ಉಡುಪಿ, ಸೆ.14: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ವಿದ್ಯೋದಯ ಪದವಿಪೂರ್ವ ಕಾಲೇಜು ಉಡುಪಿ ಇಲ್ಲಿ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಪ್ರೀತಮ್. ಟಿ. ಮನೆಕೋಟೆ ಇವರು ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಬಿ.ತಿಪ್ಪೆಸ್ವಾಮಿ ಮತ್ತು ವಿಜಯಲಕ್ಷ್ಮಿ ಟಿ ದಂಪತಿಗಳ ಪುತ್ರ. ಇವರ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಸಿ.ಇ.ಒ ಮತ್ತು ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಯೋಗ ಸ್ಪರ್ಧೆ: ಜ್ಞಾನಸುಧಾ ವಿದ್ಯಾರ್ಥಿ ಪ್ರೀತಮ್ ಪಿ.ಎಂ. ರಾಜ್ಯಮಟ್ಟಕ್ಕೆ
ಯೋಗ ಸ್ಪರ್ಧೆ: ಜ್ಞಾನಸುಧಾ ವಿದ್ಯಾರ್ಥಿ ಪ್ರೀತಮ್ ಪಿ.ಎಂ. ರಾಜ್ಯಮಟ್ಟಕ್ಕೆ
Date: