ಹಿರಿಯಡಕ, ಸೆ.17: ಹಿಂದೂ ಯುವಸೇನೆ ಹಿರಿಯಡಕ ಶಾಖೆ ವತಿಯಿಂದ ರಕ್ತನಿಧಿ ವಿಭಾಗ, ಜಿಲ್ಲಾಸ್ಪತ್ರೆ ಉಡುಪಿ ಸಹಯೋಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಹಿರಿಯಡಕ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಹಿಂದೂ ಯುವಸೇನೆ ಗೌರವಾಧ್ಯಕ್ಷ ಶೇಖರ್ ಶೆಟ್ಟಿ, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ಅಜಿತ್ ಕೊಡವೂರ್, ರಕ್ತನಿಧಿ ವಿಭಾಗ ಜಿಲ್ಲಾಸ್ಪತ್ರೆ ಉಡುಪಿ ಇದರ ಡಾ. ವೀಣಾ ಕುಮಾರಿ, ಹಿಂದೂ ಯುವ ಸೇನೆ ನಗರ ಅಧ್ಯಕ್ಷ ಸುನಿಲ್ ನೇಜಾರ್, ಸಲಹಾ ಸಮಿತಿಯ ಸನತ್ ಸಾಲ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಂದರ್, ಹಿಂದೂ ಯುವಸೇನೆ ಹಿರಿಯಡ್ಕ ಶಾಖೆ ಅಧ್ಯಕ್ಷ ಅಶೋಕ್ ಶೆಟ್ಟಿ, ಉದ್ಯಮಿ ಅಮರನಾಥ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.