ಉಡುಪಿ, ಆ.23: ಉಡುಪಿ ನಗರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಪ್ರಭಾಕರ್ ಪೂಜಾರಿ ಗುಂಡಿಬೈಲು ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ರಜನಿ ಹೆಬ್ಬಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್ ಚಂದ್ರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ನೂತನ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ಅವರು ಗುಂಡಿಬೈಲು ವಾರ್ಡಿನಿಂದ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ನೂತನ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಅವರು ಒಳಕಾಡು ವಾರ್ಡಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 35 ಸಂಖ್ಯಾಬಲವಿರುವ ಉಡುಪಿ ನಗರಸಭೆಯಲ್ಲಿ, ಬಿಜೆಪಿ 32 ಹಾಗೂ ಕಾಂಗ್ರೆಸ್ 3 ಸದಸ್ಯರನ್ನು ಹೊಂದಿದೆ.
ಉಡುಪಿ ನಗರಸಭೆಯ ನೂತನ ಅಧ್ಯಕ್ಷರಾಗಿ ಪ್ರಭಾಕರ್ ಪೂಜಾರಿ; ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಅವಿರೋಧ ಆಯ್ಕೆ
ಉಡುಪಿ ನಗರಸಭೆಯ ನೂತನ ಅಧ್ಯಕ್ಷರಾಗಿ ಪ್ರಭಾಕರ್ ಪೂಜಾರಿ; ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಅವಿರೋಧ ಆಯ್ಕೆ
Date: