Saturday, October 26, 2024
Saturday, October 26, 2024

ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆಯೊಂದಿಗೆ ಸಹಕರಿಸಿ

ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆಯೊಂದಿಗೆ ಸಹಕರಿಸಿ

Date:

ಉಡುಪಿ, ಅ.25: ಉಡುಪಿ ನಗರಸಭೆಯು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ವಿವಿಧ ಮಾನದಂಡಗಳನ್ನು ಅಳವಡಿಸಿಕೊಂಡು ಘನತ್ಯಾಜ್ಯ ನಿಯಮ 2016 ರನ್ನು ಅನುಷ್ಠಾನಗೊಳಿಸುತ್ತಿದ್ದು, ಶೇಕಡಾ ನೂರರಷ್ಟು ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಕಾರ್ಯವನ್ನು ಅನುಷ್ಠಾನ ಮಾಡಲು ಕ್ರಮ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಉಡುಪಿ ನಗರಸಭೆ ವತಿಯಿಂದ ರೆಡ್ಯೂಸ್ – ಮನೆಯಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಡಿತಗೊಳಿಸುವ ಬಗ್ಗೆ, ರಿಯ್ಯೂಸ್-ವಿವಿಧ ತ್ಯಾಜ್ಯಗಳನ್ನು ಮರುಬಳಕೆ ಮಾಡುವ ಬಗ್ಗೆ ಹಾಗೂ ರಿಸೈಕಲ್- ತ್ಯಾಜ್ಯಗಳ ಪುನರ್ ಬಳಕೆ ಮಾಡುವ ವಿಧಾನಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಉಪಯೋಗಿಸಿಕೊಂಡು ಗೊಬ್ಬರ ತಯಾರಿಸಿ ಮನೆ ಅಂಗಳದ ಗಾರ್ಡನ್‌ಗೆ ಬಳಕೆ ಮಾಡಿಕೊಳ್ಳುವ ವಿಧಾನವನ್ನು ಹೋಂ ಕಾಂಪೋಸ್ಟಿಂಗ್ (ಪೈಪ್ ಕಾಂಪೂಸ್ಟಿಂಗ್, ಬಿನ್ ಕಾಂಪೋಸ್ಟಿಂಗ್ ಅಥಾವ ಡ್ರಮ್ ಕಾಂಪೋಸ್ಟಿಂಗ್) ಎಂದು ಕರೆಯಲಾಗುವುದು. ಈಗಾಗಲೇ ನಗರದ 5038 ಮನೆಗಳಲ್ಲಿ ಹೋಂ ಕಾಂಪೋಸ್ಟಿಂಗ್ ವಿಧಾನವನ್ನು ಯಶಸ್ವಿಯಾಗಿ ಅಳವಡಿಸಿಕೊಂಡು ನಗರಸಭೆಯೊಂದಿಗೆ ತ್ಯಾಜ್ಯ ನಿರ್ವಹಣೆಯಲ್ಲಿ ಸಹಕರಿಸುತ್ತಿದ್ದು, ಈ ಕುರಿತು ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಛೇರಿಯ ಆರೋಗ್ಯ ಶಾಖೆಯನ್ನು ಸಂಪರ್ಕಿಸಬಹುದಾಗಿದೆ.

ನಗರಸಭೆ ವ್ಯಾಪ್ತಿಯ ಸಾರ್ವಜನಿಕರು ಸದರಿ ಪದ್ಧತಿಯನ್ನು ಅಳವಡಿಸಿಕೊಂಡು ಘನತ್ಯಾಜ್ಯ ವಸ್ತುಗಳ ಸಮರ್ಪಕ ನಿರ್ವಹಣೆಗೆ ನಗರಸಭೆಯೊಂದಿಗೆ ಕೈಜೋಡಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಾಗೂ ಸ್ವಚ್ಛ ಸರ್ವೇಕ್ಷಣಾ-2024 ರಲ್ಲಿ ಭಾಗವಹಿಸಿ ನಗರಸಭೆ ಉತ್ತಮ ಶ್ರೇಯಾಂಕ ಪಡೆಯಲು ಸಂಪೂರ್ಣ ಸಹಕಾರ ನೀಡುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇಂದಿನ (25-10-2024) ಚಿನ್ನದ ದರ

Gold 22 CT- Rs. 7295 Gold 24 CT- Rs. 7808 Silver-...

ರಕ್ತದಾನ ಶ್ರೇಷ್ಠದಾನ: ಡಾ. ಗಣನಾಥ ಎಕ್ಕಾರು

ಉಡುಪಿ, ಅ.25: ಯಾವುದೇ ದಾನಕ್ಕಿಂತಲೂ ರಕ್ತದಾನ ಶ್ರೇಷ್ಠದಾನವಾಗಿದ್ದು, ಅಪಾಯದಲ್ಲಿರುವವರ ಅಮೂಲ್ಯ ಜೀವವನ್ನು...

ಕಟ್ಟಡಗಳ ಭಗ್ನ ಅವಶೇಷಗಳನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಲು ಸೂಚನೆ

ಉಡುಪಿ, ಅ.25: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡಗಳ ಭಗ್ನ ಅವಶೇಷಗಳನ್ನು ಎಲ್ಲೆಂದರಲ್ಲಿ...

ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ

ಉಡುಪಿ, ಅ.25: ರಾಜ್ಯ ಸರ್ಕಾರದ ಆದೇಶದಂತೆ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಾ...
error: Content is protected !!