ಕೆ ಪರಿಸರವಾದಿಗಳ ಆಗ್ರಹ

ಹೇರೂರು, ಬಾರ್ಕೂರು, ಉಪ್ಪೂರು ನದಿಗಳಿಗೆ ತ್ಯಾಜ್ಯ ಎಸೆಯುವವರ ಸಂಖ್ಯೆಯಲ್ಲಿ ಹೆಚ್ಚಳ; ಕಠಿಣ ಕ್ರಮಕ್ಕೆ ಪರಿಸರವಾದಿಗಳ ಆಗ್ರಹ

Date:

ಉಡುಪಿ, ಅ.27: ನದಿ ಎಂದರೆ ನಮಗೆಲ್ಲರಿಗೂ ಅತ್ಯಂತ ಪೂಜನೀಯ. ಜನರಿಗೆ ಕುಡಿಯುವ ನೀರಿಗೆ, ಕೃಷಿ ಕಾರ್ಯಕ್ಕೆ, ಜಲಚರಗಳ ಬದುಕಿಗೆ, ಪ್ರವಾಸೋದ್ಯಮಕ್ಕೆ ಮಹತ್ವದ ಪಾತ್ರ ವಹಿಸುತ್ತಿರುವ ಜಿಲ್ಲೆಯ ನದಿಗಳಲ್ಲಿ ತ್ಯಾಜ್ಯ ಎಸೆದು ಇಲ್ಲಿಯ ನೀರನ್ನು ಕಲುಷಿತಗೊಳಿಸುವ ಪಾಪ ಕಾರ್ಯ ಮಾಡುತ್ತಿರುವ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದೆ. ಬೆಳಿಗ್ಗೆ ಕಛೇರಿಗೆ ಹೋಗುವ ಸಂದರ್ಭದಲ್ಲಿ, ಎಡಗೈಯಲ್ಲಿ ತ್ಯಾಜ್ಯ ತುಂಬಿದ ಪೊಟ್ಟಣ ಹಿಡಿದು ಉಪ್ಪೂರು, ಹೇರೂರು ಮತ್ತು ಬಾರಕೂರು ಸೇರಿದಂತೆ ಉಡುಪಿ ಜಿಲ್ಲೆಯ ನದಿಗಳಲ್ಲಿ ಮಾಲಿನ್ಯ ಉಂಟುಮಾಡಲು ಕೊಡುಗೆ ನೀಡುತ್ತಿರುವವರನ್ನು ಕಾಣಬಹುದು. ಊಟಕ್ಕೆ ಅನ್ನ ತಿನ್ನುವವರು ಈ ಕೆಲಸ ಮಾಡಲ್ಲ ಎಂದರೆ ಅತಿಶಯವಾಗದು. ಶಿಕ್ಷಣವಿದ್ದರೂ, ಸೌಲಭ್ಯವಿದ್ದರೂ ತ್ಯಾಜ್ಯ ವಿಲೇವಾರಿ ಮಾಡಲು ದಾರಿದ್ರ್ಯವಿರುವವರು ಕಳ್ಳರ ಹಾಗೆ ಕದ್ದು ಮುಚ್ಚಿ ನದಿಗೆ ತ್ಯಾಜ್ಯ ಪೊಟ್ಟಣಗಳನ್ನು ಎಸೆಯುವ ದೃಶ್ಯ ಕಣ್ತುಂಬಿಕೊಳ್ಳಬೇಕಾದರೆ ಬೆಳಿಗ್ಗೆ ಸುಮಾರು 7.30 ಗಂಟೆಯಿಂದ 10 ಗಂಟೆಯವರೆಗೆ ಈ ಸೇತುವೆಗಳ ಬಳಿ ನಿಂತರೆ ಸಾಕು.

