Sunday, January 19, 2025
Sunday, January 19, 2025

ಧೈರ್ಯ, ಶಿಸ್ತು, ಶೌರ್ಯದಲ್ಲಿ ಭಾರತದ ಸೇನೆಗೆ ಯಾವುದೇ ಸೇನೆ ಸರಿಸಾಟಿಯಲ್ಲ: ಲೆಫ್ಟಿನೆಂಟ್ ಭರತ್ ಬಾಬು ದೇವಾಡಿಗ

ಧೈರ್ಯ, ಶಿಸ್ತು, ಶೌರ್ಯದಲ್ಲಿ ಭಾರತದ ಸೇನೆಗೆ ಯಾವುದೇ ಸೇನೆ ಸರಿಸಾಟಿಯಲ್ಲ: ಲೆಫ್ಟಿನೆಂಟ್ ಭರತ್ ಬಾಬು ದೇವಾಡಿಗ

Date:

ಕುಂದಾಪುರ, ಸೆ.23: ಸಂಸ್ಥೆಯಲ್ಲಿ ಕಳೆದ ತನ್ನ ಪ್ರಾಥಮಿಕ ಶಿಕ್ಷಣದ ಕ್ಷಣಗಳನ್ನು ಮೆಲುಕು ಹಾಕುತ್ತಾ, ನನ್ನ ಹಿಂದಿನ ಈ ಸಾಧನೆಗೆ ಅಂದಿನ ನನ್ನ ಪ್ರಾಥಮಿಕ ಶಿಕ್ಷಕರು ನೀಡಿದ ಶಿಸ್ತು, ಸಂಯಮ, ಪ್ರೇರಣೆಯೇ ಕಾರಣ. ಧೈರ್ಯ, ಶಿಸ್ತು, ಶೌರ್ಯದಲ್ಲಿ ಭಾರತದ ಸೈನ್ಯಕ್ಕೆ ಪ್ರಪಂಚದ ಯಾವುದೇ ಸೈನ್ಯ ಸರಿಸಾಟಿಯಲ್ಲ ಎಂದು ಇತ್ತೀಚಿಗಷ್ಟೇ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ಸ್ಥಾನ ಪಡೆದಿರುವ ಸಂಸ್ಥೆಯ ಹಳೆ ವಿದ್ಯಾರ್ಥಿ ಲೆಫ್ಟಿನೆಂಟ್ ಭರತ್ ಬಾಬು ದೇವಾಡಿಗ ಹೇಳಿದರು. ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್‌ ಎಮ್‌ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಜೈ ಹಿಂದ್‌ ಟಾಕ್ ವಿದ್ ಲೆಫ್ಟಿನೆಂಟ್ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಇವರೊಂದಿಗೆ ಹಳೆ ವಿದ್ಯಾರ್ಥಿಗಳಾದ ಅಜಯ್ ಮತ್ತು ರೋಹಿತ್ ಬಾಬು ದೇವಾಡಿಗ ಆಗಮಿಸಿದ್ದರು. ಲೆಪ್ಟಿನೆಂಟ್‌ ರವರ ಸಾಧನೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್, ಉಪಪ್ರಾಂಶುಪಾಲೆ ಶುಭಾ ಕೆ ಎನ್‌ ಮತ್ತು ಇತರ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಕಿ ಗಾಯತ್ರಿ ಕಾರ್ಯಾಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!