ಇನ್ನೂ ಕೆಲವರು ಸಹ ಸವಾರರ ಜತೆ ಬಂದು ‘ನಮಗೆ ಯಾರ ಭಯವೂ ಇಲ್ಲ’ ಎಂಬಂತೆ ಕಸದ ತೊಟ್ಟಿಗೆ ತ್ಯಾಜ್ಯ ಎಸೆಯುವಂತೆ ಗೋಣಿಚೀಲಗಳಲ್ಲಿ ತುಂಬಿಸಿದ ತ್ಯಾಜ್ಯ ನದಿಯಲ್ಲಿ ಸುರಿಸುವ ದೃಶ್ಯ ಸರ್ವೇಸಾಮಾನ್ಯವಾಗಿದೆ. ಸ್ಥಳೀಯ ಆಡಳಿತ ವತಿಯಿಂದ ತ್ಯಾಜ್ಯವನ್ನು ಕೈತೋಟ, ಗಿಡಮರಗಳಿಗೆ ಹಾಕಲು, ಪೈಪ್ ಕಾಂಪೋಸ್ಟ್ ಮಾಡಲು ಸರಣಿ ಕಾರ್ಯಕ್ರಮಗಳು ನಡೆದು ಜಾಗೃತಿ ಕಾರ್ಯಕ್ರಮಗಳು ನಡೆದರೂ ಕೂಡ ಇಂತಹ ಘಟನೆಗಳು ನಡೆಯುತ್ತಿರುವುದು ಬೇಸರದ ಸಂಗತಿ. ಕೋಳಿ ತ್ಯಾಜ್ಯ, ಸೀಸದ ಬಾಟಲ್, ಟ್ಯೂಬ್ ಲೈಟ್, ಪ್ಲಾಸ್ಟಿಕ್ ವಸ್ತುಗಳು ಇತ್ಯಾದಿ ಇತ್ಯಾದಿಗಳನ್ನು ‘ಬಾಗಿನ ಸಮರ್ಪಣೆ’ ಮಾಡುವ ಶೈಲಿಯನ್ನು ನದಿಗೆ ಅರ್ಪಿಸುವ ಇಂತಹ ಖದೀಮರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕಾರ್ಯವನ್ನು ಸ್ಥಳೀಯಾಡಳಿತ ಮಾಡಬೇಕು ಎಂದು ಸ್ಥಳೀಯ ಪರಿಸರವಾದಿಗಳು ಆಗ್ರಹಿಸಿದ್ದಾರೆ. ಇನ್ನಾದರೂ ಸ್ಥಳೀಯಾಡಳಿತ ಎಚ್ಚೆತ್ತುಕೊಳ್ಳದಿದ್ದರೆ ಅತಿ ಶೀಘ್ರದಲ್ಲಿ ನಮ್ಮ ನದಿಗಳು ಮಲಿನಗೊಳ್ಳುವಲ್ಲಿ ಎರಡು ಮಾತಿಲ್ಲ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾವಿತ್ರಿ ಬಾ ಪುಲೆ ಜನ್ಮದಿನಾಚರಣೆ

ಕುಂದಾಪುರ, ಜ.9: ಸರಕಾರಿ ಪದವಿಪೂರ್ವ ಕಾಲೇಜು ನಾವುಂದ ಇಲ್ಲಿ ರೇಂಜರ್ಸ್ ಮತ್ತು...

ವಿವಿಧ ಚಟುವಟಿಕೆಗಳಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ

ಉಡುಪಿ, ಜ.9: ಕೃಷಿ ಇಲಾಖೆಯ ವತಿಯಿಂದ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ...

ಪ್ರತಿಭಾ ಕಾರಂಜಿಯಲ್ಲಿ ಸಾಯ್ಬ್ರಕಟ್ಟೆ ಶಾಲೆಯ ಪ್ರಣೀತಾ ಪ್ರಥಮ

ಕೋಟ, ಜ.9: ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೈದೆಬೆಟ್ಟು...

ಜೇಸಿಐ ಶಂಕರನಾರಾಯಣ ಪದಾಧಿಕಾರಿಗಳ ಆಯ್ಕೆ

ಶಂಕರನಾರಾಯಣ, ಜ.9: ಜೇಸಿಐ ಶಂಕರನಾರಾಯಣ ಇದರ 2025ನೇ ಸಾಲಿನ ಅಧ್ಯಕ್ಷರಾಗಿ ಪ್ರವೀಣ್...
error: Content is protected !!